CONNECT WITH US  

ಕಾಯಕ ಆಧಾರಿತ ಶ್ರೇಷ್ಠ ಬದುಕು ಕಟ್ಟಿಕೊಟ್ಟವರು ಶರಣರು

ವಿಜಯಪುರ: ಜಾಗತಿಕ ಇತಿಹಾಸ ಪರಂಪರೆಯಲ್ಲಿ ಕಾಯಕ ಆಧಾರಿತ ಶ್ರೇಷ್ಠವಾದ ಬದುಕನ್ನುಕಟ್ಟಿ ಕೊಡುವಲ್ಲಿ ಬಸವಾದಿ ಶರಣ ಶರಣೆಯರ ಸಂದೇಶಗಳು ಮಾರ್ಗದರ್ಶ ನೀಡುತ್ತವೆ ಎಂದು ಡಾ| ವಿ.ಡಿ. ಐಹೊಳ್ಳಿ ಅಭಿಪ್ರಾಯಪಟ್ಟರು.

ಬಬಲೇಶ್ವರದ ಶಾಂತವೀರ ಸಭಾ ಭವನದಲ್ಲಿ ವಿಜಯಪುರ ತಾಲೂಕು ಶರಣ ಸಾಹಿತ್ಯ ಪರಿಷತ್‌, ಶಾಂತವೀರ ಪ್ರೌಢ ಶಾಲೆ ಬಬಲೇಶ್ವರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಚನ ದಿನ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣರ ಸಂದೇಶ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಸಮಾಜದಲ್ಲಿ ಬೇರು ಬಿಟ್ಟಿದ್ದ ಕಂದಾಚಾರಗಳು, ಅಂಧ ಶ್ರದ್ಧೆಗಳನ್ನು ತೊಲಗಿಸುವಲ್ಲಿ ಶರಣರ ಪಾತ್ರ ಮಹತ್ವದ್ದಾಗಿದೆ. ವಿಷಯ ಆಚರಣೆಗಳೊಂದಿಗೆ ವಿಷ ವರ್ತುಲದಲ್ಲಿ ಸಿಲುಕಿ ನರಳುತ್ತಿರುವ ಸಮಾಜಕ್ಕೆ ವೈಚಾರಿಕ ಜ್ಞಾನದ ಬೆಳಕಿನ ಮೂಲಕ ಮಾನಸಿಕ ಬಂಧ ಮುಕ್ತಗೊಳಿಸಲು ಶರಣರ ಸಂದೇಶಗಳು ಸಾರ್ವಕಾಲಿಕ ಮಾರ್ಗದರ್ಶಿ ಎಂದು ಬಣ್ಣಿಸಿದರು. 

ಲಿಂಗ, ವರ್ಣ, ವರ್ಗ ಬೇಧಗಳನ್ನೆಲ್ಲಧಿಕ್ಕರಿಸಿ ಸಮ ಸಮಾಜದ ನಿರ್ಮಾಣಕ್ಕಾಗಿ ಜಾತಿ ರಹಿತ ವ್ಯವಸ್ಥೆ ಜಾರಿಗೆ ತಂದರು. ಸರ್ವರಿಗೂ ಸಮಪಾಲು ಸಮಬಾಳ್ವೆ ಪರಿಕಲ್ಪನೆಯಲ್ಲಿ ಬದುಕು ಕಟ್ಟಿಕೊಡುವಲ್ಲಿ ಶರಣರು ಶ್ರಮಿಕ ಸಂಸ್ಕೃತಿಯನ್ನು ಪ್ರತಿಪಾದಿಸಿದರು. ಇದಕ್ಕಾಗಿ ಕಾಯಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದರು ಎಂದು ವಿಶ್ಲೇಷಿಸಿದರು.

ಶಾಂತವೀರ ಪಪೂ ಕಾಲೇಜಿನ ಉಪನ್ಯಾಸಕ ಮಲ್ಲಿಕಾರ್ಜುನ ಅವಟಿ ಮಾತನಾಡಿ, 12ನೇ ಶತಮಾನದ ಶರಣರ ವಚನ ಸಾಹಿತ್ಯವು ವಿಶ್ವ ಸಾಹಿತ್ಯವಾಗಿದೆ. ಜಗತ್ತಿನ ಎಲ್ಲ ವಯಸ್ಕರ ಭೌತಿಕ, ಅಧ್ಯಾತ್ಮಿಕ ಜೀವನದ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅತ್ಯಮೂಲ್ಯ ಸಾಹಿತ್ಯವಾಗಿದೆ. ತೃಪ್ತಿಯೊಂದಿಗೆ ಪ್ರಗತಿಯನ್ನು ಸಾಧಿಸುವ ಸರಳ ಜೀವನ, ಕಂದಾಚಾರ ರಹಿತ ಆಚರಣೆ ನಡೆ ನುಡಿ ಒಂದಾಗಿ ಬಾಳುವಂತಹ ದಾರಿ ದೀಪವೇ ವಚನ ಸಾಹಿತ್ಯವಾಗಿದೆ ಎಂದರು. 

ಇಂದುಮತಿ ಲಮಾಣಿ ಮಾತನಾಡಿ, ಜಾತಿ, ಮತ, ಪಂತ ಬೇಧದ ವಿರುದ್ಧ ಹೋರಾಡಿದ ಶರಣರು ಸದಾಚಾರ ಸಂಪನ್ನರಾಗಿ ಕಾಯಕ ಅಪ್ಪಿಕೊಂಡವರು. ಪ್ರಸಕ್ತ ಸಂದರ್ಭದಲ್ಲಿ ಸಮಾಜಕ್ಕೆ ಅದರಲ್ಲೂ ಇಂದಿನ ಯುವ ಸಮೂಹಕ್ಕೆ ಬಸವತತ್ವ ಆದರ್ಶಗಳ ಮನವರಿಕೆ ಮಾಡಿಕೊಡುವುದು ಅಗತ್ಯವಾಗಿದೆ ಎಂದರು.

ವಚನ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪಲ್ಲವಿ ಮಾಳಿ, ದ್ವಿತೀಯ ಸ್ಥಾನ ಪಡೆದ ಐಶ್ವರ್ಯ ಬಿರಾದಾರ, ತೃತೀಯ ಸ್ಥಾನ ಪಡೆದ ವೀಣಾ ತೊದಲಬಾಗಿ ಅವರಿಗೆ ಬಹುಮಾನ ವಿತರಿಸಲಾಯಿತು.

ಗ್ರಾಮಾಂತರ ವಿದ್ಯಾವರ್ಧಕ ಸಂಘದ ಜಂಟಿ ಕಾರ್ಯದರ್ಶಿ ಡಿ.ಎಸ್‌. ಆಲಗೊಂಡ ಅಧ್ಯಕ್ಷತೆ ವಹಿಸಿದ್ದರು. ಡಾ| ಶಶಿಧರ ಶಿರಹಟ್ಟಿ, ಎಸ್‌.ಎಸ್‌. ಪಾಟೀಲ, ಜಿ.ಕೆ. ಕೊಟ್ಯಾಳ, ಐ.ಎಸ್‌. ಹುಂಡೇಕಾರ, ಎಚ್‌.ಬಿ. ಬಡಿಗೇರ, ವನಿತಾ ಜಂಗಮಶೆಟ್ಟಿ, ಐ.ಎಸ್‌. ಬೂದಿಹಾಳ, ಎಂ.ವಿ. ನಾಯಕೋಡಿ ವೇದಿಕೆಯಲ್ಲಿದ್ದರು ಕೆ.ಆರ್‌. ಅರಕೇರಿಮಠ ನಿರೂಪಿಸಿದರು. ಎಲ್‌.ಪಿ. ಬಿರಾದಾರ ಸ್ವಾಗತಿಸಿದರು. ಎಸ್‌.ಪಿ. ಬಿರಾದಾರ ವಂದಿಸಿದರು.

ಇಂದು ಹೆಚ್ಚು ಓದಿದ್ದು

ಶಬರಿಮಲೆ: ನಿಳಕ್ಕಲ್‌ನಲ್ಲಿ ಮಹಿಳೆಯರಿಂದ ವಾಹನ ತಪಾಸಣೆ.

Oct 17, 2018 06:09am

ಬಿಜೆಪಿಗೆ ಸೇರ್ಪಡೆಯಾದ ಕಾಂಗ್ರೆಸ್‌ ನಾಯಕರಾದ ಸುಭಾಷ್‌ ಶಿರೋಡ್ಕರ್‌, ದಯಾನಂದ ಸೋಪ್ಟೆ ಅವರನ್ನು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಹೊಸದಿಲ್ಲಿಯಲ್ಲಿ ಅಭಿನಂದಿಸಿದರು.

Oct 17, 2018 11:38am

Trending videos

Back to Top