CONNECT WITH US  

ಗೋಶಾಲೆಯಲ್ಲಿ ಸಂಗೀತ:ಹಾಲು ಉತ್ಪಾದನೆ ಹೆಚ್ಚಳ!

ಸಂಗೀತ ಕೇಳುವುದರಿಂದ ಮಾನವ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದಾದರೆ ಗೋವುಗಳ ಹೆಚ್ಚು ಹಾಲು ನೀಡಲು ಏಕೆ ಸಾಧ್ಯವಿಲ್ಲ ಎಂಬ ತರ್ಕವನ್ನಿಟ್ಟುಕೊಂಡು ರಾಜಸ್ಥಾನದ ಸಿಕಾರ್‌ ಜಿಲ್ಲೆಯ ಗೋಪಾಲ ಗೋಶಾಲೆಯಲ್ಲಿ 40,000 ರೂ.ಹಣ ವ್ಯಯಿಸಿ ಸಂಗೀತ ವ್ಯವಸ್ಥೆ ಅಳವಡಿಸಲಾಗಿದೆ.

 ಕಳೆದ6 ತಿಂಗಳಿಂದ ಸಂಗೀತ ವ್ಯವಸ್ಥೆ ಮತ್ತು ಧ್ವನಿವರ್ಧಕವನ್ನು ಬಳಸಿ ಪ್ರತಿದಿನ ಬೆಳಗ್ಗೆ 5:15 ರಿಂದ 8ರ ವರೆಗೆ ಮತ್ತು ಸಂಜೆ 4: 30 ರಿಂದ 7: 30ರ ವರೆಗೆ ಭಜನೆಯೂ ಸೇರಿ ಇತರ ಭಕ್ತಿಗೀತೆಗಳನ್ನು ಗೋವುಗಳಿಗೆ ಕೇಳಿಸಲಾಗುತ್ತಿದೆ. ಹೀಗೆ ಪ್ರತಿದಿನ ಸಂಗೀತ ಕೇಳುವುದರಿಂದ ಹಸುಗಳ ಹಾರ್ಮೋನ್‌ಗಳಲ್ಲಿ ಬದಲಾವಣೆಯಾಗಿ ಅವುಗಳು ಹೆಚ್ಚು ಹಾಲು ಕೊಡುತ್ತಿವೆ ಎಂಬ ನಂಬಿಕೆ ಈ ಗೋಶಾಲೆಯಆಡಳಿತ ಮಂಡಳಿಯದ್ದು. ಗೋವುಗಳು ಸಂಗೀತ ಕೇಳಲು ಆರಂಭಿಸಿದಾಗಿನಿಂದ ಆಶ್ವರ್ಯಕರ ರೀತಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದೆ ಎಂದು ಗೋಶಾಲೆಯ ಅಧ್ಯಕ್ಷ ದೌಲತ್‌ ರಾಮ್‌ ಗೋಯಲ್‌ ಹೇಳಿದ್ದಾರೆ. 

Trending videos

Back to Top