CONNECT WITH US  

ಸಿದ್ಧಾರೂಢರ ಜಲ ರಥೋತ್ಸವ

ಸದ್ಗುರು ಶ್ರೀ ಸಿದ್ಧಾರೂಢರ 89ನೇ ಪುಣ್ಯಾರಾಧನೆ ಅಂಗವಾಗಿ ನಗರದಲ್ಲಿ ಸೋಮವಾರ ಶ್ರಾವಣ ಮಹೋತ್ಸವದ ಜಲ ರಥೋತ್ಸವ (ತೆಪ್ಪದ ತೇರು) ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಶ್ರೀಮಠದ ಮುಖ್ಯ ಆಡಳಿತಾಧಿಕಾರಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ತೆಪ್ಪದಲ್ಲಿ ಉಭಯ ಶ್ರೀಗಳ ಮೂರ್ತಿಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಸಾವಿರಾರು ಭಕ್ತರು ಸದ್ಗುರು ಸಿದ್ಧಾರೂಢ ಸ್ವಾಮಿ ಮಹಾರಾಜ ಕೀ ಜೈ, ಸದ್ಗುರು ಗುರುನಾಥರೂಢ ಸ್ವಾಮಿ ಮಹಾರಾಜ ಕೀ ಜೈ ಎಂಬ ಘೋಷಣೆ ಕೂಗುತ್ತಾ ತೆಪ್ಪದ ತೇರಿಗೆ ಉತ್ತತ್ತಿ, ಬಾಳೆಹಣ್ಣು, ಲಿಂಬೆಹಣ್ಣು, ಕಿತ್ತಳೆ ಹಣ್ಣು ಎಸೆಯುವ ಮೂಲಕ ಉಭಯ ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು. ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ ಪಾಲ್ಗೊಂಡಿದ್ದರು. 

ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳಾದ ನ್ಯಾಯಾಧೀಶ ಈಶಪ್ಪ ಭೂತೆ ಅವರು ತೆಪ್ಪೋತ್ಸವ ಸಂದರ್ಭದಲ್ಲಿ ಉಭಯ ಶ್ರೀಗಳಿಗೆ ಚಾಮರ ಬೀಸಿದ್ದು ವಿಶೇಷವಾಗಿತ್ತು. ಅದ್ವೆ„ತ ಮಠಗಳ ವಿವಿಧ ಮಠಾಧೀಶರು, ಮಾತೆಯರು, ನ್ಯಾಯಾಧೀಶರು, ಶ್ರೀ ಸಿದ್ಧಾರೂಢ ಸ್ವಾಮಿ ಮಠದ ಟ್ರಸ್ಟ್‌ ಕಮಿಟಿ ಚೇರನ್‌ ದೇವೇಂದ್ರಪ್ಪ ಮಾಳಗಿ, ಧರ್ಮದರ್ಶಿಗಳಾದ ಸಿದ್ರಾಮಪ್ಪ ಕೋಳಕೂರ, ಮೊದಲಾದವರು ಈ ಸಂದರ್ಭದಲ್ಲಿದ್ದರು.

Trending videos

Back to Top