CONNECT WITH US  

ಕಾಟಾಚಾರದ ಕಾರ್ಯಕ್ರಮ: ಆಕ್ರೋಶ

ಬಸವಕಲ್ಯಾಣ: ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಜನ ಪ್ರತಿನಿಧಿಗಳು, ಕೆಲ ಅಧಿಕಾರಿಗಳು, ವಿದ್ಯಾರ್ತಿಗಳು ಹಾಗೂ ಶಿಕ್ಷಕರು ಬಾರದಿರುವುದಕ್ಕೆ ಸಮಾಜದ ಜನರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿತು.

ಜಯಂತ್ಯುತ್ಸವದ ನಿಮಿತ್ತ ನಗರದ ಕೋಟೆಯಿಂದ ಮುಖ್ಯ ರಸ್ತೆ ಮಾರ್ಗವಾಗಿ ಹಳೆ ತಹಶೀಲ್ದಾರ ಕಚೇರಿ
ವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆ ಅಂಬೇಡ್ಕರ್‌ ವೃತ್ತದ ಬಳಿ ಬಂದಾಗ ಮೆರವಣಿಗೆಯಲ್ಲಿದ್ದ ಸಮಾಜದ ಕೆಲ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದರು. ಮೆರವಣಿಗೆ ಹಳೆ ತಹಶೀಲ್ದಾರ ಕಚೇರಿ ತಲುಪಿದ ನಂತರ ಕಾರ್ಯಕ್ರಮದ ಆರಂಭದಲ್ಲಿಯೇ ವೇದಿಕೆ ಬಳಿಗೆ ಆಗಮಿಸಿದ ಕೆಲ ಪ್ರಮುಖರು ಹಾಗೂ ಯುವಕರು, ಕಾಟಾಚಾರಕ್ಕೆ ಜಯಂತಿ ಆಚರಿಸಲಾಗುತ್ತಿದೆ. ಕನಕ ದಾರಿಗೆ ಮಾಡಿದ ಅವಮಾನವಿದು ಎಂದು ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬಿಇಒ ಸೇರಿದಂತೆ ಕೆಲ ಅಧಿಕಾರಿಗಳು ಭಾಗವಹಿಸಿಲ್ಲ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಮಧ್ಯೆ ಆಕ್ರೋಶ ಗೊಂಡ ಗುಂಪು ತಾಲೂಕು ಆಡಳಿತ ಹಾಗೂ ಸ್ಥಳೀಯ ಶಾಸಕರ ವಿರುದ್ದ  ಧಿಕ್ಕಾರದ ಕೂಗಿತು. ಕೆಲವರು, ಜಯಂತಿ ಕಾರ್ಯಕ್ರಮ ಬಹಿಷ್ಕರಿಸಬೇಕು ಎಂದು ಕರೆ ನೀಡಿದರು. ಹೀಗಾಗಿ ಬಹುತೇಕ ಜನರು ಕಾರ್ಯಕ್ರಮದಿಂದ ಹೊರ ನಡೆದರು. 

ಸ್ಥಳದಲ್ಲಿದ್ದ ಸಿಪಿಐ ಅಲಿಸಾಬ್‌ ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸಿದರು. ನಗರಸಭೆ ಸದಸ್ಯ ಬಸವರಾಜ
ಮೇತ್ರೆ, ಪ್ರಮುಖರಾದ ಚಂದ್ರಕಾಂತ ಮೇತ್ರೆ, ವಿಠ್ಠಲಧರಿ, ರವಿ ನಾಗನಕೆರೆ, ರಾಮ ಕನಕಟ್ಟೆ, ರಾಜು ನಿರಗುಡಿ, ನಾಗನಾಥ ಮೇತ್ರೆ, ರಾಮ ಯದಲಾಪುರೆ, ಪ್ರಭು ಶಿಪನೋರ, ಶಿವಾ ಇದ್ದರು.


Trending videos

Back to Top