ಟ್ರಂಪ್ ದುರಾಡಳಿತವನ್ನು ತೋರಲಿದೆ ಚಿನ್ನದ ಕಮೋಡ್!
Team Udayavani, May 7, 2017, 6:23 AM IST
ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿನ ಅಮೆರಿಕ ಸರ್ಕಾರ 100 ದಿನಗಳನ್ನು ಪೂರೈಸಿದರೂ ಅವರ ವಿರೋಧಿಗಳ ಸಂಖ್ಯೆಯೇನೂ ಕಡಿಮೆಯಾದಂತೆ ಕಾಣುತ್ತಿಲ್ಲ. ಟ್ರಂಪ್ ದುರಾಡಳಿತವನ್ನು ಜಗತ್ತಿಗೇ ತೋರಿಸುತ್ತೇವೆ ಎಂದು ಇಂಡಿಯಾನಾದ ಕಲಾವಿದರ ತಂಡ ತಯಾರಾಗಿದೆ. ಅದಕ್ಕಾಗಿಯೇ “ಟೇಕ್ ಎ ಟ್ರಂಪ್’ ಎಂದು ಬರೆಯಲಾಗಿ ರುವ ಚಿನ್ನದ ಬಣ್ಣದ ಕಮೋಡೊಂದನ್ನು ನಿರ್ಮಿಸಿದೆ. ಕಳೆದ ಶನಿವಾರ ಟ್ರಂಪ್ ಸರ್ಕಾರಕ್ಕೆ 100 ದಿನಗಳು ತುಂಬಿದ ಸಂದರ್ಭದಲ್ಲಿ ಅದನ್ನು ಪ್ರಥಮ ಬಾರಿಗೆ ಪ್ರದರ್ಶಿಸಿದರು.
ಕೇವಲ 1 ವಾರದಲ್ಲಿ ಇಂಡಿಯಾನಾದ ತುಂಬ ಈ ಕಮೋಡ್ ಗಳು ಕಾಣಿಸುತ್ತಿವೆ. ಅಲ್ಲದೇ ಕಿರೀಟಧಾರಿ ಹಂದಿಯೊಂದನ್ನು ಇದರ ಮೇಲೆ ಚಿತ್ರಿಸಲಾಗಿದೆ. ಇದನ್ನು ಜಾರ್ಜ್ ಆರ್ವೆಲ್ರ “ಅನಿಮಲ್ ಫಾರ್ಮ್’ ಪುಸ್ತಕದಿಂದ ಎರವಲು ಪಡೆಯಲಾಗಿದೆ ಎಂದು ತಂಡ ಹೇಳಿದೆ. ಚಿನ್ನದ ಬಣ್ಣದಲ್ಲೇ ಏಕೆ ಕಮೋಡ್ ನಿರ್ಮಿಸಿದ್ದು ಎಂದು ಪ್ರಶ್ನೆ ಕೇಳಿದರೆ ಈ ರೀತಿ ಉತ್ತರಿಸಿದ್ದಾರೆ. “ನಮ್ಮ ಅಧ್ಯಕ್ಷರು ಮಹಾನ್ ಚಿನ್ನದ ವ್ಯಾಮೋಹಿ, ಅವರ ಸುತ್ತಲೂ ಚಿನ್ನದ ವಸ್ತುಗಳೇ ಇರಬೇಕೆಂದು ಅವರು ಬಯಸುತ್ತಾರೆ’ ಎಂದಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ