CONNECT WITH US  

ತ್ಯಾಜ್ಯ ಸಂಗ್ರಹಕ್ಕೆ ಬಂತು ಬ್ಯಾಟರಿ ಚಾಲಿತ ಆಟೋ!

ಬಳ್ಳಾರಿ: ಇಂಧನ ಚಾಲಿತ ವಾಹನಗಳ ಹೊಗೆಯಿಂದ ದಿನೇ ದಿನೇ ಹೆಚ್ಚುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಬ್ಯಾಟರಿ ಚಾಲಿತ ಆಟೋ ಮತ್ತು ಇತರೆ ವಾಹನಗಳು ಶೀಘ್ರದಲ್ಲೇ ರಸ್ತೆಗಿಳಿಯುವ ಸಾಧ್ಯತೆಯಿದೆ. ಖಾಸಗಿ ಕಂಪನಿಯೊಂದು ಈ ವಾಹನಗಳನ್ನು ಸಿದ್ಧಪಡಿಸಿದ್ದು, ಜಿಲ್ಲೆಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌, ಗ್ರಾಮ ಪಂಚಾಯತ್‌ಗಳಲ್ಲಿ ತ್ಯಾಜ್ಯ ಸಂಗ್ರಹಿಸಲು ಬ್ಯಾಟರಿ ಚಾಲಿತ ವಾಹನಗಳನ್ನು ಬಳಸುವಂತೆ ಕಂಪನಿ ಮುಖ್ಯಸ್ಥರು ಜಿಲ್ಲಾಡಳಿತವನ್ನು ಕೋರಿದ್ದಾರೆ.

ಜಿಲ್ಲೆಯಾದ್ಯಂತ ಇಂಧನ ಚಾಲಿತ ವಾಹನಗಳ ಸಂಖ್ಯೆ ಅಧಿಕವಾಗಿದೆ. ಈ ಪೈಕಿ ಬಹುತೇಕ ಆಟೋಗಳು ಹೆಚ್ಚು ಹೊಗೆ ಉಗುಳುತ್ತಿದ್ದು ವಾಯುಮಾಲಿನ್ಯಕ್ಕೆ ಕಾರಣವಾಗಿವೆ. ಇನ್ನು ಕೆಲ ಆಟೋಗಳನ್ನು ಸೀಮೆಎಣ್ಣೆ ಮಿಶ್ರಿತ ಇಂಧನ ಬಳಸಿ
ಚಲಾಯಿಸಲಾಗುತ್ತಿದೆ. ಇದನ್ನೆಲ್ಲ ತಡೆಗಟ್ಟಲು ಬ್ಯಾಟರಿ ಚಾಲಿತ ಆಟೋಗಳು ಸೂಕ್ತ. ಹೀಗಾಗಿ ಬ್ಯಾಟರಿ ಚಾಲಿತ ವಾಹನಗಳು ಪರಿಸರ ಸ್ನೇಹಿಯಾಗಿದ್ದು, ವಾಯು ಮಾಲಿನ್ಯ ನಿಯಂತ್ರಿಸಬಹುದಾಗಿದೆ. 

ಸರಕಾರಿ ಇಲಾಖೆಗಳಲ್ಲಿ ಪರಿಸರ ಸ್ನೇಹಿ ವಾಹನ ಬಳಕೆ ಆರಂಭಗೊಂಡರೆ ಜನರಲ್ಲೂ ಜಾಗೃತಿ ಮೂಡಲಿದೆ. ಈಗಾಗಲೇ ಬೆಂಗಳೂರು ಮತ್ತು ಕಲಬುರ್ಗಿ ಪಾಲಿಕೆಗಳಲ್ಲಿ ತ್ಯಾಜ್ಯ ಸಂಗ್ರಹಿಸಲು ಬ್ಯಾಟರಿ ಚಾಲಿತ ವಾಹನಗಳನ್ನು
ಬಳಸಲಾಗುತ್ತಿದೆ. ಜಿಲ್ಲೆಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಸೇರಿ ಸ್ಥಳೀಯ ಸಂಸ್ಥೆಗಳಲ್ಲೂ ಬ್ಯಾಟರಿ ಚಾಲಿತ ವಾಹನಗಳನ್ನು ಬಳಸುವ ಮೂಲಕ ವಾಯು ಮಾಲಿನ್ಯ ತಡೆಗೆ ಕೊಡುಗೆ ನೀಡಬಹುದಾಗಿದೆ. ಪರಿಸರಕ್ಕೆ ಪೂರಕವಾಗಿ ಹಾಗೂ ಕಸ ಸಂಗ್ರಹಣೆಗೆ ಅನುಕೂಲವಾಗುವಂತಹ ಆಟೋ ತಯಾರಿಸಲಾಗಿದೆ.

ಸ್ವತ್ಛ ಭಾರತ ಘೋಷ ವಾಕ್ಯಗಳನ್ನು ಒಳಗೊಂಡ ತ್ಯಾಜ್ಯಸಂಗ್ರಹ ವಾಹನವನ್ನು ಸಿದ್ಧಪಡಿಸಿದ್ದು, ಇದನ್ನು ಬಳಸಲು ಮುಂದಾಗುವಂತೆ ನಗರಾಭಿವೃದ್ಧಿ ಕೋಶದ ಅಧಿಕಾರಿ ಮಹ್ಮದ್‌ ಮುನೀರ್‌ ಅವರನ್ನು ಕಂಪನಿ ಮುಖ್ಯಸ್ಥರು ಕೋರಿದ್ದಾರೆ. ಶೀಘ್ರದಲ್ಲೇ ಜಿಲ್ಲಾಡಳಿತಕ್ಕೆ ಈ ವಾಹನದ ಕ್ಷಮತೆಯ ಡೆಮೋ ಪ್ರದರ್ಶಿಸಲಾಗುತ್ತದೆ ಎಂದು ಕಂಪನಿಯ ಮುಖ್ಯಸ್ಥರು ತಿಳಿಸಿದ್ದಾರೆ. ಉತ್ತರ ಪ್ರದೇಶ ಹಾಗೂ ಕರ್ನಾಟಕದ ಬೆಂಗಳೂರು ಬೃಹತ್‌ ಮಹಾನಗರ ಮತ್ತು ಕಲಬುರಗಿ ಮಹಾನಗರ ಪಾಲಿಕೆ, ಪಟ್ಟಣ ಪಂಚಾಯಿತಿಗಳಲ್ಲಿ ಬ್ಯಾಟರಿ ಚಾಲಿತ ಆಟೋ ಬಳಕೆ ಮಾಡಲಾಗುತ್ತಿದೆ. ಈ ಆಟೋ ಬಳಕೆಯಿಂದಾಗಿ ಶಬ್ದ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣವಾಗಲಿದೆ. ಇಂಧನ ಉಳಿತಾಯವಾಗಲಿದೆ. ನಿರ್ವಹಣೆ ವೆಚ್ಚವೂ ಕಡಿಮೆಯಾಗಲಿದೆ.

ಸೋಮವಾರ ವಾಹನದ ಡೆಮೋ ಪ್ರದರ್ಶಿಸುವಂತೆ ಜಿಲ್ಲಾಡಳಿತ ಸೂಚಿಸಿದ್ದು, ಅಂದು ಪಿಪಿಟಿ ನೀಡುವ ಮೂಲಕ ಬ್ಯಾಟರಿ ಚಾಲಿತ ಆಟೋಗಳ ಸಾಮರ್ಥ್ಯ ತಿಳಿಯಲಿದೆ. ಅದಾದ ಬಳಿಕ, ಆಟೋರಿಕ್ಷಾಗಳ ಬಳಕೆಗೆ ಜಿಲ್ಲಾಡಳಿತ ಮುಂದಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. 

ಪರಿಸರ ಮಾಲಿನ್ಯ ನಿಯಂತ್ರಿಸುವ ಸಲುವಾಗಿ ಬ್ಯಾಟರಿ ಚಾಲಿತ ಆಟೋಗಳನ್ನು ಸಿದ್ಧಪಡಿಸಲಾಗಿದೆ. ಬೆಂಗಳೂರು, ಕಲಬುರ್ಗಿ ಮಹಾನಗರ ಪಾಲಿಕೆಗಳಲ್ಲಿ ತ್ಯಾಜ್ಯ ಸಂಗ್ರಹಿಸಲು ಈ ವಾಹನಗಳನ್ನು ಖರೀದಿ ಮಾಡಲಾಗಿದೆ. ಅದೇ ರೀತಿ ಬಳ್ಳಾರಿಯ ಜಿಲ್ಲೆಯ ಪಾಲಿಕೆ, ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಬಳಸುವಂತೆ ಜಿಲ್ಲಾಡಳಿತವನ್ನು ಕೋರಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಡಿಯುಡಿಸಿ ಅಧಿಕಾರಿ ಮಹ್ಮದ್‌ ಮುನೀರ್‌ ಅವರಿಗೆ ಡೆಮೋ ತೋರಿಸುವ ಸಲುವಾಗಿ ವಾಹನ ತರಲಾಗಿತ್ತು. ಆದರೆ, ಅವರು ಸೋಮವಾರ ಬರುವಂತೆ ಸೂಚಿಸಿದ್ದಾರೆ ಸೈಯ್ಯದ್‌ ಇರ್ಷಾದ್‌, ಕಂಪನಿಯ ಜಿಲ್ಲಾ ಮುಖ್ಯಸ

ಹೇಗಿದೆ ಹೊಸ ವಾಹನ?
ವಾಹನವು ಬ್ಯಾಟರಿ, ಮೋಟಾರ್‌, ಕನ್ವರ್ಟರ್‌ ಎಂಬ ಮೂರು ಯಂತ್ರಗಳನ್ನು ಒಳಗೊಂಡಿದೆ. ಕೇವಲ ಒಂದು ಬ್ಯಾಟರಿಯನ್ನು 2 ಗಂಟೆ ಚಾರ್ಜ್‌ ಮಾಡಿದರೆ, ಸುಮಾರು 60 ರಿಂದ 80 ಕಿ.ಮೀ.ವರೆಗೂ ಚಲಿಸುತ್ತದೆ. ವಾಹನದ ವೇಗದ ಮಿತಿಯನ್ನು 45ಕ್ಕೆ ಸೀಮಿತಗೊಳಿಸಿದ್ದು, ಶಬ್ದ ರಹಿತ, ಹೊಗೆರಹಿತ ಪರಿಸರ ಪ್ರೇಮಿ ವಾಹನವಾಗಿ ಕಾರ್ಯನಿರ್ವಹಿಸಲಿದೆ. ಆಟೋ 2.85 ಲಕ್ಷ ರೂ.  ಲ್ಯದ್ದಾಗಿದೆ. ಕಸ ವಿಲೇವಾರಿಗೆಂದೇ ಸ್ವತ್ಛ ಭಾರತ ಮಿಷನ್‌ ಯೋಜನೆಯಡಿ ಸ್ವತ್ಛ ಕರ್ನಾಟಕ, ಸಮರ್ಥ ಕರ್ನಾಟಕ ಒಂದು ಹೆಜ್ಜೆ ಸ್ವತ್ಛತೆಯ ಕಡೆಗೆ ಎಂಬ ಘೋಷವಾಕ್ಯಗಳುಳ್ಳ ಆಟೋ ಸಿದ್ಧಪಡಿಸಲಾಗಿದೆ.

ಹಸಿ ಕಸ, ಒಣ ಕಸದ ತೊಟ್ಟಿಗಳುಳ್ಳ ಈ ಆಟೋದಲ್ಲಿ ವಿಶೇಷ ಜಾಕ್‌ವುಳ್ಳ ತೊಟ್ಟಿ ಅಳವಡಿಸಲಾಗಿದೆ. ಆ ಜಾಕ್‌
ಎತ್ತುವ ಮುಖೇನ ಸಂಗ್ರಹಿಸಿದ ಕಸವನ್ನು ವಿಲೇವಾರಿ ಮಾಡಬಹುದಾಗಿದೆ. ಇದಲ್ಲದೇ ಸರಕು ಸಾಗಣೆ, ಹಾಗೂ ಸಾರ್ವಜನಿಕರು ಸಂಚರಿಸುವ ರಿಕ್ಷಾಗಳಿವೆ. ಈಗಾಗಲೇ ಐದಾರು ಪ್ಯಾಸೆಂಜರ್‌ ರಿಕ್ಷಾಗಳನ್ನು ನಗರದಲ್ಲಿ ಮಾರಾಟ
ಮಾಡಲಾಗಿದೆ. 

„ವೆಂಕೋಬಿ ಸಂಗನಕಲ್ಲು


Trending videos

Back to Top