CONNECT WITH US  

5 ಲಕ್ಷ ರೂ ಸಹಿತ ನಾಪತ್ತೆಯಾದ ಯುವತಿಯ ಶವ ಮೋರಿಯಲ್ಲಿ ಪತ್ತೆ 

ಚಿಕ್ಕಬಳ್ಳಾಪುರದಲ್ಲಿ ಹಣಕ್ಕಾಗಿ ಯುವತಿಯ ಹತ್ಯೆ ನಡೆಯಿತೆ? 

ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ಹರಳೂರು ನಾಗೇನಹಳ್ಳಿಯಿಂದ ನಾಪತ್ತೆಯಾಗಿದ್ದ 22 ವರ್ಷದ ಯುವತಿಯ ಶವ ಗೌರಿ ಬಿದನೂರು -ಗುಡಿಬಂಡೆ ರಸ್ತೆಯ ಮೋರಿಯೊಂದರಲ್ಲಿ ಕೊಳೆತ  ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ. 

ಹತ್ಯೆಗೀಡಾದ ಯುವತಿ ಭಾಗ್ಯಶ್ರಿ ಎನ್ನುವವರಾಗಿದ್ದು, ಕನ್ನಮಂಗಲಪಾಳ್ಯದ ಮನಿ ಟ್ರಾನ್ಸ್‌ಫ‌ರ್‌ ಕಂಪೆಯಿಂದ ದೇವನಹಳ್ಳಿಗೆ 5 ಲಕ್ಷ ರೂಪಾಯಿ ಹಣ ಕೊಂಡೊಯ್ಯುತ್ತಿದ್ದ ವೇಳೆ ನಾಪತ್ತೆಯಾಗಿದ್ದರು. ಈ ಸಂಬಂಧ ಪೋಷಕರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

ಯುವತಿಯ ಶವ ಪತ್ತೆಯಾದುದನ್ನು ತಾಳೆ ಹಾಕಿ ಪೊಲೀಸರು ತನಿಖೆ ನಡೆಸಿದಾಗ ಮೃತದೇಹ ಭಾಗ್ಯಶ್ರಿಯದ್ದು ಎಂದು ಧೃಡಪಟ್ಟಿದೆ. 

ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕಾರ್ತಿಕ್‌ ರೆಡ್ಡಿ ಸಹಿತ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಭಾಗ್ಯಶ್ರಿಯನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆಗೈದು ಮೋರಿಯಲ್ಲಿ ಬಿಸಾಕಿ ಪರಾರಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.  


Trending videos

Back to Top