ಆರೆಸ್ಸೆಸ್‌ನಿಂದ ಧರ್ಮ ರಕ್ಷಣೆ


Team Udayavani, Oct 21, 2018, 4:04 PM IST

vij-2.jpg

ಇಂಡಿ: ಕಳೆದ 93 ವರ್ಷದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದೂ ಧರ್ಮದ ಅಭ್ಯುದಯಕ್ಕಾಗಿ ಅನೇಕ ಕಾರ್ಯ ಚಟುವಟಿಕೆಗಳನ್ನು ದೇಶದಲ್ಲಿ ಹಮ್ಮಿಕೊಳ್ಳುತ್ತ ಬಂದಿದೆ ಎಂದು ಕರ್ನಾಟಕ ಉತ್ತರ ಪ್ರಾಂತದ ಬೌದ್ಧಿಕ ಪ್ರಮುಖ ಕೃಷ್ಣ ಜೋಶಿ ಹೇಳಿದರು. ಪಟ್ಟಣದ ಸಿಂದಗಿ ರಸ್ತೆಯ ಜಿಆರ್‌ಜಿ ಕಲಾ ಹಾಗೂ ವೈಎಪಿ ಕಾಮರ್ಸ್‌ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಆಕರ್ಷಕ ಪಥ ಸಂಚಲನ ನಂತರ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಘಟನೆಯಾಗಿರುವ ಸ್ವಯಂ ಸೇವಕ ಸಂಘ ರಾಷ್ಟ್ರ ಭಕ್ತಿ, ಸಂಸ್ಕಾರ, ಯೋಗ್ಯ ವ್ಯಕ್ತಿತ್ವ ಶಾರೀರಿಕ ದೃಢತೆ, ಗೋ ಸಂರಕ್ಷಣೆ, ಸಂವರ್ಧನೆ, ಧರ್ಮ ಜಾಗರಣೆ, ಗ್ರಾಮ ವಿಕಾಸದಂತಹ ಅಭಿವೃದ್ಧಿ ಚಟುವಟಿಕೆಗಳನ್ನು ದೇಶದ 60 ಸಾವಿರ ಗ್ರಾಮಗಳಲ್ಲಿ
1.70 ಲಕ್ಷ ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ. ಸಂಘ ಸಂಸ್ಕೃತಿ, ಯೋಗ್ಯ ವ್ಯಕ್ತಿತ್ವ ನಿರ್ಮಾಣ, ಸಮಾಜ ಹಿತ ಕಾಯುವ ಜೊತೆಯಲ್ಲಿ 5 ಆಯಾಮಗಳ ಮೂಲಕ ಧರ್ಮ ಜಾಗರಣಾ ಕಾರ್ಯ ಮಾಡುತ್ತಿದೆ ಎಂದರು.

ದೇಶದಲ್ಲಿ ಭಯೋತ್ಪಾದಕರಿಗೆ ನೆಲೆ ನೀಡುವಂತಹ ಕಾರ್ಯಗಳನ್ನು ಕೆಲ ವಿದ್ವಾಂಸಕಾರಿ ವ್ಯಕ್ತಿಗಳುಮಾಡಡುತ್ತಿರುವುದು ಕಳವಳಕಾರಿ ಸಂಗತಿ. ದೇಶದ ಯುವಕರು ಜಾಗೃತರಾಗಬೇಕು. ಪ್ರತಿ ವರ್ಷ ಲವ್‌ ಜಿಹಾದ್‌ನಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು  ವತಿಯರನ್ನು ಈ ಜಾಲಕ್ಕೆ ಬೀಳಿಸಿ ವೆಶ್ಯಾವಾಟಿಕೆಗೆ ತಳ್ಳುವಂತಹ ಕಾರ್ಯ ನಡೆಯುತ್ತಿದೆ. ಅಲ್ಲದೆ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಿದ್ದು ಯುವತಿಯರು ಎಚ್ಚರವಾಗಿರಬೇಕು. ದುಷ್ಕೃತ್ಯ, ದುರಾಚಾರ, ಅತ್ಯಾಚಾರ, ಮಾಡುವವರ ಬಗ್ಗೆ ಸಮಾಜ ಎಚ್ಚರದಿಂದಿರಬೇಕು ಎಂದರು.

ದೇಶದ ಯುವಕರಲ್ಲಿ ರಾಷ್ಟ್ರಭಕ್ತ, ಮಹಾಪುರುಷರ ಜೀವನ ಚರಿತ್ರೆ ಹಾಗೂ ಸಂಸ್ಕಾರಗಳನ್ನು ಶಿಬಿರದಲ್ಲಿ ಹೇಳಿಕೊಡಲಾಗಿದ್ದು 143 ಶಿಬಿರಾರ್ಥಿಗಳು
ಶಿಬಿರದಲ್ಲಿ ಪಾಲ್ಗೊಂಡು ಉತ್ತಮ ಸಂಸ್ಕಾರ, ಆಚಾರ, ವಿಚಾರ ಪಡೆದುಕೊಂಡು ತಮ್ಮ ಕ್ಷೇತ್ರಗಳಲ್ಲಿ ಹಿಂದೂ ಸಮಾಜವನ್ನು ಗಟ್ಟಿಗೊಳಿಸುವ ಕೆಲಸ, ವ್ಯಕ್ತಿತ್ವ ವಿಕಾಸ, ಶರೀರ ಗಟ್ಟಿಗೊಳಿಸುವ ಜೊತೆಗೆ ಬೌದ್ಧಿಕ ವಿಕಾಸ ನೀಡುವ ಕಾರ್ಯ ಯಶಸ್ವಿಯಾಗಿದೆ. ಡಾ|ಹೆಗಡೆವಾರ 1925ರ ವಿಜಯ ದಶಮಿಯಂದು ಹುಟ್ಟು ಹಾಕಿದ ಈ ಸಂಸ್ಥೆ ಇಂದಿಗೂ ನಿರಂತರ ಹಿಂದೂ ಧರ್ಮದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಲಿದೆ. ಕೆಲ ರಾಷ್ಟ್ರ ನಾಯಕರು ಸಂಘಟನೆ ಬಗ್ಗೆ ಅಪಸ್ವರ ಹೇಳಿದ್ದರೂ ಸಹ ಸಂಘದ ನೇತಾರ ಹೆಗಡೆವಾರ ನನಗೆ ದೇಶಾಭಿಮಾನದ ಹುಚ್ಚಿದೆ. ಅದಕ್ಕಾಗಿ ನಾನು
ಸಂಘಟನೆ ಮಾಡುತ್ತಿದ್ದೇನೆ ಎಂದು ಮಾರ್ಮಿಕವಾಗಿ ನುಡಿದಿದ್ದರು ಎಂದರು.

ಉದ್ಯಮಿ ಬಾಹುಬಲಿ ಮುತ್ತಿನ, ಗೋವಿಂದ ಹಿಬಾರೆ, ಡಾ| ಸತೀಶ ಜಿಗಜಿನ್ನಿ ವೇದಿಕೆಯಲ್ಲಿದ್ದರು. ಹಿರಿಯರಾದ ಡಿ.ಆರ್‌. ಶಹಾ, ಸಿದ್ದಲಿಂಗ ಹಂಜಗಿ,
ಪ್ರಭಾಕರ ಬಗಲಿ, ದಯಾನಂದ ಸುರಪುರ, ಕಾಸುಗೌಡ ಬಿರಾದಾರ, ಸಂಕೇತ ಬಗಲಿ, ಮಲ್ಲಯ್ಯ ಪತ್ರಿಮಠ, ಅನಿಲ ಜಮಾದಾರ, ವಿರಾಜ್‌ ಪಾಟೀಲ, ಡಾ| ಶಹಾ, ಜಗದೀಶ ಕ್ಷತ್ರಿ, ದಯಾನಂದ ಸುರಪುರ, ಶ್ರೇಣಿಕ್‌ ಪಾಟೀಲ, ಪ್ರಶಾಂತ ಗವಳಿ, ಶೀಲವಂತ ಉಮರಾಣಿ, ಶ್ರೀಶೈಲಗೌಡ ಬಿರಾದಾರ, ಕಿರಣ ಕ್ಷತ್ರಿ, ಸೋಮು ನಿಂಬರಗಿಮಠ, ಕಿರಣ ಕ್ಷತ್ರಿ ಇದ್ದರು. ಸ್ವಯಂ ಸೇವಕ ಪ್ರಕಾಶ ಕಟ್ಟಿಮನಿ ಸ್ವಾಗತಿಸಿದರು. ವಿವೇಕಾನಂದ ಹಂಜಗಿ ವರದಿ ವಾಚಿಸಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.