CONNECT WITH US  

ಎಸ್‌ಪಿ ಇಬ್ಭಾಗ: 2 ಚಕ್ರದ ಬದಲು ಇನ್ನು ಒಂದೇ ಚಕ್ರದ ಸೈಕಲ್‌ ಚಿಹ್ನೆ!

ಲಕ್ನೋ: ಸಮಾಜವಾದಿ ಪಕ್ಷದಲ್ಲಿ ಕುಟುಂಬ ರಾಜಕೀಯ ಕಲಹ ತಾರಕ್ಕೇರಿ ಪಕ್ಷ ಸಂಪೂರ್ಣ ಇಬ್ಭಾಗವಾಗಿದೆ. ಇದರಿಂದ ಪಕ್ಷದ ಅಧಿಕೃತ ಚುನಾವಣಾ ಚಿಹ್ನೆ "ಸೈಕಲ್‌'ಅನ್ನು ಹಂಚಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. "ಸಮಾಜವಾದಿ ಪಕ್ಷ್‌ ಬಾಪ್‌' ಎಂದು ಮುಲಾಯಂ ತಮ್ಮ ಪಕ್ಷಕ್ಕೆ ಹೆಸರಿಡಲಿದ್ದಾರೆ.

"ಸಮಾಜವಾದಿ ಪಕ್ಷ್‌ ಬೇಟಾ' ಎಂದು ಅಖೀಲೇಶ್‌ ತಮ್ಮ ಪಕ್ಷಕ್ಕೆ ಹೆಸರಿಡಲಿದ್ದಾರೆ. ಜೊತೆಗೆ ಇಬ್ಬರೂ ಒಂದೇ ಚಕ್ರದ ಸೈಕಲ್‌ (ಯುನಿಸೈಕಲ್‌) ಅನ್ನು ಪಕ್ಷದ ಚಿಹ್ನೆಯಾಗಿ  ಮಾಡಿಕೊಳ್ಳಲಿದ್ದಾರೆ. ಮತದಾರರು ಗುರುತಿಸಲು ಸುಲಭವಾಗುವಂತೆ ಇದರ ಬಣ್ಣ ಮತ್ತು ವಿನ್ಯಾಸ ಮಾತ್ರ ಬೇರೆ ಇರಲಿದೆ. ಶೀಘ್ರ ಅಪ್ಪ-ಮಗ ಪಕ್ಷವನ್ನು ವಿಭಾಗಿಸಿ, ಪ್ರತ್ಯೇಕ ನೋಂದಣಿ ಮಾಡಿಸಿಕೊಳ್ಳಲಿದ್ದಾರೆ ಎಂದು ಸುಳ್‌ ಸುದ್ದಿ ಮೂಲಗಳು ಹೇಳಿವೆ.

Trending videos

Back to Top