CONNECT WITH US  

ಶಾರೀರಿಕ ಬೆಳವಣಿಗೆಗೆ ಕ್ರೀಡಾಭ್ಯಾಸ ಸಹಕಾರಿ

ಹೊಸಕೋಟೆ: ವಿದ್ಯಾರ್ಥಿಗಳು ಶಾರೀರಕವಾಗಿ ಸದೃಢರಾಗಿ ಬೆಳವಣಿಗೆ ಹೊಂದಲು ಕ್ರೀಡಾಭ್ಯಾಸ ಸಹಕಾರಿ ಎಂದು ಶಾಸಕ ಎನ್‌.ನಾಗರಾಜ್‌ ಹೇಳಿದರು. ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.  

ವಿದ್ಯಾರ್ಥಿಗಳು ಗುರಿ ಸಾಧನೆ, ಯಶಸ್ಸು ಗಳಿಸಲು ಶಿಸ್ತು, ಸಮಯಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.  ಕ್ರೀಡಾಭ್ಯಾಸಕ್ಕೆ ಸೌಲಭ್ಯ ಕಲ್ಪಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರಗಳು ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ್ದಲ್ಲಿ ಮಾತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿದೆ.

ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಸಮತೋಲನ ಬೆಳವಣಿಗೆಯೊಂದಿಗೆ ವಿಕಸನಕ್ಕೆ ಕ್ರೀಡಾಭ್ಯಾಸ ಪರಿಣಾಮಕಾರಿ ಚಟುವಟಿಕೆ. ಇಂತಹ ಕ್ರೀಡಾಕೂಟಗಳನ್ನು ಏರ್ಪಡಿಸಲು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಅಗತ್ಯ ಸಹಕಾರ ನೀಡಬೇಕು ಎಂದರು. 

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎನ್‌.ಕನ್ನಯ್ಯ, 3 ದಿನಗಳ ಅವಧಿಯ ಕ್ರೀಡಾಕೂಟದಲ್ಲಿ 14 ಮತ್ತು 17 ವರ್ಷ ವಯೋಮಿತಿಯ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುಮಾರು 800 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ತಾಪಂ ಅಧ್ಯಕ್ಷ ವಿ.ಸಿ.ಜಯದೇವಯ್ಯ, ನಗರಸಭೆ ಅಧ್ಯಕ್ಷ ಎನ್‌.ಟಿ.ಹೇಮಂತಕುಮಾರ್‌, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್‌.ಎನ್‌.ಎಸ್‌.ಹುಸೇನ್‌ ಮತ್ತಿತರರಿದ್ದರು.

Trending videos

Back to Top