CONNECT WITH US  

ಐಫೋನ್‌ಗಾಗಿ 20 ಜನರ ಜೊತೆ ಕಿಲಾಡಿ ಹೆಣ್ಣಿನ ಲವ್‌!

ಐಫೋನ್‌! ಅಂದ್ರೆ ಎಲ್ರೂ ಕಣ್ಣರಳಿಸಿ ನೋಡ್ತಾರೆ. ಆದ್ರೆ ಆ ಫೋನ್‌ ಖರೀದಿ ಅಂದ್ರೆ ಮನೆ ಮಠ ಮಾರೋ ಪರಿಸ್ಥಿತಿ. ಅಷ್ಟೊಂದು ದುಬಾರಿ. ಆದ್ರೆ ಚೀನಾದ ಜಗತ್‌ ಕಿಲಾಡಿ ಯುವತಿ ಕ್ಸಿಯೋಲಿ ಎಂಬಾಕೆ ಐಫೋನ್‌ 7 ಖರೀದಿಗೆ ಮಾಡಿದ ಐಡಿಯಾ ಏನೆಂದರೆ 20 ಬಾಯ್‌ಫ್ರೆಂಡ್‌ಗಳನ್ನು ಸಂಪಾದಿಸಿ ಅವರಿಂದ ತಲಾ ಒಂದೊಂದು ಐಫೋನ್‌ 7 ಗಿಫ್ಟ್ ಪಡೆಯುವುದು. ಇಷ್ಟಕ್ಕೂ ಫೋನ್‌ ಸಿಕ್ಕಿದ ಬಳಿಕ ಆಕೆ ಸುಮ್ಮನೇ ಕೂರಲಿಲ್ಲ. ಅವುಗಳನ್ನೆಲ್ಲ ಆಕೆ ಸುಮಾರು 12 ಲಕ್ಷ ರೂ.ಗೆ ವೆಬ್‌ಸೈಟಲ್ಲಿ ಮಾರಾಟ ಮಾಡಿ ಮನೆ ಖರೀದಿಗೆ ಮುಂಗಡ ಹಣ ಪಾವತಿ ಮಾಡಿದ್ದಾಳೆ.! ಅಲ್ಲಿಗೆ ಗಿಫ್ಟ್ ಕೊಟ್ಟ ಬಾಯ್‌ಫ್ರೆಂಡ್‌ಗಳ ಕೈಗೆ ಚಿಪ್ಪು ಕೊಟ್ಟಿದ್ದಾಳೆ. ಕ್ಸಿಯೋಲಿ ಅಷ್ಟೇನೂ ಸ್ಥಿತಿವಂತರಲ್ಲದ ಕುಟುಂಬದಿಂದ ಬಂದಿದ್ದು, ನೆಲೆ ಕಂಡುಕೊಳ್ಳುವುದು ಅಗತ್ಯವಾಗಿತ್ತಂತೆ. ಇದಕ್ಕಾಗಿ ಬಾಯ್‌ಫ್ರೆಂಡ್‌, ಐಫೋನ್‌ ಕೊನೆಗೆ ಮನೆ ಸಂಪಾದಿಸಿದ್ದಾಗಿ ಹೇಳಲಾಗಿದೆ. ಚೀನಾದಲ್ಲಿ ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸುದ್ದಿಯಾಗಿದೆ. ಫೋನ್‌ ಕೊಡಿಸಿದವರು ಇಂಗು ತಿಂದ ಮಂಗನಂತೆ ಆಗಿದ್ದಾರೆ.

Trending videos

Back to Top