CONNECT WITH US  

ಗಣಪತಿಗೆ ಚಂದಾ ಕೊಡದ್ದಕ್ಕೆ ಬಸ್ಕಿ ಹೊಡೆಯೋ ಶಿಕ್ಷೆ!: ವಿಡಿಯೋ

ಗಣಪತಿ ಹಬ್ಬ ಬಂತೆಂದರೆ ಎಲ್ಲೆಡೆ ಸಾರ್ವಜನಿಕವಾಗಿ ಗಣಪತಿ ಕೂರಿಸಿ ಕಾರ್ಯಕ್ರಮ ಮಾಡೋದು ಸಾಮಾನ್ಯ. ಇನ್ನು ಗಣಪತಿ ಉತ್ಸವದ ಹೆಸರಲ್ಲಿ ಚಂದಾ ಎತ್ತೋದೂ ಸಾಮಾನ್ಯ. ಚಂದಾ ಕೊಡೊಲ್ಲ ಅಂದಾಗ ಅಲ್ಲಲ್ಲಿ ಗಲಾಟೆಗಳೂ ನಡೆಯುತ್ತವೆ. ಆದರೆ ಪುಣೆಯಲ್ಲಿ ಚಂದಾ ಕೊಡಲಿಲ್ಲ ಎಂದು ಬೇಕರಿಯಲ್ಲಿ ಕೆಲಸಕ್ಕಿದ್ದ ಮೂವರಿಗೆ ಕಾರ್ಯಕ್ರಮ ಆಯೋಜಕರು ಬಸ್ಕಿ ಹೊಡೆಯುವ ಶಿಕ್ಷೆ ನೀಡಿ ಸಿಕ್ಕಿಬಿದ್ದಿದ್ದಾರೆ.

ಭಾನುವಾರ ಸ್ಥಳೀಯ ಸಂಘಟನೆಯೊಂದರ ಕಾರ್ಯಕರ್ತರು ಚಂದಾ ವಸೂಲಿಗೆ ಬೇಕರಿಗೆ ಹೋಗಿದ್ದಾರೆ. ಅಲ್ಲಿದ್ದ ಮೂವರು ಕಾರ್ಮಿಕರು, ಮಾಲೀಕರು ಇಲ್ಲದ ಕಾರಣ, 151 ರೂ. ಚಂದಾ ಕೋಡೋದಿಕ್ಕೆ ಆಗಲ್ಲ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮೂವರ ಗುಂಪು, ಕಾರ್ಮಿಕರಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದೆ. ಇದನ್ನು ಯಾರೋ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದಾರೆ. ಈ ವಿಷಯ ಪೊಲೀಸರ ಕಣ್ಣು,ಕಿವಿಗೆ ಬಿದ್ದ ಮೇಲೆ ಅವರು ಮೂವರು ಪುಂಡರನ್ನು ಠಾಣೆಗೆ ಕರೆದೊಯ್ದು ಬಿಸಿ ಮುಟ್ಟಿಸಿದ್ದಾರೆ.

Trending videos

Back to Top