ನಾಲಿಗೆಯಿಂದ ಫ್ಯಾನ್ ರೆಕ್ಕೆ ನಿಲ್ಲಿಸಿ ದಾಖಲೆ ಬರೆದ ಮಹಿಳೆ! Watch
Team Udayavani, Apr 4, 2017, 4:07 AM IST
ಚಿಕ್ಕವರಿದ್ದಾಗ ತಿರುಗುವ ಫ್ಯಾನ್ನಲ್ಲಿ ಬೆರಳಿರಿಸುವ ಹುಚ್ಚು ಸಾಹಸ ಮಾಡಿ ಗಾಯ ಮಾಡಿಕೊಂಡ ನೆನಪು ನಿಮಗಿರ ಬಹುದು. ಆದರೆ ಇಲ್ಲೊಬ್ಬ ಗಟ್ಟಿಗಿತ್ತಿ, ಜೋರಾಗಿ ತಿರುಗುವ ಫ್ಯಾನ್ನ ರೆಕ್ಕೆಗಳನ್ನು ತನ್ನ ನಾಲಿಗೆಯಲ್ಲಿ ನಿಲ್ಲಿಸುವ ಮೂಲಕ ದಾಖಲೆ ಮಾಡಿದ್ದಾಳೆ! ಮೂಲತಃ ಲಂಡನ್ನ, ಪ್ರಸ್ತುತ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವಾಸವಿರುವ ಝಿಯೋ ಎಲ್ಲಿಸ್ ಈ ದಾಖಲೆ ಮಾಡಿದಾಕೆ. ಇತ್ತೀಚೆಗೆ ನಡೆದ “ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಇಟಾಲಿಯನ್ ಶೋ’ನಲ್ಲಿ ಎಲ್ಲಿಸ್, ಜೋರಾಗಿ ತಿರುಗುವ ಫ್ಯಾನ್ನ ರೆಕ್ಕೆಗಳನ್ನು ಒಂದು ನಿಮಿಷದಲ್ಲಿ 32 ಬಾರಿ ತಡೆಯುವ ಮೂಲಕ ಗಿನ್ನಿಸ್ ದಾಖಲೆ ಪುಸ್ತಕದ ಪುಟ ಸೇರಿದರು. ಈಕೆ ಈ ಸಾಹಸ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಎಲ್ಲಿಸ್, 60 ಸೆಕೆಂಡು ಗಳಲ್ಲಿ 20 ಬಾರಿ ಫ್ಯಾನ್ನ ರೆಕ್ಕೆ ನಿಲ್ಲಿಸಿದ್ದಳು. ಆದರೆ ಈ ಬಾರಿ ಎಲ್ಲೆಸ್ಳ ಸಾಧನೆಯ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. ಈಕೆಯ ಪ್ರದರ್ಶನ ಮುಗಿದ ನಂತರ ಅಶ್ರಿಟಾ ಫುರ¾ನ್ ಎಂಬಾತ ನಿಮಿಷದಲ್ಲಿ 36 ಬಾರಿ ಫ್ಯಾನ್ ರೆಕ್ಕೆ ತಡೆಯುವ ಮೂಲಕ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡ.