ವಾಜಪೇಯಿ ಸ್ಮರಣಾರ್ಥ 101 ಗಿಡನೆಡುವ ಕಾರ್ಯಕ್ರಮ

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ 101 ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಗತಿಪರ ರೈತ ಟಿ.ಜಿ.ಹನುಮಂತರಾಜು ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ನಮ್ಮ ದೇಶದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದ ಮೊದಲ ಪ್ರಧಾನ ಮಂತ್ರಿಯಾಗಿದ್ದರು.ಅವರು ಎಲ್ಲಾ ಪಕ್ಷದ ಮುಖಂಡರ ಜೊತೆ ಸ್ನೇಹದಿಂದ ವರ್ತಿಸಿ ಅಜಾತಶತƒ ಎಮದು ಹೆಸರು ಪಡೆದಿದ್ದರು. ದೇಶದ ಬಗ್ಗೆ ಆಪಾರ ಕಾಳಜಿ ಉಳ್ಲ ಅವರ ಹೆಸರಿನಲ್ಲಿ ಪ್ರಕೃತಿ ಸಂರಕ್ಷಣೆಯ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ವನಭೋಜನವನ್ನು ಆಯೋಜಿಸಲಾಗಿತ್ತು. ಈ ವೇಳೆ ದೊಡ್ಡತುಮಕೂರು ಗ್ರಾಪಂ ಉಪಾಧ್ಯಕ್ಷ ರವಿಕುಮಾರ್,ಮಾಜಿ ಅಧ್ಯಕ್ಷರಾದ ಟಿ.ಜಿ.ಮಂಜುನಾಥ್, ಮುನಿರಾಜಪ್ಪ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆನಂದ್,ಮುಖಂಡರಾದ ಲೋಕೇಶ್,ಟಿ.ಎನ್ನವೀನ್, ಅಜಯ್,ಪ್ರಮೋದ್,ಸುರೇಶ್ ಕುಮಾರ್,ಚಲಪತಿ, ಪುರುಷೋತಮ್,ಪ್ರಜ್ವಲ್,ಮೋಹನ್,ನಾಗರಾಜ್,ಲಕ್ಷ್ಮಣ,ಯಲ್ಲಪ್ಪ ಮತ್ತಿತರರಿದ್ದರು.