ಬರ ಕಾಮಗಾರಿಗೆ ರೈತರ ಆಗ್ರಹ


Team Udayavani, Nov 18, 2018, 2:18 PM IST

vij-1.jpg

ವಿಜಯಪುರ: ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದರೂ ಜಿಲ್ಲೆಯಲ್ಲಿ ಬರ ಗಂಭೀರ ಪರಿಸ್ಥಿತಿ ನಿರ್ವಹಣೆಯಲ್ಲಿ ಆಡಳಿತಗಾರರು ಸಭೆ, ಮಾತಿನಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲೆಯಾದ್ಯಂತ ಅಗತ್ಯ ಅನುದಾನ ಬಿಡುಗಡೆ ಮಾಡಿ ಸರ್ಕಾರ ಬರ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿ ರೈತ ಕಾರ್ಮಿಕರ ಸಂಘಟನೆ ನಗರದಲ್ಲಿ ಪ್ರತಿಭಟನೆ ನಡೆಸಿತು.

ಶನಿವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವ ಸಲ್ಲಿಸಿದ ಪ್ರತಿಭಟನಾಕಾರರು, ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ. ಬರ ಕಾಮಗಾರಿ ಆರಂಭಕ್ಕೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಅಗತ್ಯ ಇರುವ ಅನುದಾನ ಬೇಗ ಬಿಡುಗಡೆ ಮಾಡಬೇಕು. ಕೇವಲ ಸಭೆ, ಸಮಾರಂಭ, ಚರ್ಚೆ, ಮಾತು, ಸಮೀಕ್ಷೆ ಅಂತೆಲ್ಲ ಕಾಲಹರಣ ಮಾಡಬಾರದು ಎಂದು ದೂರಿದರು. 

ಸಂಘಟನೆಯ ಬಿ.ಭಗವಾನ್‌ರೆಡ್ಡಿ ಮಾತನಾಡಿ, ಬರಗಾಲದಿಂದ ತತ್ತರಿಸಿದ ರೈತರಿಗೆ, ಕೃಷಿ ಕಾರ್ಮಿಕರಿಗೆ ಯಾವುದೇ ಸಹಾಯ, ಸಹಕಾರ, ಬೆಳೆ ಪರಿಹಾರ, ಬರಗಾಲ ಕಾಮಗಾರಿ ಆರಂಭಿಸದ ಕಾರಣ ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರ ಕಾಡುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 24 ಜಿಲ್ಲೆಗಳಲ್ಲಿ ಮುಂಗಾರು ವೈಫಲ್ಯದಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದ ನೂರಕ್ಕೂ ಹೆಚ್ಚು ತಾಲೂಕುಗಳು ಭೀಕರ ಬರಗಾಲ ಪೀಡಿತ ಎಂದು ಸರ್ಕಾರವೇ ಘೋಷಿಸಿದೆ. ಇದಲ್ಲದೆ ಹಿಂಗಾರು ಮಳೆ ಸಹ ಆಗದೇ ಇರುವುದು ರೈತನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಆತಂಕ ತೋಡಿಕೊಂಡರು.

ಈಗಾಗಲೇ ಹತ್ತಾರು ಸಮಸ್ಯೆಗಳಿಂದ ಬಳಲುತ್ತಿದ್ದ ರೈತರು ಈ ವರ್ಷ ಬೆಳೆ ಬೆಳೆಯಲು ಮಾಡಿದ ಸಾಲ ತೀರಿಸಲಾಗದೇ ಕಂಗಾಲಾಗಿದ್ದಾರೆ. ಸಾಲಗಾರರ ಕಾಟದಿಂದ ಮರ್ಯಾದೆಗೆ ಹೆದರಿ ರೈತರು ಆತ್ಮಹತ್ಯೆ ಹಾದಿ ಹಿಡಿದ್ದಾರೆ. ಸರಕಾರ ಸಾಲಮನ್ನಾ ಮಾಡುವುದಾಗ ಘೋಷಿಸಿದ್ದರೂ ಕೆಲ ಬ್ಯಾಂಕ್‌ಗಳು ರೈತರಿಗೆ ನೋಟಿಸ್‌ ನೀಡಿ ಕಿರುಕುಳ ನೀಡುತ್ತಿವೆ. ಮತ್ತೂಂದೆಡೆ ರೈತರಿಗೆ ಬರುವ ಅತ್ಯಲ್ಪ ಬೆಳೆನಷ್ಟ ಪರಿಹಾರ, ಬೆಳೆ ಮಾರಾಟದಿಂದ ಬರುವ ಹಣವನ್ನೂ ಬ್ಯಾಂಕ್‌ಗಳು ರೈತರ ಸಾಲಕ್ಕೆ ಜಮೆ ಮಾಡಿಕೊಂಡು ಆರ್ಥಿಕ ಸಂಕಷ್ಟಕ್ಕೆ ದೂರುತ್ತಿವೆ ಎಂದು ಕಿಡಿ ಕಾರಿದರು. 

ಸಂಘಟನೆ ಜಿಲ್ಲಾ ಸಂಚಾಲಕ ಬಾಳು ಜೇವೂರ ಮಾತನಾಡಿ, ಸರ್ಕಾರ ವಿಜಯಪುರ ಜಿಲ್ಲೆ ಎಲ್ಲ ತಾಲೂಕುಗಳು ಬರಪೀಡಿತ ಎಂದು ಘೋಷಿಸಿ ಎರಡು ತಿಂಗಳು ಕಳೆದಿವೆ. ಹೀಗಿದ್ದರೂ ಈಗಲೂ ಜಲ್ಲೆಯಲ್ಲಿ ಬರ ಕಾಮಗಾರ ಆರಂಭಿಸಿಲ್ಲ. ರೈತರ ವಿಷಯದಲ್ಲಿ ಸರ್ಕಾರ ಅತ್ಯಂತ ನಿಷ್ಕಾಳಜಿ ಹೊಂದಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಸರ್ಕಾರ ಈಗಲಾದರೂ ರೈತರ-ಕೃಷಿ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಿ ಸರಕಾರ ಕೂಡಲೇ ಎಲ್ಲ ರೀತಿಯ ಪರಿಹಾರ ಕಾಮಗಾರಿ ಆರಂಭಿಸಬೇಕು. ರೈತರು, ಕೃಷಿ ಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಆಗ್ರಹಿಸಿದರು.

ಭೀಕರ ಬರ ಆವರಿಸಿರುವ ಕಾರಣ ಕೃಷಿಯನ್ನೇ ನಂಬಿದ್ದ ರೈತರು ಮಾತ್ರವಲ್ಲ ಕೃಷಿ ಕಾರ್ಮಿಕರ ಜೀವನ ನಿರ್ವಹಣೆ ಕಷ್ಟವಾಗಿದೆ. ಪರಿಣಾಮ ಕುಟುಂಬ ನಿರ್ವಹಣೆಗೆ ನಗರ ಪ್ರದೇಶಗಳಿಗೆ ಗ್ರಾಮೀಣ ಜನರು ಗುಳೆ ಹೋಗಿದ್ದಾರೆ. ಸರ್ಕಾರ ಇದೇ ರೀತಿ ನಿರ್ಲಕ್ಷé ತಾಳಿದಲ್ಲಿ ಭವಿಷ್ಯದಲ್ಲಿ ಕೃಷಿ
ಕಾರ್ಮಿಕರೇ ಸಿಗದಂತಾಗುತ್ತದೆ. ಸರ್ಕಾರ ಕೂಡಲೇ ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳ ಹೂಳೆತ್ತುವ ಕಾಮಗಾರಿ ಆರಂಭಿಸಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ನೀಡಬೇಕು. ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಮಹಾದೇವ ಲಿಗಾಡೆ, ಶ್ರೀಶೈಲ ನಿಮಂಗ್ರೆ, ತಿಪರಾಯ ಹತ್ತರಕಿ, ಯಲ್ಲಪ್ಪ ರತ್ನಾಪುರ, ಹುಸೇನಸಾಬ ದಳವಾಯಿ, ಸುನೀಲಗೌಡ ಬಿರಾದಾರ, ಧರೆಪ್ಪ ನಿಮಂಗ್ರೆ, ಧರೆಪ್ಪ ಗೋಗ್ರೆ, ಕಲ್ಲಪ್ಪ ನಿಮಂಗ್ರೆ, ಭೀಮಪ್ಪ ಅಗಸರ, ಸುಂದ್ರವ್ವ ಬಳೂತಿ, ಮಲ್ಲಪ್ಪ ಕಲೂಡಿ, ನಿಂಗಯ್ಯ ನಾಗರದಿನ್ನಿಮಠ,
ಶಿವಗಂಗಾ ಕಟ್ಟಿಮನಿ, ಕುರ್ಷಿದ್‌ಬಾನು ಕೂಡಗಿ, ಬೌರವ್ವ ದಳವಾಯಿ, ಶಾಂತಾ ಹಿರೇಮಠ, ಆಸಿಂ ಸಂಗಾಪುರ, ಬಾಳಾಸಾಬ ಕದಂ ಸೇರಿದಂತೆ ಇತರರು ಭಾಗವಹಿಸಿದ್ದರು. 

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KPTCL ಕಂಪೌಂಡ್ ಗೋಡೆ ಮೈಮೇಲೆ ಬಿದ್ದು ಕಾರ್ಮಿಕ ಸಾವು

KPTCL ಕಂಪೌಂಡ್ ಗೋಡೆ ಮೈಮೇಲೆ ಬಿದ್ದು ಕಾರ್ಮಿಕ ಸಾವು

BJP 2

BJP;ಯತ್ನಾಳ್ ಸೇರಿ ಯಾರೇ ಆಗಿದ್ದರೂ ಶಿಸ್ತು ಕ್ರಮ ಕೈಗೊಳ್ಳಬೇಕು: ಶಂಕರಗೌಡ

Vijayapura ಬಿಜೆಪಿಗೆ ಸಂಕಷ್ಟ: ಬಂಡಾಯ ಸ್ಪರ್ಧೆಗೆ ಸಜ್ಜಾದ ನಾಯಿಕ

Vijayapura ಬಿಜೆಪಿಗೆ ಸಂಕಷ್ಟ: ಬಂಡಾಯ ಸ್ಪರ್ಧೆಗೆ ಸಜ್ಜಾದ ನಾಯಿಕ

9-vijayapura

Vijayapura: ಹೆಗಡೆಗೆ ಟಿಕೆಟ್ ಕೊಡಬೇಡಿ: ನಾರಾಯಣಸ್ವಾಮಿ

Politics: ಪಾರ್ಲಿಮೆಂಟ್ ಚುನಾವಣೆ ಬಳಿಕ ಸರ್ಕಾರ ಪತನ; ಛಲವಾದಿ ನಾರಾಯಣಸ್ವಾಮಿ

Politics: ಪಾರ್ಲಿಮೆಂಟ್ ಚುನಾವಣೆ ಬಳಿಕ ಸರ್ಕಾರ ಪತನ; ಛಲವಾದಿ ನಾರಾಯಣಸ್ವಾಮಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.