CONNECT WITH US  

ಜನಪರ ಕಾಳಜಿ ಇರುವ ಕಾವ್ಯ ರಚಿಸಿ

ಹೂವಿನಹಡಗಲಿ: ಪಟ್ಟಣದ ಶಾಖಾ ಗ್ರಂಥಾಲಯದಲ್ಲಿ ಶೋಭಾ ಪ್ರಕಾಶನ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ ಆಯೋಜಿಸಲಾಗಿದ್ದ ಗಂಡ-ಹೆಂಡತಿ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಖ್ಯಾತ ಕತೆಗಾರ ಆಮರೇಶ ನುಗಡೋಣಿ, ಕಾವ್ಯ ಯಾವತ್ತೂ ಜನಪರ ಕಾಳಜಿ ಹೊಂದಿರಬೇಕು ಅವರ ಆಲೋಚನೆಗಳು ಸಾಹಿತ್ಯದಲ್ಲಿ ಆಭಿವ್ಯಕ್ತಿಗೊಳ್ಳುತ್ತಿರಬೇಕು.

ಹಿಂದಿನಿಂದಲೂ ಪಂಪಾ, ಸರ್ವಜ್ಞ, ಡಿವಿಜಿ ಮೊದಲಾದವರು ಚಂಪೂ ಪ್ರಕಾರದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕುವೆಂಪು, ಬೇಂದ್ರೆ, ತಮ್ಮ ಹುಟ್ಟೂರಿನ ಬಗ್ಗೆ ಆರ್ಥಪೂರ್ಣವಾದ ಕವಿತೆ ರಚಿಸಿದ್ದಾರೆ
ಪ್ರಸ್ತುತ ಚುಟುಕು ಕಾವ್ಯ ಕೃಷಿಯಲ್ಲಿ ಆನೇಕರು ಗಂಭೀರವಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ಒಳ್ಳೆ ಬೆಳವಣಿಗೆ
ಎಂದರು. 

ಸಂಸ್ಕೃತಿ ಪ್ರಕಾಶನದ ಸಿ. ಮಂಜುನಾಥ ಪ್ರಕಾಶ್‌ ಮಲ್ಕಿಒಡೆಯರ್‌ ಮಾತನಾಡಿ, ಪತ್ರಿಕೋದ್ಯಮ ಸಮಾಜಮುಖೀಯಾಗಿದ್ದು, ಸಮಾಜ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಎತ್ತಿಹಿಡಿದು ಅಭಿವೃದ್ಧಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. 

ಪತ್ರಿಕೆ ಓದುವ ಹವ್ಯಾಸವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು. ಪಲ್ಲವ ಪ್ರಕಾಶನದ ಪ್ರಾಧ್ಯಾಪಕ ವೆಂಕಟೇಶ್‌ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ| ನಾಗಣ್ಣ ಕಿಲಾರಿ ಕೃತಿ ಪರಿಚಯಿಸಿದರು. ವಕೀಲರಾದ ಆಟವಾಳಗಿ ಕೊಟ್ರೇಶ್‌, ಬೀಚಿ ಬಳಗದ ಎಂ.ತವನಪ್ಪ, ಡಾ|ಆಂಜನಾ ಕೃಷ್ಣಪ್ಪ, ಗ್ರಂಥಪಾಲಕ ಮಂಜುನಾಥ ಬೋವಿ, ಕವಿಗಳಾದ ಶೋಭಾ ಪ್ರಕಾಶ್‌, ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗರಾಜ್‌ ಮಲ್ಕಿ ಒಡೆಯರ್‌ ಇದ್ದರು.

ಜಿಲ್ಲಾ ಕವಿಗೋಷ್ಠಿ: ತಾಲೂಕು ಕಸಾಪ ಆಧ್ಯಕ್ಷ ಡಾ| ಎಂ.ಪಿ.ಎಂ. ಮಂಜುನಾಥ ಜಿಲ್ಲಾ ಕವಿಗೋಷ್ಠಿಗೆ ಚಾಲನೆ ನೀಡಿದರು. ಕವಿಗೋಷ್ಠಿಯಲ್ಲಿ ಆನೇಕರು ಕವಿತೆ ವಾಚಿಸಿದರು. ತುಂಗಾ ಭದ್ರಾ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕ ಶಂಕರ್‌ ಬೆಟಗೇರಿ , ಶ್ರೀವತ್ಸ ಪಾಟೀಲ್‌, ನಂದೀಶ ನವಲಿ ನಿರೂಪಿಸಿದರು.

Trending videos

Back to Top