CONNECT WITH US  

ಬಂಟ್ವಾಳ: ಶಾಸಕರ ಕಾರಿಗೆ ಕಲ್ಲು, ಬಿಜೆಪಿ ಪ್ರತಿಭಟನೆ

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಸಂಚರಿಸುತ್ತಿದ್ದ ಕಾರಿಗೆ ಪಾಣೆಮಂಗಳೂರು ನರಹರಿಪರ್ವತ ಏರಿನಲ್ಲಿ ಸೋಮವಾರ ದುಷ್ಕರ್ಮಿಗಳು ಮರೆಯಲ್ಲಿ ನಿಂತು ದೊಡ್ಡ ಗಾತ್ರದ ಕಲ್ಲೊಂದನ್ನು ಎಸೆದು ಹಾನಿ ಉಂಟು ಮಾಡಿದ್ದಾರೆ. ಶಾಸಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಘಟನೆಯ ಬಳಿಕ ಠಾಣೆಗೆ ಧಾವಿಸಿದ ಬಿಜೆಪಿ ಕಾರ್ಯಕರ್ತರು ಆರೋಪಿಗಳನ್ನು ಪತ್ತೆ ಮಾಡದೇ ಇದ್ದಲ್ಲಿ ತೆರಳುವುದಿಲ್ಲ ಎಂದು ಧರಣಿ ನಡೆಸಿದರು.

ಬಂಟ್ವಾಳ ಪೊಲೀಸ್‌ ಠಾಣಾ ವ್ಯಾಪ್ತಿ, ಅಧಿಕಾರಿಗಳನ್ನು ಯಾವುದಾದರೂ ಪಕ್ಷಕ್ಕೆ ಒತ್ತೆ ಇಡಲಾಗಿದೆಯೇ?, ಬಂದ್‌ ಅಂಗವಾಗಿ ಮೆರವಣಿಗೆ ನಡೆಯುತ್ತಿದ್ದರೂ ತಡೆದಿಲ್ಲ. ಹಾಲಿ ಶಾಸಕರಿಗೆ ನೀಡಬೇಕಿದ್ದ ಪೊಲೀಸ್‌ ರಕ್ಷಣೆಯನ್ನು ಮಾಜಿ ಸಚಿವರಿಗೆ ನೀಡಿರುವುದು ಏಕೆ ಎಂದು ಪ್ರಶ್ನಿಸಿದರು. ಬಡ್ಡಕಟ್ಟೆ, ಮಾಣಿ, ಮಾರಿಪಳ್ಳ, ಕೈಕಂಬಗಳಲ್ಲಿ ಅಮಾಯಕರಿಗೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಹಲ್ಲೆಯಾಗಿದ್ದರೂ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿದರು. 

ಎಎಸ್‌ಪಿ ಋಷಿಕೇಶ್‌ ಸೊನಾವಣೆ, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್‌ ಆರೋಪಿಗಳನ್ನು ಮಂಗಳವಾರದೊಳಗೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು. ಬಿಜೆಪಿ ಮುಖಂಡರಾದ ಎ. ಗೋವಿಂದ ಪ್ರಭು, ಬಿ. ದೇವದಾಸ ಶೆಟ್ಟಿ, ರಾಮ್‌ದಾಸ್‌ ಬಂಟ್ವಾಳ, ಸುಲೋಚನಾ ಭಟ್‌, ತುಂಗಪ್ಪ ಬಂಗೇರ, ಸಂತೋಷ್‌ ಕುಮಾರ್‌ ರೈ ಬೊಳಿಯಾರ್‌ ಇದ್ದರು.

ಶಾಸಕರಿಂದ ದೂರು
ಹಲವಾರು ವಾಹನಗಳು ಒಟ್ಟಾಗಿ ಚಲಿಸು ತ್ತಿದ್ದಾಗ ನನ್ನ ವಾಹನವನ್ನೇ ಗುರಿಯಾಗಿಸಿ ಕಲ್ಲೆಸೆಯ ಲಾಗಿದೆ. ಕರ್ತವ್ಯಕ್ಕೆ ಅಡ್ಡಿ ಮಾಡಿದವರ ಮೇಲೆ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರಾಜೇಶ್‌ ನಾೖಕ್‌ ಬಂಟ್ವಾಳ ನಗರ ಠಾಣೆಗೆ ಸೋಮವಾರ ಸಲ್ಲಿಸಿದ ದೂರಿ ನಲ್ಲಿ ತಿಳಿಸಿದ್ದಾರೆ ದುಷ್ಕರ್ಮಿಗಳನ್ನು  ಮಂಗಳವಾರ ದೊಳಗೆ ಬಂಧಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.


Trending videos

Back to Top