CONNECT WITH US  

240 ಶಿಕ್ಷಕರ ಹುದ್ದೆಗಳು ಖಾಲಿ

ಬಸವಕಲ್ಯಾಣ: ತಾಲೂಕಿನ ಸರಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ವಿವಿಧ ವಿಷಯಗಳ ಶಿಕ್ಷಕರ ಕೊರತೆ ಇದೆ. ತಾಲೂಕಿನಲ್ಲಿ ಒಟ್ಟು 34 ಸರಕಾರಿ ಪ್ರೌಢಶಾಲೆ ಮತ್ತು 234 ಸರಕಾರಿಪ್ರಾಥಮಿಕ ಶಾಲೆಗಳಿವೆ. ಕೆಲ ಶಿಕ್ಷಕರ
ವರ್ಗಾವಣೆ ಮತ್ತು ಬಡ್ತಿಯಿಂದ ಹಲವು ವರ್ಷಗಳಿಂದ ವಿಷಯವಾರು ಶಿಕ್ಷಕರ ಅಭಾವದಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.

ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ, ದೈಹಿಕ ಶಿಕ್ಷಕ ಸೇರಿದಂತೆ 31 ಹಾಗೂ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ, ಉರ್ದು, ಮರಾಠಿ ಸೇರಿದಂತೆ 209 ಶಿಕ್ಷಕರ ಹುದ್ದೆಗಳು ನಗರ ಮತ್ತು ಗ್ರಾಮೀಣ ಶಾಲೆಗಳಲ್ಲಿ ಖಾಲಿ ಇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ನೀಡಿರುವ ವರದಿಯಲ್ಲಿ ಮಾಹಿತಿಯಲ್ಲಿದೆ.

ಸರಕಾರಿ ಪ್ರೌಢಶಾಲೆಯಲ್ಲಿ ಕಲಾ ಕನ್ನಡ 10, ಸಿಬಿಝಡ್‌ 4, ಆಂಗ್ಲಭಾಷೆ 4, ದೈಹಿಕ ಶಿಕ್ಷಕ 9, ತೋಟಗಾರಿಕೆ 1, ಪಿಸಿಎಂ ಮರಾಠಿ 1, ಉರ್ದು 1, ಹಿಂದಿ 1 ಹಾಗೂ ಪ್ರಾಥಮಿಕ ಶಾಲೆಯಲ್ಲಿ ಎನ್‌ಜಿಎಚ್‌ ಎಂ ಕನ್ನಡ 7, ಎನ್‌ಜಿಎಚ್‌ಎಂ ಮರಾಠಿ 5, ಮು.ಗು. ಕನ್ನಡ 12, ಉರ್ದು 5, ಮರಾಠಿ 3, ಹಿಂದಿ 1, ಕನ್ನಡ ಸಾಮಾನ್ಯ 92, ಕನ್ನಡ ವಿಜ್ಞಾನ 5, ಕನ್ನಡ ಇಂಗ್ಲಿಷ್‌ 1, ಕನ್ನಡ ಹಿಂದಿ 1, ಉರ್ದು ಸಾಮಾನ್ಯ 31, ಉರ್ದು ವಿಜ್ಞಾನ 2, ಮರಾಠಿ ಸಾಮಾನ್ಯ 27, ಮರಾಠಿ ವಿಜ್ಞಾನ 2, ಮರಾಠಿ ಇಂಗ್ಲಿಷ್‌ 2, ಕನ್ನಡ ದೈಹಿಕ ಶಿಕ್ಷಕ 13 ಕೊರತೆ ಇದೆ. ಶಿಕ್ಷಕ ಕೊರತೆಯಿಂದ ಮಕ್ಕಳ ಫಲಿತಾಂಶದ ಮೇಲೆ ಪರಿಣಾಮ ಬಿಳುತ್ತಿದೆ ಎಂಬ ಮಾತು ಅಲಲ್ಲಿ ಕೇಳಿ ಬರುತ್ತಿವೆ. ಹಲವೆಡೆ ಪ್ರಮುಖವಾಗಿ ಮಾತೃ ಭಾಷೆಯಾದ ಕನ್ನಡ, ದೈಹಿಕ ಮತ್ತು ಮರಾಠಿ ಶಿಕ್ಷಕರೆ ಇಲ್ಲದಿರುವುದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀಳುವಂತಾಗಿದೆ.

ಸರಕಾರ ಮಕ್ಕಳ ಉತ್ತಮ ಭವಿಷ್ಯದ ದೃಷ್ಟಿಯಿಂದ ಬೆಳಗ್ಗೆ ಹಾಲು, ಮಧ್ಯಾಹ್ನ ಬಿಸಿಊಟ, ಸೈಕಲ್‌, ಪುಸ್ತಕದ ಸೌಕರ್ಯ
ನೀಡುತ್ತಿದೆ. ಆದರೆ ಸಮರ್ಪಕವಾಗಿ ವಿಷಯವಾರು ಶಿಕ್ಷಕರ ನೇಮಕ ಮಾಡಿಕೊಳ್ಳುತ್ತಿಲ್ಲ ಎಂಬುವುದು ಪೋಷಕರ
ಆರೋಪವಾಗಿದೆ. 

ಆದ್ದರಿಂದ ಇಲ್ಲಿನ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹಾಕುವ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಂಡು ಜಿಲ್ಲೆ ಮತ್ತು ತಾಲೂಕಿನ ಫಲಿತಾಂಶ ಹೆಚ್ಚಳಕ್ಕೆ ಪ್ರಯತ್ನಿಸಬೇಕು ಎಂಬುವುದು ಪೋಷಕರ ಮತ್ತು ಸಾರ್ವಜನಿಕರ ಆಗ್ರಹವಾಗಿದೆ. 

ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇರುವ ಬಗ್ಗೆ ಸರಕಾರಕ್ಕೆ ಈಗಾಗಲೇ ವರದಿ ಕಳುಹಿಸಲಾಗಿದೆ. ಹಾಗಾಗಿ ಆದಷ್ಟು ಬೇಗ
ವಿಷಯವಾರು ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯಲಿದೆ.
ಪಿ. ನಾಗರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವಕಲ್ಯಾಣ

Trending videos

Back to Top