CONNECT WITH US  

ನಿರ್ಭಯವಾಗಿ ಚುನಾವಣೆ ಎದುರಿಸಿ: ಖೂಬಾ

ಹುಮನಾಬಾದ: ಯಾರೂ ಯಾರಿಗೂ ಹೆದರದೇ ನಿರ್ಭಯವಾಗಿ ಚುನಾವಣೆ ಎದುರಿಸಿ, ಯಾವತ್ತೂ ನಾನು ನಿಮ್ಮೊಂದಿಗಿದ್ದೇನೆ. ಯಾವುದೇ ಕಾರಣಕ್ಕೂ ಹಿಂದೆ ನೋಡದೆ ಯಶಸ್ಸಿಗಾಗಿ ಮುನ್ನಡೆಯಬೇಕು ಎಂದು ಸಂಸದ ಭಗವಂತ ಖೂಬಾ ಸಲಹೆ ನೀಡಿದರು.

ಆ.31ರಂದು ನಡೆಯಲಿರುವ ಹಳ್ಳಿಖೇಡ(ಬಿ)ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಳ್ಳಿಖೇಡ(ಬಿ)ಪಟ್ಟಣದಲ್ಲಿ ಸೋಮವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ವಿಪಕ್ಷದವರಿಂದ ಹೆದರಿಕೆ, ಬೆದರಿಕೆ ಬರುತ್ತವೆ.

ಅದ್ಯಾವುದಕ್ಕೂ ಕಿವಿಗೊಡದೇ ಗೆಲುವಿಗಾಗಿ ಶ್ರಮಿಸಬೇಕು. ಗೆಲುವು ಯಾವತ್ತಾದರೂ ನಮ್ಮದೆ. ಗುರಿ ತಲುಪುವ ತನಕ
ಹಿಂತಿರುಗಿ ನೋಡದೇ ಆತ್ಮವಿಶ್ವಾಸದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಮಾಜಿ ಶಾಸಕ ಸುಭಾಷ ಕಲ್ಲೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುನಿತಾ ಸಗರ್‌, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ
ಡಾ| ಶೈಲೇಂದ್ರ ಬೆಲ್ದಾಳೆ, ಉಪಾಧ್ಯಕ್ಷ ಶಿವಾನಂದ ಕೆ.ಮಂಠಾಳ್ಕರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಾಥ ಪಾಟೀಲ, ಈಶ್ವರಸಿಂಗ್‌ ಠಾಕೂರ್‌, ಪ್ರವೀಣ ಸಿರಂಜಿ, ನರಸಿಂಗ್‌ ಸಗರ್‌, ತಾಲೂಕು ಘಟಕ ಅಧ್ಯಕ್ಷ ವಿಶ್ವನಾಥ ಪಾಟೀಲ ಮಾಡುಳ್‌, ಮಹ್ಮದ್‌ ಇಲಿಯಾಸ್‌, ಶಾಂತಕುಮಾರ ಚಾಳಕಿ, ಮಲ್ಲಿಕಾರ್ಜುನ ಕುಂಬಾರ, ಸೂರ್ಯಕಾಂತ ಮಠಪತಿ, ಬಸವರಾಜ ಆರ್ಯ, ಮಲ್ಲಿಕಾರ್ಜುನ ಪ್ರಭಾ, ಬಾಬು ಕಾರಭಾರಿ, ಪ್ರಭಾಕರ ನಾಗರಾಳೆ, ನಸ್ರಿನ್‌ ತರನ್ನು, ಅಭಿಮನ್ಯೂ ನಿರಗುಡಿ, ಕರಬಸಪ್ಪ ಮುಸ್ತಾಪುರ, ವಕೀಲ ರವಿಕಾಂತರಾವ್‌ ಹೂಗಾರ ಮೊದಲಾದವರು ಇದ್ದರು. 

Trending videos

Back to Top