CONNECT WITH US  

ರೆಡ್‌ಕ್ರಾಸ್‌ ಕಾರ್ಯ ಅನನ್ಯ

ಸಿಂದಗಿ: ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ವಿಶ್ವದ ಅತಿದೊಡ್ಡ ಸೇವಾ ಸಂಸ್ಥೆಯಾಗಿದೆ ಎಂದು ಸಿ.ಎಂ. ಮನಗೂಳಿ ಮಹಾವಿದ್ಯಾಲಯದ ಯುವ ರೆಡ್‌ಕ್ರಾಸ್‌ ಘಟಕದ ಸಂಯೋಜನಾಧಿಕಾರಿ ಪ್ರಾಧ್ಯಾಪಕ ಬಿ.ಎನ್‌. ಪಾಟೀಲ ಇಬ್ರಾಹಿಂಪುರ ಹೇಳಿದರು.

ಪಟ್ಟಣದ ತಹಶೀಲ್ದಾರ್‌ ಕಚೇರಿ ಸಭಾಭವನದಲ್ಲಿ ಭಾರತೀಯ ರೇಡ್‌ ಕ್ರಾಸ್‌ ತಾಲೂಕು ಸಂಸ್ಥೆ ಹಾಗೂ ಸಿ.ಎಂ. ಮನಗೂಳಿ ಮಹಾವಿದ್ಯಾಲಯದ ಯುವ ರೆಡ್‌ ಕ್ರಾಸ್‌ ಘಟಕದ ಸಂಯುಕ್ತ ಅಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೆಡ್‌ಕ್ರಾಸ್‌ ಸಂಸ್ಥಾಪಕ ಜಿನ್‌ಹೆನ್ರಿ ಡುನಾಂಟ್‌ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವದ ಯಾವುದೇ ಭಾಗದಲ್ಲಿ ವಿಪತ್ತು ಸಂಭವಿಸಿದಾಗ ಅವುಗಳನ್ನು ಎದುರಿಸುವುದು ಹೇಗೆ. ಭೂಕಂಪ, ಯುದ್ಧ, ಸುನಾಮಿಯಂತ ಯಾವುದೇ ದುರ್ಘ‌ಟನೆಗಳು ಸಂಭವಿಸಲಿ ಅಲ್ಲಿ ಸೇವೆ ಮಾಡಲು ಪ್ರಥಮವಾಗಿ ಧಾವಿಸಿ ಬರುವುದೇ ರೆಡ್‌ಕ್ರಾಸ್‌ ಸಂಸ್ಥೆ. ಅದಕ್ಕಾಗಿ ರೆಡ್‌ಕ್ರಾಸ್‌ ಸಂಸ್ಥೆ ಸಂಸ್ಥಾಪಕ ಜಿನ್‌ಹೆನ್ರಿ ಡುನಾಚಿಟ್‌ ಅವರನ್ನು ವಿಶ್ವವೇ ಗೌರವಿಸುತ್ತದೆ ಎಂದರು.

ಭಾರತೀಯ ರೆಡ್‌ಕ್ರಾಸ್‌ ತಾಲೂಕಾಧ್ಯಕ್ಷ ಬಿ.ಎಂ.ಬಿರಾದಾರ ಮಾತನಾಡಿ, ರೆಡ್‌ ಕ್ರಾಸ್‌ ಸಂಸ್ಥೆ ಆಪತ್ತು ಕಾಲದಲ್ಲಿ ನಿಧಿ ಸಂಗ್ರಹ, ಬ್ಲಿಡ್‌ಬ್ಯಾಂಕ್‌ ಸ್ಥಾಪಿಸುವುದು, ಎಚ್‌ ಐವಿ, ಏಡ್ಸ್‌ ಕಾರ್ಯಕ್ರಮಗಳ ತರಬೇತಿ ಕೇಂದ್ರ ಸ್ಥಾಪಿಸುವುದು, ರೈಲು ಅಪಘಾತದಲ್ಲಿ ಬೆಂಕಿ ಸಂಭವಿಸಿದಾಗ ರಕ್ತ, ಆಹಾರ ಮತ್ತು ನೀರು ಒದಗಿಸುವ ಜೊತೆಗೆ ಮಾನವಿಯ ಸೇವೆ ಮಾಡುತ್ತ ಬಂದಿದೆ ಎಂದರು.

ಡಾ| ಶಾಂತು ಮನಗೂಳಿ, ಸಿದ್ದಬಸವ ಕುಂಬಾರ ಮಾತನಾಡಿದರು. ಡಾ| ಎ.ಬಿ. ಸಿಂದಗಿ, ಎಸ್‌.ಎಸ್‌. ಮಲ್ಲೇದ ಅವರು ವೇದಿಕೆ ಮೇಲೆ ಇದ್ದರು. ಡಾ|ಆರ್‌. ಎಂ.ಪಾಟೀಲ, ವಿ.ಬಿ.ಪಾಟೀಲ, ಗ್ರಂಥಪಾಲಕ ಆರ್‌.ಪಿ.ಬಿರಾದಾರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಭಾರತೀಯ ರೇಡ್‌ ಕ್ರಾಸ್‌ ತಾಲೂಕಾ ಸಂಸ್ಥೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Trending videos

Back to Top