CONNECT WITH US  

ಎಲೆಕ್ಷನ್ ಗೆ ಗುಡ್ ಬೈ ಹೇಳಿದ “ಕೈ” ಶಾಸಕ ಆನಂದ್ ಸಿಂಗ್ !

ಬಳ್ಳಾರಿ: ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿಯೇ ಇರುತ್ತೇನೆ ಎಂಬುದಾಗಿ ವಿಜಯನಗರ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಘೋಷಿಸಿದ್ದಾರೆ.

ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್, ನಾನು ರಾಜಕೀಯದಲ್ಲಿ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಇನ್ನು ಹೊಸಬರಿಗೆ ಅವಕಾಶ ಕೊಡಬೇಕು ಎಂಬ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರುವುದಾಗಿ ಹೇಳಿದರು.

ನನ್ನ ಹೇಳಿಕೆಯಿಂದ ಯಾರೂ ಗಾಬರಿಯಾಗೋದು ಬೇಡ. ರಾಜಕೀಯದಲ್ಲಿ ಸಕ್ರಿಯನಾಗಿಯೇ ಇರುತ್ತೇನೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ಇರುವವರಿಗೆ ಅವಕಾಶ ಸಿಗಲಿ ಎಂದರು.

ಭಾರತೀಯ ಜನತಾ ಪಕ್ಷದ ತೊರೆದಿದ್ದ ಮಾಜಿ ಸಚಿವ ಆನಂದ್ ಸಿಂಗ್ ಈ ವರ್ಷ ಕಾಂಗ್ರೆಸ್ ಪಕ್ಷ ಸೇರಿದ್ದರು. ಹಾಲಿ ಬಳ್ಳಾರಿಯ ವಿಜಯನಗರ ಕ್ಷೇತ್ರದ ಶಾಸಕರಾಗಿದ್ದಾರೆ. ಏತನ್ಮಧ್ಯೆ ಸಿಂಗ್ ಮತ್ತೆ ಬಿಜೆಪಿ ಜೊತೆ ಗುರುತಿಸಿಕೊಂಡಿರುವು ಬಗ್ಗೆ ಊಹಾಪೋಹ ಹಬ್ಬಿತ್ತು.


Trending videos

Back to Top