CONNECT WITH US  

ಕಲೆ-ಸಂಸ್ಕೃತಿ ವಿನಿಮಯ ಅಗತ್ಯ: ಹೆಬ್ಟಾಳೆ

ಬೀದರ: ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಕಲೆ ಹಾಗೂ ಸಂಸ್ಕೃತಿಯ ವಿನಿಮಯ ಅಗತ್ಯವಾಗಿದೆ ಎಂದು ರಾಷ್ಟ್ರೀಯ ಬುಡಕಟ್ಟು ಹಾಗೂ ಕಲಾ ಪರಿಷತ್‌ ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ ಹೇಳಿದರು.

ನಗರದ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಪರಿಷತ್‌ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ಚಟುವಟಿಕೆಗಳ ವಿನಿಮಯಕ್ಕಾಗಿ ದೇಶದಲ್ಲಿ ಏಳು ಸಾಂಸ್ಕೃತಿಕ ವಲಯಗಳನ್ನು ಹುಟ್ಟು ಹಾಕಲಾಗಿದೆ ಎಂದರು.

ಯುವ ಕಲಾವಿದರನ್ನು ಪ್ರೋತ್ಸಾಹಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಬೇರೆಕಡೆಗೆ ಹೋಗಿ ತಮ್ಮ ಕಲಾ ಪ್ರದರ್ಶನ ಮಾಡಿದಲ್ಲಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಗ್ರಾಮೀಣ
ಕಲೆಯಿಂದ ವಂಚಿತರಾಗುತ್ತಿರುವ ಯುವಜನರನ್ನು ಪ್ರೋತ್ಸಾಹಿಸಲು ಐದು ಸಾವಿರದ ವರೆಗೆ ಶಿಷ್ಯ ವೇತನ ಮಾದರಿಯಲ್ಲಿ ನೀಡಲಾಗುತ್ತಿದೆ. ಅವರ ಸಂಶೋಧನಾ ಪ್ರತಿಭೆಗೆ ಪ್ರತಿಫಲವಾಗಿ ಸೀನಿಯರ್‌ ಹಾಗೂ ಜ್ಯುನಿಯರ್‌ ಫೇಲೋಶಿಪ್‌ ಪ್ರಶಸ್ತಿ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದರು.

ಕರ್ನಾಟಕ ಜಾನಪದ ವಿವಿ ಪ್ರಾದೇಶಿಕ ಕೇಂದ್ರದ ಸಂಯೋಜನಾಧಿಕಾರಿ ಡಾ| ಜಗನ್ನಾಥ ಹೆಬ್ಟಾಳೆ ಪ್ರಾಸ್ತಾವಿಕ ಮಾತನಾಡಿ, 1862ರ ಆಗಸ್ಟ್‌ 22ರಂದು ವಿಲಿಯಮ್‌ ಥೋಮ್ಸ್‌ ಎಂಬಾತನು ಫೋಕಲೋರ್‌ ಎಂಬ ಪದ ಕಂಡು ಹಿಡಿದರೆ, ಸಾಹಿತಿ ಹಾ.ಮಾ. ನಾಯಕ ಅವರು ಅದನ್ನು ಜಾನಪದ ಎಂದು ಕರೆದರು. ಅಂದಿನಿಂದ ಈ ದಿನವನ್ನು ವಿಶ್ವ ಜಾನಪದ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸಾಹಿತ್ಯದ ಗಂಧ ಅಗತ್ಯವಾಗಿದ್ದು, ಮಾನವಿಯ ಮೌಲ್ಯದಿಂದ ತುಂಬಿರುವ ಈ ಜಾನಪದ ಬದುಕನ್ನು ಪ್ರತಿಯೊಬ್ಬರು ಅನುಕರಿಸಬೇಕು ಎಂದರು.
 
ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಿಠೊಬಾ ಹೊನಕಾಂಡೆ, ಕರ್ನಾಟಕ ಸಾಹಿತ್ಯ ಸಂಘದ ಟ್ರಸ್ಟ್‌ ಅಧ್ಯಕ್ಷ ಶಂಕ್ರೆಪ್ಪ ಹೊನ್ನಾ, ನಿಕಟಪೂರ್ವ ಜಾನಪದ ಸಮ್ಮೇಳನಾಧ್ಯಕ್ಷೆ ಚಂದ್ರಕಲಾ ಹಾರೂರಗೇರಿ, ಪಿ.ಸಂಗಪ್ಪ ಇಂಜಿನಿಯರ್‌, ಸುಹಾಸಿನಿ, ನಿಜಲಿಂಗಪ್ಪ ತಗಾರೆ, ಶಾಂತಪ್ಪ ಬಾವಿಕಟ್ಟಿ ಇದ್ದರು.

Trending videos

Back to Top