ನೈಋತ್ಯ ಪದವೀಧರ, ಶಿಕ್ಷಕರ ಕ್ಷೇತ್ರ: ಮತದಾನ ಶಾಂತಿಯುತ 

Team Udayavani, Jun 9, 2018, 12:31 PM IST

9-june-10.jpg

ಬಂಟ್ವಾಳ : ವಿಧಾನ ಪರಿಷತ್‌ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಬಂಟ್ವಾಳದ ಮಿನಿ ವಿಧಾನಸೌಧದಲ್ಲಿ ಜೂ. 8ರಂದು ಮತದಾನ ನಡೆಯಿತು. ಪದವೀಧರ ಕ್ಷೇತ್ರದ ಒಟ್ಟು 2,539 ಮತದಾರದಲ್ಲಿ 1,768 ಮಂದಿ (928 ಪುರುಷರು, 840 ಮಹಿಳೆಯರು)ಮತ ಚಲಾಯಿಸಿದ್ದು, ಶೇ. 69. 06 ಫಲಿತಾಂಶ ದಾಖಲಾಗಿದೆ. ಶಿಕ್ಷಕರ ಕ್ಷೇತ್ರದ ಒಟ್ಟು 781 ಮತದಾರರಲ್ಲಿ 657 ಮಂದಿ (330 ಪುರುಷರು, 327 ಮಹಿಳೆಯರು) ಮತ ಚಲಾಯಿಸಿದ್ದು , ಶೇ. 84. 12 ಫಲಿತಾಂಶ ದಾಖಲಾಗಿದೆ ಎಂದು ಚುನಾವಣಾಧಿಕಾರಿ ಮಾಹಿತಿ ತಿಳಿಸಿದೆ.

ನೈಋತ್ಯ ಪದವೀಧರ ಕ್ಷೇತ್ರದ ಮತಗಟ್ಟೆಯನ್ನು ಕಚೇರಿ ಕಟ್ಟಡ ಕೊಠಡಿ ಸಂಖ್ಯೆ 1, 2 ಮತ್ತು ಶಿಕ್ಷಕರ ಕ್ಷೇತ್ರದ ಮತಗಟ್ಟೆಯನ್ನು ಕಚೇರಿ ಕಟ್ಟಡ ಕೊಠಡಿ ಸಂಖ್ಯೆ 3, 4ರಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮತದಾನ ಶಾಂತವಾಗಿತ್ತು. ಬೆಳಗ್ಗೆ 10ಕ್ಕೆ ಸ್ವಲ್ಪ ಹೊತ್ತಿನ ಸರತಿ ಸಾಲು ಕಂಡು ಬಂದಿತ್ತು.

ಬೆಳ್ತಂಗಡಿ ತಾಲೂಕು
ಬೆಳ್ತಂಗಡಿ ತಾಲೂಕಿನಲ್ಲಿ ಶಿಕ್ಷಕರ ಕ್ಷೇತ್ರದಿಂದ ಶೇ. 76.7 ಹಾಗೂ ಪದವೀಧರರ ಕ್ಷೇತ್ರದಿಂದ ಶೇ. 62.8 ಮತದಾನವಾಗಿದೆ. ಪದವೀಧರರ ಕ್ಷೇತ್ರದಿಂದ ಒಟ್ಟು 1,281 ಮತದಾರರಿದ್ದು, 805 ಮತಗಳು (451 ಪುರುಷರು, 354 ಮಹಿಳೆಯರು) ಚಲಾವಣೆಯಾಗಿವೆ. ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 953 ಮತದಾರರಿದ್ದು, 731 ಮಂದಿ (389 ಪುರುಷರು, 342 ಮಹಿಳೆಯರು) ಮತ ಚಲಾವಣೆ ಮಾಡಿದ್ದಾರೆ.

ಉತ್ತಮ ಮತದಾನ ನಡೆದಿದ್ದು ಬೆಳಗ್ಗಿನಿಂದಲೇ ಉತ್ತಮ ಮತದಾನ ನಡೆದಿದ್ದು, ಶಿಕ್ಷಕರು ಬೆಳಗ್ಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದರು. ತಾಲೂಕಿನ ವಿವಿಧ ಕಾಲೇಜುಗಳ ಮತದಾರರು ಚುನಾವಣೆಗೆ ಸ್ಪಂದಿಸಿದ್ದು, ಸಕ್ರಿಯವಾಗಿ ಭಾಗವಹಿಸಿದರು.

ಮುಜುಗರ ತಂದ ಕಸ
ಮಿನಿ ವಿಧಾನಸೌಧ ಆವರಣ ಹಾಗೂ ಹಳೆ ತಾಲೂಕು ಕಚೇರಿ ಬಳಿ ಅಲ್ಲಲ್ಲಿ ಪ್ಲಾಸ್ಟಿಕ್‌ ಹಾಗೂ ಕಸ ಬಿದ್ದುಕೊಂಡಿರುವುದು ಶಿಕ್ಷಕರಿಗೆ ಮುಜುಗರ ಉಂಟು ಮಾಡಿತು. ಕೆಲವರು ಬಹಿರಂಗವಾಗಿಯೇ ತಾಲೂಕು ಆವರಣದೊಳಗಿನ ಅವ್ಯವಸ್ಥೆಗೆ ಮರುಗಿದರು. ತಾಲೂಕು ಕೇಂದ್ರದಲ್ಲಿಯೇ ಹೀಗಾದರೆ ತಾಲೂಕಿನ ಇತರ ಪ್ರದೇಶಗಳ ಸ್ಥಿತಿ ಹೇಗಾಗಬೇಡ ಎಂಬ ಪ್ರಶ್ನೆಯನ್ನೂ ಹಾಕಿದರು.

ಹಳೆ ತಾಲೂಕು ಕಚೇರಿ ಬಳಿ ಗಿಡಗಳ ಚಟ್ಟಿ ಇಟ್ಟಿದ್ದು, ಗಿಡಗಳು ಸಮರ್ಪಕ ನಿರ್ವಹಣೆಯಿಲ್ಲದೆ ಸೊರಗಿತ್ತು. ಜತೆಗೆ ಅದರಕಲ್ಲಿಯೇ ಚಹಾ ಕುಡಿದ ಲೋಟಗಳನ್ನೂ ಎಸೆದಿರುವುದು ಕಂಡು ಬಂತು. ಮಿನಿ ವಿಧಾನ ಆವರಣದಲ್ಲಿ ನೀರಿನ ಬಾಟಲ್‌ಗ‌ಳ ರಾಶಿಯೇ ಕಂಡು ಬಂದಿದ್ದು, ಶಿಕ್ಷಕರ ತರ್ಕ ಸರಿಯಾಗಿದೆ ಎಂಬುದನ್ನು ಸಾರಿ ಹೇಳುತ್ತಿತ್ತು.

ಟಾಪ್ ನ್ಯೂಸ್

IND VS PAK

ಸಮಸ್ಯೆ ಸೌಹಾರ್ದವಾಗಿ ಬಗೆಹರಿಸಿಕೊಳ್ಳಿ: ಭಾರತ, ಪಾಕ್‌ಗೆ ಅಮೆರಿಕ ಸಲಹೆ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

Rajeev Chandrashekhar

Corrupt ಡಿಕೆಶಿ ಸರ್ಟಿಫಿಕೆಟ್‌ ಬೇಕಾಗಿಲ್ಲ: ಕೇಂದ್ರ ಸಚಿವ ರಾಜೀವ್‌ ತಿರುಗೇಟು

1-wqewqe

2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

IND VS PAK

ಸಮಸ್ಯೆ ಸೌಹಾರ್ದವಾಗಿ ಬಗೆಹರಿಸಿಕೊಳ್ಳಿ: ಭಾರತ, ಪಾಕ್‌ಗೆ ಅಮೆರಿಕ ಸಲಹೆ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.