CONNECT WITH US  

ಕಾಂಗ್ರೆಸ್‌ ಅಭ್ಯರ್ಥಿ ಸುನೀಲಗೌಡ ಗೆಲುವಿಗೆ ಶ್ರಮಿಸಲು ಕರೆ

ಇಂಡಿ: ಕಾಂಗ್ರೆಸ್‌ ಪಕ್ಷ ಸರ್ವ ಜನಾಂಗವನ್ನು ಸಮಾನತೆಯಿಂದ ಕಾಣುವ ಏಕೈಕ ಪಕ್ಷವಾಗಿದ್ದು ವಿಧಾನ
ಪರಿಷತ್‌ ಉಪ ಚುನಾವಣೆ ಬರುವ 6ನೇ ತಾರೀಖೀನಂದು ನಡೆಯುತ್ತಿರುವದರಿಂದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಒಗ್ಗಟ್ಟಿನಿಂದ ಕಾಂಗ್ರೆಸ್‌ ಅಭ್ಯರ್ಥಿ ಸುನೀಲಗೌಡ ಪಾಟೀಲರ ಗೆಲುವಿಗಾಗಿ ಶ್ರಮಿಸಬೇಕೆಂದು ತಾಪಂ ಅಧ್ಯಕ್ಷ
ರುಕ್ಮುದ್ದೀನ ತದ್ದೇವಾಡಿ ಮನವಿ ಮಾಡಿಕೊಂಡರು.

ತಾಲೂಕಿನ ಅಂಜುಟಗಿ-ಝಳಕಿ, ಬಳ್ಳೊಳ್ಳಿ ಗ್ರಾಪಂನಲ್ಲಿ ವಿಧಾನ ಪರಿಷತ್‌ ಉಪ ಚುನಾವಣೆ ಪ್ರಯುಕ್ತ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ವಿಧಾನ ಪರಿಷತ್‌ ಅಭ್ಯರ್ಥಿ ಸುನೀಲಗೌಡ ಪಾಟೀಲಯುವ ಉತ್ಸಾಹಿಯಾಗಿದ್ದು ವಿಜಯಪುರ ಜಿಲ್ಲೆಯಲ್ಲಿ ಅವರ ಮನೆತನಕ್ಕೆ ಒಂದು ಗೌರವ ಇದೆ. ಸುನೀಲಗೌಡ ಪಾಟೀಲರ ಸಹೋದರ ಡಾ| ಎಂ.ಬಿ. ಪಾಟೀಲರು ಈ ಹಿಂದೆ ಕಾಂಗ್ರೆಸ್‌ ಸರಕಾರ ಆಡಳಿತ ಅವ ಧಿಯಲ್ಲಿ ನೀರಾವರಿ ಸಚಿವರಾಗಿ ಬರದ ನಾಡಿನಲ್ಲಿ ಸಂಪೂರ್ಣ ನೀರಾವರಿ ಮಾಡಿ ರೈತರ ಭೂಮಿಗೆ ನೀರು ನೀಡಿ ಆಧುನಿಕ ಭಗೀರಥ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಂಡಿ ಮತಕ್ಷೇತ್ರದಲ್ಲಿ ಬರುವ ಸ್ಥಳೀಯ ಆಡಳಿತ ಕಾಂಗ್ರೆಸ್‌ ಮಡಿಲಿಗೆ ಇರುವುದರಿಂದ್ದ ಸುನೀಲಗೌಡರ ಗೆಲುವ ನೂರಕ್ಕೆ ನೂರರಷ್ಟು ಖಚಿತ ಎಂದ ಅವರು, ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಭೀಮಾಶಂಕರ ಸಕ್ಕರೆ ಕಾರ್ಖಾನೆ, ಲಿಂಬೆ ಅಭಿವೃದ್ಧಿ ಮಂಡಳಿ, ಹೆಲಿಪ್ಯಾಡ್‌ ನಿರ್ಮಾಣ, ಪಟ್ಟಣದ ರಸ್ತೆಗಳ ಅಗಲೀಕರಣ, ತಾಲೂಕಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳ ಅಂಜೂರಾತಿ ತರುವದರೊಂದಿಗೆ ಅವುಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದಾರೆ ಎಂದರು.

12ನೇ ಶತಮಾನದಲ್ಲಿ ಬಸವಣ್ಣ ಎಲ್ಲ ಜನಾಂಗವನ್ನು ಅನುಭವ ಮಂಟಪ್ಪದಲ್ಲಿ ಕೂಡಿಸಿದಂತೆ ಇಂದು ಅವರ ಆಡಳಿತದಲ್ಲಿ ಎಲ್ಲ ಸಮುದಾಯವನ್ನು ಪ್ರೀತಿ, ವಿಶ್ವಾಸದಿಂದ ಕಂಡು ಸಾಮಾಜಿಕ ನ್ಯಾಯ ನೀಡಿದ್ದಾರೆ. ಆದ್ದರಿಂದ ವಿಧಾನ ಪರಿಷತ್‌ ಚುನಾವಣೆ ಈ ಎಲ್ಲ ನಾಯಕರ ಅಪೇಕ್ಷೆ ಮೇರೆಗೆ ಸುನೀಲಗೌಡ ಪಾಟೀಲರು ಸ್ಪರ್ಧಿಸಿರುವುದರಿಂದ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕರಿಗೆ ಆಶೀರ್ವಾದ ಮಾಡಿದಂತೆ ಇವರಿಗೂ ಅತಿ ಹೆಚ್ಚಿನ ಮತಗಳ ಅಂತರಿಂದ ಗೆಲ್ಲಿಸಿ ಶಾಸಕರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿಕೊಂಡರು.

ಶ್ರೀಶೈಲ ಮಹಾದೇವ ಬನಸೋಡೆ, ರಮೇಶಗೌಡ ಪಾಟೀಲ, ಲಲಿತಾ ಪಾಸಂಗೆ, ಮಲ್ಲಮ್ಮ ವಾಲೀಕಾರ, ರತ್ನಾಕರ ಕ್ಷತ್ರಿ, ಲಲಿತಾ ಕೋಳಿ, ಜಗನ್ನಾಥ ಪಾಟೀಲ, ಸುವರ್ಣಾ ಬಗಲಿ, ವಿಜಯಲಕ್ಷ್ಮೀ ಅಷ್ಟಗಿ, ಸುವರ್ಣಾ ಕರೇಪ್ಪನವರ್‌, ಉಮೇಶ ಬಿರಾದಾರ, ಶೋಭಾ ಕಾಂಬಳೆ, ಜಯಶ್ರೀ ಮೇತ್ರಿ, ಅಶೋಕ ಕಾಪಸೆ, ಬಸವರಾಜ ಪೂಜಾರಿ, ಚಂದ್ರಕಾಂತ ಮೇತ್ರಿ, ಅಫಜಲಖಾನ ಗೋಡೆಮಾಲ, ರಾಜೇಶ್ವರಿ ತೇಲಿ, ಶಾಂತಾಬಾಯಿ ಸಿಂಧೆ, ಬಸಲಿಂಗಪ್ಪಗೌಡ ಬಿರಾದಾರ, ಅಪ್ಪಶ್ಯಾ ಹರಿಜನ, ಅಣ್ಣಪ್ಪ ತಳವಾರ, ಇಕ್ಬಾಲ್‌ ಪಠಾಣ, ಹನುಮಂತ ಕೋಳಿ, ಹುಸೇನಬಾಷಾ ಪಾಸಂಗೆ, ಅಬ್ದುಲ ಮುಲ್ಲಾ, ಪರಶುರಾಮ ಬಗಲಿ, ಮಾಳಪ್ಪ ಶಿಡ್ಯಾಳ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು.

Trending videos

Back to Top