CONNECT WITH US  

ಹಿಂದೂ ಪರ ಕೆಲ್ಸ ಮಾಡಿ,ಸಾಬ್ರ್‌ ಪರವಾಗಿ ಅಲ್ಲ:ಶಾಸಕ ಯತ್ನಾಳ್‌ ವಿವಾದ

 ವಿಜಯಪುರ : ಬಿಜೆಪಿ ಶಾಸಕ ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಕೋಮ ವಿಚಾರದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿ  ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ಸಂಘಟನೆಯೊಂದರ ವತಿಯಿಂದ ನಡೆದ ಶಿವಾಜಿ ಮಹಾರಾಜರ ಕುರಿತಾಗಿನ ಸಮಾರಂಭದ ವೇದಿಕೊಯಂದರಲ್ಲಿ ಮಾತನಾಡಿದ ಯತ್ನಾಳ್‌ ಅವರು ಮಾಡಿರುವ ವಿವಾದಾತ್ಮಕ ಭಾಷಣದ ವಿಡಿಯೋ ಬಹಿರಂಗವಾಗಿದ್ದು ವೈರಲ್‌ ಆಗಿದೆ. 

'ಸಾಬ್ರ್‌ಗ್‌ ನಾನ್‌ ಮೊದಲೇ ಹೇಳಿದ್ದೆ ವೋಟ್‌ ಹಾಕೋದ್‌ ಬ್ಯಾಡಿ ಅಂತಾ.ನಮ್ಮವರಿಗೆಲ್ಲಾ  ತಾಕೀತ್‌ ಮಾಡಿದ್ದೆ ,ಕಾರ್ಪೋರೇಟರ್‌ಗಳನ್ನು ಕರೆದು ಹೇಳಿದ್ದೆ, ಇನ್ನು ನೀವು ಹಿಂದೂ ಪರ ಕೆಲ್ಸ ಮಾಡ್ಬೇಕು, ಸಾಬ್ರ್‌ ಪರವಾಗಿ ಅಲ್ಲ. ನನ್‌ ಆಫೀಸ್‌ ಮುಂದೆ ಬುರ್ಖಾ,ಟೋಪಿ  ಹಾಕ್ದೋರು ತಪ್ಪಿನೂ ಬರ್ಬಾರ್ದು ಅಂತಾ ಹೇಳಿದ್ದೇನೆ' ಎಂದರು. 

'ವಿಜಯಪುರ ನಗರದಲ್ಲಿ ನನಗ್‌ ವೋಟ್‌ ಹಾಕ್‌ದೋರು ಯಾರು? ಸಾಬ್‌ರಿಗೆ ಕೆಲ್ಸ ಮಾಡುವುದು ಬ್ಯಾಡ' ಎಂದಿದ್ದಾರೆ. 

ಹಿಂದೂ ಪರ ಮಾತನಾಡುವುದೇ ತಪ್ಪಾ ? 

ವಿವಾದಾತ್ಮಕ ಹೇಳಿಕೆ ಕುರಿತು ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯತ್ನಾಳ್‌ 'ದೇಶದಲ್ಲಿ ಹಿಂದೂ ಪರ ಮಾತನಾಡುವುದು ತಪ್ಪಾ' ಎಂದು ಪ್ರಶ್ನಿಸಿದರು. 

'ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ದೇಶ ವಿರೋಧಿ ಹೇಳಿಕೆ ಕೊಟ್ಟರೆ ಅವರ ವಿರುದ್ಧ ಕ್ರಮವಿಲ್ಲ. ಓವೈಸಿ ಮಾತನಾಡಿದರೆ ಸರಿ ನಾನು ಮಾತನಾಡಿದರೆ ತಪ್ಪೇ' ಎಂದು ಪ್ರಶ್ನಿಸಿದರು. 

'ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ಹಫ್ತಾ ವಸೂಲು, ದೌರ್ಜನ್ಯ ಆಗುತ್ತಿದೆ ಹಾಗಾಗಿ ನಾನು ಮಾತನಾಡಿದ್ದೇನೆ' ಎಂದರು.

Trending videos

Back to Top