CONNECT WITH US  

ತಮ್ಮನಿಂದ ಪತಿಯ ಮರ್ಯಾದೆ ಹತ್ಯೆ; ನೊಂದ ಪತ್ನಿ ಆತ್ಮಹತ್ಯೆ

6 ತಿಂಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ಪ್ರೇಮಿಗಳು

ಮೀನಾ,ಹರೀಶ್‌

ದೇವನಹಳ್ಳಿ: ಪತಿಯ ಮರ್ಯಾದೆ ಹತ್ಯೆ ಬಳಿಕ ತೀವ್ರವಾಗಿ ಮನನೊಂದಿದ್ದ ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿದಲೂರು ಗ್ರಾಮದಲ್ಲಿ ನಡೆದಿದೆ.

6 ತಿಂಗಳ ಹಿಂದೆ ಅಂತರ್ಜಾತಿ ಪ್ರೇಮ ವಿವಾಹವಾಗಿದ್ದ 28 ರ ಹರೆಯದ ಮೀನಾ ಎಂಬಾಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನವೆಂಬರ್‌ 21 ರಂದು ಪತಿ ಹರೀಶ್‌ನನ್ನು ಮೀನಾಳ ತಮ್ಮ  ಬರ್ಬರವಾಗಿ ಹತ್ಯೆಗೈದಿದ್ದ. 

ಹತ್ಯೆಗೀಡಾಗಿದ್ದ ಹರೀಶ್‌ ಮತ್ತು ಮೀನಾ ಸಹೋದರ ವಿನಯ್‌ ಇಬ್ಬರು ಸ್ನೇಹಿತರಾಗಿದ್ದರು. ವಿನಯ್‌ ಮನೆಗೆ ಹರೀಶ್‌ ಆಗಮಿಸಿದಾಗ ಮೀನಾ ಪರಿಚಯವಾಗಿ ಪ್ರೇಮಾಂಕುರವಾಗಿತ್ತು.

ವಿನಯ್‌ ಮತ್ತು ಮನೆಯವರ ತೀವ್ರ ವಿರೋಧದ ನಡುವೆಯೂ ಮೀನಾ ಮತ್ತು ಹರೀಶ್‌ ವಿವಾಹವಾಗಿದ್ದರು.

ನವೆಂಬರ್‌ 21 ರಂದು ಹರೀಶ್‌ನನ್ನು ಚೀಟಿ ಹಣ ನೀಡಲೆಂದು ಗುಲಾಬಿ ತೋಟಕ್ಕೆ ಕರೆದೊಯ್ದು ವಿನಯ್‌ ಮಚ್ಚಿನಿಂದ ಕೊಚ್ಚಿ  ಬರ್ಬರವಾಗಿ ಹತ್ಯೆಗೈದು ಪೊಲೀಸರಿಗೆ ಶರಣಾಗಿದ್ದ.

ವಿಶ್ವನಾಥಪುರ ಪೊಲೀಸ್‌ ಠಾಣೆಯಲ್ಲಿ ಮೀನಾ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. 


Trending videos

Back to Top