CONNECT WITH US  

ಮಹಾಪುರುಷರ ಸಾಲಿಗೆ ಶರತ್‌: ಡಾ| ಭಟ್‌

ಕಂದೂರು: ದಿ| ಶರತ್‌ ಮಡಿವಾಳ ಸ್ಮಾರಕ ಲೋಕಾರ್ಪಣೆ

ಶರತ್‌ ಅವರ ಹಿರಿಯ ಸಹೋದರಿ ಮಲ್ಲಿಕಾ ದೀಪ ಬೆಳಗಿದರು.

ಬಂಟ್ವಾಳ: ಆರ್‌ಎಸ್‌ಎಸ್‌ ಕಾರ್ಯಕರ್ತ ದಿ| ಶರತ್‌ ಮಡಿವಾಳ ಬಲಿದಾನ ಎಂದಿಗೂ ವ್ಯರ್ಥವಾಗದು. ಅವರು ದೇಶಕ್ಕಾಗಿ ಬಲಿದಾನವಾದ ಮಹಾ ಪುರುಷರ ಸಾಲಿಗೆ ಸೇರುತ್ತಾರೆ. ಅವರ ಸ್ಮಾರಕ ನಮಗೆ ಪ್ರೇರಣೆ ಯಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಹೇಳಿದರು.

ಅವರು ಶನಿವಾರ ಸಜೀಪಮುನ್ನೂರು ಗ್ರಾಮದ ಕಂದೂರು ಶರತ್‌ ಮನೆಯ ವಠಾರದ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿ ನಿರ್ಮಿಸಿದ್ದ ಸ್ಮಾರಕವನ್ನು ಲೋಕಾ ರ್ಪಣೆ ಮಾಡಿ ಮಾತನಾಡಿದರು. ಶಾಸಕ ರಾಜೇಶ್‌ ನಾೖಕ್‌ ಉಳಿ ಪ್ಪಾಡಿಗುತ್ತು,  ಶರತ್‌ ಮಡಿವಾಳರ ತಂದೆ ತನಿಯಪ್ಪ ಮಡಿವಾಳ, ತಾಯಿ ನಳಿನಿ, ಸಹೋದರಿಯರಾದ ಮಲ್ಲಿಕಾ, ಚಂದ್ರಕಲಾ ಉಪಸ್ಥಿತರಿದ್ದರು. ಕೆ. ಹರಿಕೃಷ್ಣ ಬಂಟ್ವಾಳ, ಬಿ. ದೇವದಾಸ ಶೆಟ್ಟಿ, ನವೀನ್‌ ಸುವರ್ಣ, ಶರಣ್‌ ಪಂಪ್‌ವೆಲ್‌, ಸರಪಾಡಿ ಅಶೋಕ ಶೆಟ್ಟಿ, ಸಂತೋಷ್‌ ಕುಮಾರ್‌ ಬೋಳಿಯಾರ್‌, ಸಚಿನ್‌ ಮೆಲ್ಕಾರ್‌, ವಿನೋದ್‌ ಕೊಡಾ¾ಣ್‌, ಹಿರಿಯರಾದ ಪಾಂಡುರಂಗ ಪ್ರಭು, ರೇಖೀ ವಿಜಯ್‌, ಸದಾನಂದ ಶೆಟ್ಟಿ ರಂಗೋಲಿ, ಕ. ಕೃಷ್ಣಪ್ಪ, ಡಾ| ಕಮಲ ಪ್ರ. ಭಟ್‌, ಲೋಹಿತ್‌ ಪಣೋಲಿಬೈಲು ಮೊದಲಾದವರು ಭಾಗವಹಿಸಿದ್ದರು.

ಸ್ಮಾರಕ ಲೋಕಾರ್ಪಣೆ ಪೂರ್ವದಲ್ಲಿ ಸತೀಶ್‌ ಅವರು ಪ್ರೇರಣಾ ಗೀತೆ ಹಾಡಿದರು. ನಿವೃತ್ತ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ ಪ್ರಸ್ತಾವನೆಗೈದರು. ಶಿಶು ಮಂದಿರದ ಮಕ್ಕಳಿಂದ ಸ್ಮಾರಕಕ್ಕೆ ಪುಷ್ಪಾರ್ಚನೆ ನಡೆಯಿತು. ಹಿರಿಯ ಪೊಲೀಸ್‌ ಅಧಿಕಾರಿಗಳು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. 

Trending videos

Back to Top