CONNECT WITH US  

ದಲಿತ ಯುವತಿ ಹತ್ಯೆಕೋರರನ್ನು ಬಂಧಿಸಲು ಆಗ್ರಹ

ದೇವನಹಳ್ಳಿ: ದಲಿತ ಯುವತಿ ಭಾಗ್ಯಶ್ರೀಯನ್ನು ಹಣದೊಂದಿಗೆ ಅಪಹರಣ ಮಾಡಿ ಹತ್ಯೆಗೊಳಿಸಿದ ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಮತ್ತು ತಾಲೂಕು ಪ್ರಜಾಮೋಚನ ಚ‌ಳವಳಿ (ಸ್ವಾಭಿಮಾನ) ವತಿಯಿಂದ ನಗರದ ಎಸಿಪಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.

ದಲಿತ ಯುವತಿ ಭಾಗ್ಯಶ್ರೀಯವರು ಅಚೈನ್ಸ್‌ ಎಂಟರ್‌ಪ್ರçಸಸ್‌ ನ ಫೈನಾನ್ಸ್‌ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸೆ.2 ರಂದು ಬೆಳಗ್ಗೆ ಯಿಂದ ಸಂಜೆವರೆಗೂ ಹಣಕಾಸಿನ ಕಾರ್ಯ ನಿರ್ವಹಿಸಿ ಸಂಗ್ರಹವಾಗಿದ್ದ 5 ಲಕ್ಷಕ್ಕೂ ಹೆಚ್ಚಿನ ಹಣವನ್ನು ಸಂಜೆ ನಿಗದಿತ ಬ್ಯಾಂಕಿಗೆ ಹಣ ಕಟ್ಟಲು ಬಸ್‌ ಹತ್ತಲು ಬರುತ್ತಿರುವಾಗ ಬಸ್‌ ತಪ್ಪಿದ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಹಣಕಾಸಿನ ವಹಿವಾಟು ಗಮನಿಸುತ್ತಿದ್ದ ದುಷ್ಕರ್ಮಿಗಳು ಕನ್ನಮಂಗಲ ಪಾಳ್ಯ ಗೇಟ್‌ ನಿಂದ ಯುವತಿಯನ್ನು ಹಣದೊಂದಿಗೆ ಅಪಹರಣ ಮಾಡಿದ್ದಾರೆಂದು ದೂರಿದರು.

ಹಾಗೆಯೇ ಗೌರಿಬಿದನೂರು ಠಾಣೆ ವ್ಯಾಪ್ತಿಯ ಟಿ.ವಾಟದ ಹೊಸಹಳ್ಳಿ ಬಳಿ ಕುತ್ತಿಗೆಗೆ ವೈಯರ್‌ನಿಂದ ಬಿಗಿದು ಹತ್ಯೆ ಮಾಡಿದ್ದಾರೆ. ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಅಚೈನ್ಸ್‌ ಎಂಟರ್‌ಪ್ರçಸಸ್‌ ನ ಫೈನಾನ್ಸ್‌ ಕಂಪನಿ ಮುಚ್ಚಬೇಕು ಎಂದು ಆಗ್ರಹಿಸಿದರು.

ಪ್ರಜಾಮೋಚನ ಚ‌ಳವಳಿ (ಸ್ವಾಭಿಮಾನ) ರಾಜ್ಯಾಧಕ್ಷ ಮುನಿಆಂಜನಪ್ಪ, ಮೃತ ಸಂತ್ರಸ್ತ ಕುಟುಂಬಕ್ಕೆ ಅಗತ್ಯ ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಸರ್ಕಾರಿ ಉದ್ಯೋಗ ದೊರಕಿಸಿಕೊಡಬೇಕು.

ಅನಧಿಕೃತವಾಗಿ ನಡೆಸುತ್ತಿರುವ ಅಚೈನ್ಸ್‌ ಎಂಟರ್‌ಪ್ರçಸಸ್‌ ನ ಫೈನಾನ್ಸ್‌ ಕಂಪನಿ ಮುಚ್ಚಬೇಕೆಂದರು. ಇದೇ ವೇಳೆ ಬೆಂಗಳೂರು ವಿಭಾಗೀಯ ಶಾಖೆ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಅಧ್ಯಕ್ಷ ಹನುಮಣ್ಣ ಗೊಳ್ಯ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಧು ಪ್ರಕಾಶ್‌, ತಾಲೂಕು ಅಧ್ಯಕ್ಷ ಸಿದ್ದಯ್ಯ ಇದ್ದರು.

Trending videos

Back to Top