CONNECT WITH US  

ಗಾಂಧೀಜಿ ಜೀವನದ ಸನ್ನಿವೇಶ ಕಣ್ಮುಂದೆ ಬಿಚ್ಚಿಟ್ಟ ಕಲಾವಿದರು

ಹಗರಿಬೊಮ್ಮನಹಳ್ಳಿ: ಪಟ್ಟಣದ ಇಂದಿರಾಗಾಂಧಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಧಾರವಾಡದ ರಂಗಾಯಣ, ರವೀಂದ್ರ ಎಂ.ಪಿ.ಪ್ರಕಾಶ್‌ ಕಲಾ ಪರಿಷತ್‌, ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕ ಸಹಯೋಗದಲ್ಲಿ ಬೋಳುವಾರು ಮಹಮ್ಮದ್‌ ಅವರ ಪಾಪು ಗಾಂಧಿ, ಗಾಂಧಿ ಬಾಪು ಕಥೆ ಆಧರಿಸಿದ ನಾಟಕ ಮನಮೋಹಕವಾಗಿ ಪ್ರದರ್ಶನಗೊಂಡಿತು.

ಗಾಂಧೀಜಿ ದಕ್ಷಿಣಾ ಆಫ್ರೀಕಾದಲ್ಲಿ ಅಧಿಕಾರಿಗಳಿಂದ ತಾರತಮ್ಯಕ್ಕೆ ಒಳಗಾಗಿ ರೈಲಿನಿಂದ ಹೊರಗೆ ದಬ್ಬಿಸಿಕೊಂಡಿದ್ದು, ಉಪ್ಪಿನ ಸತ್ಯಾಗ್ರಹ, ಬ್ಯಾರಿಸ್ಟರ್‌ ಪದವಿ ಪಡೆದಿದ್ದು, ದೇಶ ವಿಭಜನೆ, ಕೋಮು ಸಂಘರ್ಷಗಳ ಘಟನೆಗಳಿಗೆ ಕಲಾವಿದರು ಜೀವ ತುಂಬಿದರು. ಗಾಂಧೀಜಿ ಬಾಲ್ಯದಿಂದ ಆರಂಭಗೊಂಡು ಅವರ ಸಾವಿನವರೆಗಿನ ಘಟನೆಗಳು ಪ್ರೇಕ್ಷಕರ ಸ್ತೃತಿ ಪಟಲದಲ್ಲಿ ನೈಜ ಎಂಬಂತೆ ಮೂಡಿ ಬಂದವು. 

ಗಾಂಧೀಜಿ ಬಾಲ್ಯದಲ್ಲಿ ತಾಯಿ ಬಳಿ ಸುಳ್ಳು ಹೇಳಿ ಒಪ್ಪಿಕೊಂಡಿದ್ದು, ತಂದೆಗೆ ತಪ್ಪಿನ ಅರಿವಿನ ಕ್ಷಮಾಪಣೆ ಪತ್ರ ಬರೆದಿದ್ದ ಸನ್ನಿವೇಶ ಕಾಲೇಜು ವಿದ್ಯಾರ್ಥಿಗಳನ್ನು ಮಂತ್ರ ಮುಗªರನ್ನಾಗಿಸಿತ್ತು. ಗಾಂಧೀಜಿ ಜೀವನ ಚರಿತ್ರೆಯನ್ನು ಕೇವಲ 60 ನಿಮಿಷಗಳಲ್ಲಿ ಕಟ್ಟಿಕೊಡುವ ಮಾಡಿರುವ ಪ್ರಯತ್ನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. 

ನಾಟಕ ಕಲಾ ತಂಡದ ಪ್ರಜ್ವಲ್‌, ಹರೀಶ್‌ ಗುರಪ್ಪನವರ್‌, ರಂಜಿತಾ ಜಾಧವ, ಸಿದ್ದು ಕೊಂಡೋಜಿ, ಅಕ್ಕಮ್ಮ, ಮಿಲನ್‌, ಸುಮನ್‌, ಕುಮಾರ್‌, ಸುನಿಲ್‌, ಸಂದೀಪ್‌, ಪವನ್‌ ಮಿಟ್ಟಾ ದಿನೇಶ್‌, ಪ್ರದೀಶ್‌, ಶ್ಯಾಮಲಾ, ಜಗದೀಶ್‌ ತಮ್ಮದೇ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರನ್ನು ಹಿಡಿದಿಕ್ಕಿದ್ದರು. ಗಾಂಧೀಜಿ ಅವರ ಬದುಕಿನ ಮೇಲೆ ಅತ್ಯಂತ ಪ್ರಭಾವ ಬೀರಿದ ಸತ್ಯಾಹರಿಶ್ವಂದ್ರ ನಾಟಕದ ದೃಶ್ಯವನ್ನು ಇದೇ ಸಂದರ್ಭದಲ್ಲಿ ಸಾದರಪಡಿಸಲಾಯಿತು. ಸ್ಮಶಾನದಲ್ಲಿ ಹರಿಶ್ವಂದ್ರ ಮತ್ತು ಹೆಂಡತಿ ಶೈವ್ಯ ಅವರೊಂದಿಗೆ ನಡೆದ ಸಂವಾದವಂತೂ ನೋಡುಗರ ಮನ ಕಲಕುವಂತಿತ್ತು. 

ಕಾರ್ಯಕ್ರಮವನ್ನು ತಹಶೀಲ್ದಾರ್‌ ಕೆ.ವಿಜಯಕುಮಾರ್‌ ಉದ್ಘಾಟಿಸಿ ಸೃಜನಶೀಲ ಕಲಾವಿದರು ವಿಶಿಷ್ಟ ಅಭಿನಯದ ಮೂಲಕ ಸಾಹಿತ್ಯಭಿರುಚಿಯನ್ನು ಹೆಚ್ಚಿಸಿದ್ದಾರೆ. ಕನ್ನಡ ಸಾಹಿತ್ಯದ ವಿವಿಧ ಮಜಲುಗಳು ಮನುಷ್ಯನನ್ನು ಕ್ರಿಯಾಶೀಲರನ್ನಾಗಿಸುತ್ತವೆ. ನಾಟಕ, ಜಾನಪದ  ಗೀತೆಗಳು ಇಂದಿಗೂ ಗ್ರಾಮೀಣ ಭಾಗದಲ್ಲಿ ರಸದೌತಣ ಉಣಬಡಿಸುತ್ತವೆ. ದೇಶದ ಮಹಾನ್‌ ಪುರುಷ ಗಾಂಧೀಜಿ ಜೀವನ ಚರಿತ್ರೆಯ ನಾಟಕವನ್ನು ರಂಗಾಯಣ ಕಲಾವಿದರು ಕಣ್ಣು ಮುಂದೆ ಬಂದಂತೆ ಜೀವ ತುಂಬಿದ್ದಾರೆ ಎಂದರು. 

ಕಾಲೇಜು ಪ್ರಾಂಶುಪಾಲೆ ಸರೋಜಿನಿ ಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ಸಿಪಿಐ ರಾಮಪ್ಪ ಸಾವಳಗಿ, ರವೀಂದ್ರ ಎಂ.ಪಿ.ಪ್ರಕಾಶ್‌ ಕಲಾ ಪರಿಷತ್‌ನ ಪತ್ರೇಶ್‌ ಹಿರೇಮಠ್…, ಇಂದಿರಾಗಾಂಧಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಬಾಪೂಜಿ, ಉಪನ್ಯಾಸಕರಾದ ಪ್ರೊ| ಸತೀಶ್‌ ಪಾಟೀಲ್‌, ಸೋಮೇಶ್‌ ಉಪ್ಪಾರ, ಕೆ.ಪ್ರಕಾಶ್‌, ನಂದಿನಿ, ನಿಂಗಪ್ಪ, ಮಲ್ಲೇಶ್‌ ಇತರರಿದ್ದರು. 

Trending videos

Back to Top