CONNECT WITH US  

ಕ್ಯಾಂಟರ್‌ಗೆ ಬೈಕ್‌ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕ್ಯಾಂಟರ್‌ಗೆ ಬೈಕ್‌ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ತಾಳೆಕೆರೆ ಗೇಟ್‌ ಬಳಿ ನಡೆದಿದೆ. ಬೈಕ್‌ ಸವಾರರಾದ ಅರುಣ್‌ (30), ಹರೀಶ್‌ (27) ಮೃತ ದುರ್ದೈವಿಗಳು.

ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ತಾಳೆಕೆರೆ ಗೇಟ್‌ ಮುಖಾಂತರ ಮಧುಗಿರಿಯಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕ್ಯಾಂಟರ್‌ಗೆ ಬೈಕ್‌ ಡಿಕ್ಕಿ ಹೊಡೆದುಕೊಂಡ ಕಾರಣ ದುರ್ಘ‌ಟನೆ ಸಂಭವಿಸಿದೆ.  ಅಪಘಾತದಲ್ಲಿ ಮೃತಪಟ್ಟಿರುವ ಇಬ್ಬರು ಮದ್ಯಪಾನ ಮಾಡಿದ್ದರೆಂದು ಪೊಲೀಸರ ಪರಿಶೀಲನೆ ತಿಳಿದುಬಂದಿದೆ. ಈ ಸಂಬಂಧ ನೆಲಮಂಗಲ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

Trending videos

Back to Top