CONNECT WITH US  

ಬಿಜೆಪಿ ನಾಲ್ಕು ವರ್ಷದ ಸಾಧನೆ ಕೈಪಿಡಿ ವಿತರಣೆ

ಬಸವಕಲ್ಯಾಣ: ಹಾರಕೂಡ ಗ್ರಾಮದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿ ವತಿಯಿಂದ ಸಮರ್ಥನೆಗಾಗಿ ಸಂಪರ್ಕ ಕಾರ್ಯಕ್ರಮ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಾಗೂ ಸಂಸದ ಭಗವಂತ ಖೂಬಾ ಅಧಿಕಾರವಧಿಯ ನಾಲ್ಕು ವರ್ಷದಲ್ಲಿ ಮಾಡಿದ ಸಾಧನೆಯ ಕೈಪಿಡಿಯನ್ನು ಹಾರಕೂಡದ ಡಾ|ಚನ್ನವೀರ ಶಿವಾಚಾರ್ಯರರಿಗೆ ನೀಡಿ, ಬರುವ ಲೋಕಸಭಾ ಚುನಾವಣೆಗೆ ಶ್ರೀಗಳಿಗೆ ಸಂಪರ್ಕ ಮಾಡಿ ಸಮರ್ಥನೆ ಮಾಡಿಕೊಳ್ಳಲಾಯಿತು.

ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶೈಲೆಂದ್ರ ಬೆಲ್ದಾಳೆ ಮಾತನಾಡಿ, ಕೇಂದ್ರದ ಎನ್‌ಡಿಎ ಸರಕಾರವು ಕಳೆದ ನಾಲ್ಕು ವರ್ಷಗಳಲ್ಲಿ ಬಡವರ, ದಿನದಲಿತರ, ಯುವಕರ ಕಲ್ಯಾಣಕ್ಕಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದ್ದು, ನಮ್ಮ ಜಿಲ್ಲೆಯ ಜನತೆ ಕೂಡ ಇದರ ಪ್ರಯೋಜನ ಪಡೆಯಬೇಕು ಎಂದರು. 

ಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತೂಮ್ಮೆ ಮೋದಿ ನೇತೃತ್ವ ಸರಕಾರ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಪಕ್ಷದ ಕಾರ್ಯಕರ್ತರು ಮುಖಂಡರು ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಬಲಪಡಿಸಬೇಕು ಎಂದು ಮನವಿ ಮಾಡಿದರು.

ನಂತರ ನಗರದ ಬಿಕೆಡಿಬಿ ಸಭಾ ಭವನದಲ್ಲಿ ಪಕ್ಷದ ಪದಾಧಿಕಾರಿಗಳ ಹಾಗೂ ಮುಖಂಡರ ಸಭೆ ನಡೆಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊಮನಾಥ ಪಾಟೀಲ, ಈಶ್ವರ ಸಿಂಗ್‌ ಠಾಕೂರ, ಜಿಲ್ಲಾ ಉಪಾಧ್ಯಕ್ಷ ಶಾಂತಪ್ಪ ಜಿ. ಪಾಟೀಲ, ಜಿಲ್ಲಾ ಕಾರ್ಯದರ್ಶಿ ಸೂರ್ಯಕಾಂತ ಚಿಲ್ಲಾಬಟ್ಟೆ, ತಾಲೂಕು ಅಧ್ಯಕ್ಷ ವೀರಣ್ಣ ಹಲಗೆ, ನಗರ ಅಧ್ಯಕ್ಷ ಶಿವಪುತ್ರ ಗೌರ, ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ದೀಪಕ ಗಾಯಕವಾಡ, ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ಅರವಿಂದ ಮುತ್ತೆ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ರವಿ ಸ್ವಾಮಿ ನಾರಾಯಣಪೂರ, ರಮೇಶ ಧಬಾಲೆ, ಕೃಷ್ಣ ಗೊಣೆ, ಮುಖಂಡರಾದ ರಾಜಕುಮಾರ ಸಿರಗಾಪೂರ, ವಿಜಯಕುಮಾರ ಮಂಠಾಳೆ, ಚಂದ್ರಶೇಖರ ಪಾಟೀಲ, ಶಂಕರ ನಾಗದೆ, ಉಜ್ವಲ ಶಾಸ್ತ್ರಿ ಇದ್ದರು.


Trending videos

Back to Top