CONNECT WITH US  

ಉತ್ತಮ ಆರೋಗ್ಯಕ್ಕೆ ರಕ್ತದಾನ ಅವಶ್ಯ: ಡಾ| ಅಶೋಕ

ಹುಮನಾಬಾದ: ಉತ್ತಮ ಆರೋಗ್ಯಕ್ಕೆ ರಕ್ತದಾನ ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಅರ್ಹರಾದವರೆಲ್ಲರೂ ಕಡ್ಡಾಯ
ರಕ್ತದಾನ ಮಾಡಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ| ಅಶೋಕ ಮೈಲಾರಿ ಹೇಳಿದರು.

ಇಲ್ಲಿನ ಆರ್ಬಿಟ್‌ ಸಂಸ್ಥೆ ಮದರ್‌ ತೆರೇಸಾ ಸ್ಮರಣಾರ್ಥ ರಕ್ತಋಣಿ-2018ರಡಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನದಿಂದ ವ್ಯಕ್ತಿ ನಿಶಕ್ತನಾಗುತ್ತಾನೆ ಎಂಬುದು ತಪ್ಪು ಕಲ್ಪನೆ. ಮನುಷ್ಯನ ದೇಹದಲ್ಲಿ ಉತ್ಪತ್ತಿ ಆಗುವ ಪ್ರತಿ ರಕ್ತಕಣ ಕೇವಲ 120 ದಿನ ಮಾತ್ರ ಜೀವಂತವಿರುತ್ತದೆ. ತದನಂತರ ದೇಹದಲ್ಲಿ ಹೊಸದಾಗಿ ರಕ್ತ ಕಣಗಳು ಉತ್ಪತ್ತಿ ಆಗುತ್ತವೆ.

ರಕ್ತದಾನ ಮಾಡಲಿ, ಮಾಡದೇ ಇರಲಿ ಅವುಗಳ ಸಾವು ಮಾತ್ರ ಖಚಿತ. ಕಾರಣ ರಕ್ತಕಣಗಳನ್ನು ವ್ಯರ್ಥವಾಗಿಸುವ
ಬದಲು ವರ್ಷದಲ್ಲಿ ಕನಿಷ್ಠ ಎರಡು ಬಾರಿ ದಾನ ಮಾಡುವ ಮೂಲಕ ಆರೋಗ್ಯವಂತರಾಗಿ ಬಾಳಬೇಕು ಎಂದು ಸಲಹೆ
ನೀಡಿದರು. ಅಧ್ಯಕ್ಷತೆ ವಹಿಸಿದ್ದ ಆರ್ಬಿಟ್‌ ಸಂಸ್ಥೆ ನಿರ್ದೇಶಕ ಅನೀಲ ಕ್ಲಾಸ್ತಾ ಮಾತನಾಡಿ, 18-60 ವರ್ಷದೊಳಗಿನ 45
ಕೆಜಿಗಿಂತ ಹೆಚ್ಚು ತೂಕ ಹೊಂದಿರುವ, 12.5 ಪ್ರಮಾಣ ರಕ್ತದ ಅಂಶ ಉಳ್ಳ ವ್ಯಕ್ತಿಗಳು ರಕ್ತದಾನ ಮಾಡಬಹುದು.

ಆದರೇ ಗರ್ಭಿಣಿಯರು, ದೀರ್ಘ‌ ಕಾಲದಿಂದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ರಕ್ತದಾನ ಮಾಡಲು
ಅನರ್ಹರಾಗಿತ್ತಾರೆ. ರಸ್ತೆ ಅಪಘಾತ ಇತ್ಯಾದಿ ಸಂದರ್ಭಗಳಲ್ಲಿ ಅದೇಷ್ಟೋ ವ್ಯಕ್ತಿಗಳು ರಕ್ತ ಸಿಗದೇ ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಅಂಥ ಸಂದರ್ಭಧಲ್ಲಿ ನಾವು ನೀಡಿದ ರಕ್ತ ಒಂದು ಜೀವ ಉಳಿಸುತ್ತದೆ ಎಂದರೇ ಅದಕ್ಕಿಂತ ದೊಡ್ಡ ಸೇವೆ ಮತ್ತೂಂದಿಲ್ಲ. ಈ ನಿಟ್ಟಿನಲ್ಲಿ ತಪ್ಪು ಕಲ್ಪನೆ ತೊರೆದು ನಮ್ಮ ಆರೋಗ್ಯದ ಜತೆಗೆ ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಸಲಹೆ ನೀಡಿದರು.

ಶಿಬಿರದಲ್ಲಿ ಒಟ್ಟು 60 ಜನ ರಕ್ತದಾನ ಮಾಡಿದರು. ಫಾದರ್‌ ಲಾರೆನ್ಸ್‌, ಅರುಣ ಮಮತಾ, ಆರೋಗ್ಯ ಇಲಾಖೆ ಹಿರಿಯ
ಆರೋಗ್ಯ ಸಹಾಯಕ ತೀರ್ಥಪ್ಪ ಭೀಮಶಟ್ಟಿ ಇದ್ದರು. 


Trending videos

Back to Top