ಮೈದುಂಬಿ ನಳನಳಿಸುತ್ತಿದೆ ವಿಜಯಪುರ ಸೈನಿಕ್‌ ಸ್ಕೂಲ್‌ ಕೆರೆ

Team Udayavani, Nov 24, 2018, 12:04 PM IST

1.jpg

ವಿಜಯಪುರ: ಕೆರೆ ತುಂಬಿಸುವ ಯೋಜನೆ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿರುವ ವಿಜಯಪುರ ಜಿಲ್ಲೆ ಇದೀಗ ರಕ್ಷಣಾ ಇಲಾಖೆ ವ್ಯಾಪ್ತಿಯ ನಗರದ ಸೈನಿಕ್‌ ಸ್ಕೂಲ್‌ನಲ್ಲಿ ನೂತನವಾಗಿ ಕೆರೆಯನ್ನು ನಿರ್ಮಿಸಿದ್ದು ಆ ಕೆರೆಗೆ ಕೃಷ್ಣಾ ನದಿ ನೀರು ತುಂಬಿಸುತ್ತಿರುವ ಮೂಲಕ ಮತ್ತೂಮ್ಮೆ ನಾಡಿನ ಗಮನ ಸೆಳೆದಿದೆ.

ವಿಜಯಪುರದಲ್ಲಿ 1963ರಲ್ಲಿ ಅಥಣಿ ರಸ್ತೆಯಲ್ಲಿ 406 ಎಕರೆ ವಿಸ್ತೀರ್ಣದ ಸೈನಿಕ್‌ ಶಾಲೆ ಆವರಣ ಮಡ್ಡಿ ಭೂಮಿಯ ಒಣಪ್ರದೇಶ. ಇಲ್ಲಿ ನೀರಿನ ಸೌಲಭ್ಯ ಕಡಿಮೆ. ಹೀಗಾಗಿ ಸೇವೆ ಸಲ್ಲಿಸಿರುವ ಎಲ್ಲ ಪ್ರಾಚಾರ್ಯರು ಸೈನಿಕ್‌ ಸ್ಕೂಲ್‌ ಪ್ರದೇಶವನ್ನು ಹಸರೀಕರಣ ಮಾಡಲು ಅಪಾರ ಶ್ರಮ ವಹಿಸಿ 15 ಸಾವಿರ ಗಿಡಗಳನ್ನು ಇಲ್ಲಿ ಪೋಷಿಸಿಕೊಂಡು ಬರಲಾಗಿದೆ.
 
ಪ್ರಾಚಾರ್ಯ ತಮೊಜಿತ ಬಿಸ್ಪಾಸ್‌ ಕೊರಿಕೆ ಮೇರೆಗೆ 2016ರಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ಇಲ್ಲಿನ ಹೂಳು ತುಂಬಿ ಮುಚ್ಚಿ ಹೋಗಿದ್ದ ಆದಿಲ್‌ಶಾಹಿ ಕಾಲದ 6 ಬಾವಡಿಗಳನ್ನು ಪುನರುಜ್ಜೀವನಗೊಳಿಸಿದ್ದು, ಈಗ ಈ ಬಾವಿಗಳು ಮರಭೂಮಿಯಲ್ಲಿ ಓಯಾಸಿಸ್‌ ಎಂಬಂತೆ ಸೈನಿಕ್‌ ಸ್ಕೂಲ್‌ನ ಮಡ್ಡಿ ಪ್ರದೇಶದಲ್ಲಿ ಜೀವ ಸೆಲೆಯಾಗಿದೆ. ಅದರಿಂದ ಪ್ರೇರಣೆಗೊಂಡ ಸಿಬ್ಬಂದಿ ಟಕ್ಕೆ ಪ್ರದೇಶಕ್ಕೆ ಹೊಂದಿಕೊಂಡ ತಮ್ಮ ಆವರಣದಲ್ಲಿ ಸಣ್ಣ ಕೆರೆ ನಿರ್ಮಿಸಲು ನಿವೇಶನ ಸೂಕ್ತವಾಗಿದ್ದು, ತಾವೇ ಮುತುವರ್ಜಿ ವಹಿಸಿ, ಅನುದಾನ ನೀಡಿ ಕೆರೆ ನಿರ್ಮಿಸಬೇಕು ಎಂದರು.
 
ಅವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಹಾನಗರ ಪಾಲಿಕೆಯಿಂದ 30 ಲಕ್ಷ ರೂ. ಅನುದಾನ ಒದಗಿಸಿ 2 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಿದ್ದಲ್ಲದೆ, ತಾವಾಗಿಯೇ ಒಂದು ಹೆಜ್ಜೆ ಮುಂದೆ ಹೋಗಿ ಸೈನಿಕ್‌ ಸ್ಕೂಲ್‌ ಬದಿಯ ರಿಂಗ್‌ರೋಡ್‌ಗೆ ಹೊಂದಿಕೊಂಡಂತೆ ಐತಿಹಾಸಿಕ ಬೇಗಂ ತಲಾಬ್‌, ಭೂತನಾಳ ಕೆರೆಗಳನ್ನು ಕೃಷ್ಣಾ ನದಿಯಿಂದ ತುಂಬಿಸುವ ಪೈಪ್‌ಲೈನ್‌ನಿಂದ ಸೈನಿಕ್‌ ಸ್ಕೂಲ್‌ ನೂತನ ಕೆರೆಗೂ ಜೋಡಣೆ ಮಾಡಿದರ ಪರಿಣಾಮ ಇಂದಿನಿಂದ ಇಲ್ಲಿನ ಕೆರೆ ತುಂಬುತ್ತಿದೆ. 

ಸೈನಿಕ್‌ ಸ್ಕೂಲ್‌ ಪ್ರದೇಶ ರಕ್ಷಣಾ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಇದು ಸಂರಕ್ಷಿತ ಪ್ರದೇಶವಾಗಿದೆ. ಇಲ್ಲಿ ಪಾದಚಾರಿಗಳ, ವಾಹನಗಳ ಹಾವಳಿ ಇಲ್ಲದೆ ಇರುವುದರಿಂದ ಇಲ್ಲಿ ಹೇರಳವಾಗಿ ನವಿಲು, ಕೊಕ್ಕರೆ, ಪಕ್ಷಿ ಸಂಕುಲಗಳ ಸಂಖ್ಯೆ ಹೆಚ್ಚು. ಈ ಕೆರೆ ತುಂಬುವುದರಿಂದ ಕೇವಲ ಸೈನಿಕ್‌ ಸ್ಕೂಲ್‌ ಆವರಣವಲ್ಲದೇ ಸುತ್ತಿಲಿನ ಖಾಜಾಅಮೀನ್‌ ದರ್ಗಾ, ಟಕ್ಕೆ, ಟ್ರೇಜರಿ ಕಾಲೋನಿಗಳಲ್ಲಿ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುವದು. ಸ್ಕೂಲ್‌ ವ್ಯಾಪ್ತಿಯಲ್ಲಿರುವ 50 ಎಕರೆ ಪ್ರದೇಶದಲ್ಲಿರುವ ತೋಟಕ್ಕೆ ವಿಫುಲವಾಗಿ ನೀರು ದೊರೆಯುವುದಲ್ಲದೆ, ಇಡಿ ಪ್ರದೇಶ ಹಸಿರಿನಿಂದ ಕಂಗೊಳಿಸಲು ಸಹಕಾರಿಯಾಗಲಿದೆ ಎಂದು ಆಡಳಿತಾಧಿಕಾರಿ ಮುರಳಿಧರನ್‌ ತಿಳಿಸಿದ್ದಾರೆ.

ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಮಾಜಿ ಜಲ ಸಂಪನ್ಮೂಲ ಸಚಿವ, ಶಾಸಕ ಎಂ.ಬಿ. ಪಾಟೀಲ ಸೈನಿಕ್‌ ಸ್ಕೂಲ್‌ ಅಧಿಕಾರಿಗಳ ಕೋರಿಕೆ ಮೇರೆಗೆ ಈ ಹಿಂದೆ ಆದಿಲ್‌ಶಾಹಿ ಕಾಲದ ಇಲ್ಲಿನ 6 ಬಾವಡಿಗಳನ್ನು ಹೂಳು ತೆಗೆದು, ಸುತ್ತಲೂ ಫಿನಿಶಿಂಗ್‌ ಅಳವಡಿಸಲಾಗಿತ್ತು.

ನಂತರ ನಾನೇ ಮಹಾನಗರ ಪಾಲಿಕೆ ಅನುದಾನ ಒದಗಿಸಿ, ಕೆರೆ ನಿರ್ಮಾಣಕ್ಕೆ ಚಾಲನೆ ನೀಡಿದ್ದೆ. ಅಲ್ಲದೆ ಆ ಕೆರೆಗೆ ಭೂತನಾಳ ಕೆರೆ ತುಂಬಿಸುವ ಪೈಪ್‌ಲೈನ್‌ಗೆ ಜೊಡಣೆ ಮಾಡಿ ತುಂಬಲು ಯೋಜನೆ ಮಾಡಿದ್ದು, ಇಂದು ಕಾರ್ಯರೂಪಕ್ಕೆ ಬಂದಿದೆ. ಇದರಿಂದ ಸೈನಿಕ್‌ ಸ್ಕೂಲ್‌ ಆವರಣ ವಿಶೇಷ ಕಳೆ ಹೊಂದಲಿದೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು

SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.