ಸಮುದ್ರದಾಳದಲ್ಲಿ ಭಾರತೀಯ ವರ ಸ್ಲೊವೇಕಿಯಾ ವಧು ವಿವಾಹ
Team Udayavani, Jan 27, 2017, 3:36 AM IST
ಸಾಹಸಪ್ರಿಯರಿಗೆ ಮದುವೆಯನ್ನೂ ಸಾಹಸಮಯವಾಗಿಯೇ ನೆರವೇರಿಸಿಕೊಳ್ಳುವ ತುಡಿತ ಹೆಚ್ಚು. ಕೇರಳದ
ಲ್ಲೊಂದು ಸಾಹಸಮಯ ಮದುವೆ ಗುರುವಾರ ನಡೆದಿದೆ. ಕೇರಳದ ಕೊವಲಂ ಬಾಂಡ್ ಸಫಾರಿ (ಸಮುದ್ರದಾಳದ ಸಾಹಸ ಧಾಮ) ಡೈವರ್ ನಿಕಿಲ್ ಪವಾರ್ ಸಮುದ್ರದಾಳದಲ್ಲಿ ಮದುವೆಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ಈತ ಕಡಲಿನಾಳದಲ್ಲಿ ಸ್ಲೊವೇಕಿಯಾದ ವಧು ಯೂನಿಕಾಳ ಕೈ ಹಿಡಿದಿದ್ದಾನೆ. ಸಮುದ್ರದಾಳದಲ್ಲಿ ವಿವಾಹವಾದರೂ ಇವರ ಈ ಅಚ್ಚಳಿಯದ ಸಮಾರಂಭ ಸುಮಾರು 1 ಗಂಟೆ ಕಾಲ ನಡೆಯಿತಂತೆ. ಸಮುದ್ರದಾಳದಲ್ಲೇ ಮದುವೆಗೆ ಬೇಕಾದ ವೇದಿಕೆ ನಿರ್ಮಿಸಲಾಗಿತ್ತಂತೆ. ವರ ಮತ್ತು ವಧು ಮದುವೆ ಉಡುಗೆ ತೊಟ್ಟು, ನೀರಿನಲ್ಲಿ ಮುಳುಗಲು ಬೇಕಿರುವ ಎಲ್ಲ ಉಪಕರಣಗಳನ್ನು ಅಳವಡಿಸಿಕೊಂಡು ಸಮುದ್ರದ ನೆಲಕ್ಕೆ ಇಳಿದು, ಉಂಗುರ ಬದಲಿಸಿಕೊಳ್ಳುವ ಮೂಲಕ ಮದುವೆಯಾಗಿದ್ದಾರೆ. ಕೊವಲಂ ಬಾಂಡ್ ಸಫಾರಿಯ ನಿರ್ವಾಹಕರಲ್ಲೊಬ್ಬರು ವಿವಾಹಕ್ಕೆ ಸಮುದ್ರದಡಿ ಸಹಕಾರ ನೀಡಿದ್ದಾರೆ. ಇದು ನನ್ನ ಕನಸು ನೆರವೇರಿದ ಕ್ಷಣ ಎಂದು ನಿಕಿಲ್ ಹರ್ಷ ವ್ಯಕ್ತಪಡಿಸಿದ್ದಾನೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ