ಮದುವೆ ಹಾಲ್ನಲ್ಲಿ 6 ಲ. ರೂ. ಮೌಲ್ಯದ ಚಿನ್ನಾಭರಣ ಕಳವು
Team Udayavani, Nov 5, 2018, 10:27 AM IST
ವಿಟ್ಲ: ನೆಟ್ಲಮುಟ್ನೂರು ಗ್ರಾಮದ ನೇರಳಕಟ್ಟೆಯ ಕಲ್ಯಾಣ ಮಂಟಪದಲ್ಲಿ ಅ.25ರಂದು ಜರಗಿದ್ದ ವಿವಾಹ ಸಮಾರಂಭದಲ್ಲಿ ಸುಮಾರು 22 ಪವನ್ ಚಿನ್ನಾಭರಣ ಕಳವಾಗಿದೆ ಎಂದು ನೆಟ್ಲಮುಟ್ನೂರು ಗ್ರಾಮದ ಉಮ್ಮರ್ ಸಾಹೇಬ್ ಅವರು ರವಿವಾರ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತನ್ನ ಸೊಸೆ ಅ.25ರಂದು ಮದುವೆಯಲ್ಲಿ ಭಾಗವಹಿಸಿದ್ದು, ವ್ಯಾನಿಟಿ ಬ್ಯಾಗ್ನೊಳಗಿದ್ದ ಸೊಂಟದ ಚಿನ್ನದ ಡಾಬು, ಹಾಗೂ ನೆಕ್ಲೇಸ್ ಕಳವಾಗಿದೆ. ಸಿಸಿ ಕೆಮರಾದ ಫೂಟೇಜ್ ಆಧಾರದಲ್ಲಿ ಕಳ್ಳರನ್ನು ಪತ್ತೆ ಮಾಡುವ ಪ್ರಯತ್ನ ನಡೆಸಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ದಾಖಲಿಸುವಾಗ ತಡವಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳವಾದ ಆಭರಣವು 6 ಲ. ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ.