CONNECT WITH US  

ಸಾರ್ಥಕ ಬದುಕಿಗೆ ವಚನ ಸಾಹಿತ್ಯ ಅಧ್ಯಯನ ಅವಶ್ಯ

ಕಮಲನಗರ: ಪರಿಪೂರ್ಣ ನೆಮ್ಮದಿಯೊಂದಿಗೆ ಬದುಕು ಸಾರ್ಥಕಗೊಳಿಸಿಕೊಳ್ಳಲು ವಚನ ಸಾಹಿತ್ಯ ಅಧ್ಯಯನ ಮಾಡಬೇಕು ಎಂದು ಪ್ರಾಂಶುಪಾಲ ಬಂಡಯ್ನಾ ಸ್ವಾಮಿ ಹೇಳಿದರು.

ಮಹಾರಾಷ್ಟ್ರ ಗಡಿಭಾಗದ ಉದಗೀರ ಪಟ್ಟಣದ ಉದಯಗಿರಿ ಮಾಹಾವಿದ್ಯಾಲಯದಲ್ಲಿ ಶರಣ ಸಾಹಿತ್ಯ ಪರಿಷತ್‌ ಸಂಸ್ಥಾಪಕರ ಜನ್ಮದಿನಾಚರಣೆ ನಿಮಿತ್ತ ನಡೆದ ವಚನ ದಿನ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಚನ ಸಾಹಿತ್ಯ ಕುಲ, ಜಾತಿ, ಭೇದ-ಭಾವ ಅಳಿಸುವ ಅಸ್ತ್ರವಾಗಿದೆ. ಇಂದಿನ ದಿನಗಳಲ್ಲಿ ಜಾತಿ-ಜಾತಿಗಳಲ್ಲಿ ವಿಷ ಹೆಮ್ಮರವಾಗಿ ಬೆಳೆಯುತ್ತಿದೆ. ಜಾತಿ ಭೂತ ಓಡಿಸಲು ವಚನ ಸಾಹಿತ್ಯ ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ವಚನಗಳಲ್ಲಿರುವ ವೈಚಾರಿಕ ವಿಷಯ ಕುರಿತು ಪ್ರೊ| ದತ್ತಾತ್ರಿ ರಾಜಕುಮಾರ ಮಾತನಾಡಿ, 12ನೇ ಶತಮಾನದ ವೈಭವ, ಶರಣರ ನಡೆ-ನುಡಿ ಮೇಲೆ ಬೆಳಕು ಚೆಲ್ಲಿದರು.

ಪ್ರೊ| ವಿಜಯಕುಮಾರ ಎಕ್ಕೇಳೆ ಮಾತನಾಡಿ, ದೇಶಾದ್ಯಂತ ವಚನ ಸಾಹಿತ್ಯ ಪ್ರಚಾರ, ಅನುಕರಣವಾದರೆ ದೇಶದ
ಸರ್ವತೋಮುಖ ಅಭಿವೃದ್ಧಿ ಆಗುವುದು ಎಂದರು.

ಪ್ರೊ| ರಮೇಶ ಮುಲಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಕಾರಯುಕ್ತ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ಅಧ್ಯಯನ ಮುಖ್ಯವಾಗಿದೆ. ಯಾವ ಮನೆಯಲ್ಲಿ ಶರಣರ ಸಾಹಿತ್ಯವಿದೆಯೋ ಆ ಮನೆ ಶಾಂತಿ ಸಮಾಧಾನದಿಂದ ಕೂಡಿದೆ ಎಂದರು. ಡಾ| ಗಣೇಶ ಹೋನರಾವ್‌ ಸ್ವಾಗತಿಸಿದರು. ಆನಂದ ನಿರೂಪಿಸಿದರು. ಅಭಿಜೀತ ಗೀರಿ
ವಂದಿಸಿದರು


Trending videos

Back to Top