CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಸಿವಾಯಿತೆಂದು ಮೆಕ್‌ ಡೊನಾಲ್ಡ್ಸ್ ಮುಂದೆ ಹೆಲಿಕಾಪ್ಟರ್‌ ಇಳಿಸಿದ

ಹಸಿವೆಯನ್ನು ಎಷ್ಟು ಹೊತ್ತು ಸಹಿಸಲು ಸಾಧ್ಯ? ಪಾಪ, ಹಸಿವಿಂದ ಕಂಗೆಟ್ಟ ಆಸ್ಟ್ರೇಲಿಯಾದ ಪೈಲಟ್‌ ಒಬ್ಬರು ಸಿಡ್ನಿಯ ಮೆಕ್‌ ಡೊನಾಲ್ಡ್ಸ್ ಮುಂದೆಯೇ ಹೆಲಿಕಾಪ್ಟರ್‌ ನಿಲ್ಲಿಸಿದ್ದಾನೆ. ತಮ್ಮ ಮನೆ ಬಳಿಯೇ ಹೆಲಿಕಾಪ್ಟರ್‌ ಇಳಿಯುತ್ತಿರುವುದನ್ನು ನೋಡಿ ಅಲ್ಲಿಯವರೆಲ್ಲ ಒಂದು ಕ್ಷಣ ಭೀತಿಗೊಂಡಿದ್ದಾರೆ.

ಕಾಪ್ಟರ್‌ನಿಂದ ಇಳಿದ ಪೈಲಟ್‌ ಸೀದಾ ಮೆಕ್‌ ಡೊನಾಲ್ಡ್ಸ್  ಒಳಗೆ ಹೋಗಿ ಆಹಾರ ಕೊಂಡು ಪುನಃ ಹೆಲಿಕಾಪ್ಟರ್‌ ಏರಿ ಹೋಗಿದ್ದಾನೆ. ಸ್ಥಳೀಯರು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರಿದ್ದಾರೆ. ಆದರೆ ಆ ಪೈಲಟ್‌ ಮೆಕ್‌ ಡಿ ವ್ಯವಸ್ಥಾಪಕರ ಅನುಮತಿ ಪಡೆದೇ ಹೆಲಿಕಾಪ್ಟರ್‌ ನಿಲುಗಡೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.

ಇಂದು ಹೆಚ್ಚು ಓದಿದ್ದು

Back to Top