CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

 ಪಾಕಿಸ್ತಾನದಲ್ಲಿ ಬಾಲಕಿಗೆ ಕಚ್ಚಿದ ನಾಯಿಗೆ ಗಲ್ಲು ಶಿಕ್ಷೆ

ದೇಶದೊಳಗೆ ಭಯೋತ್ಪಾದನೆಯನ್ನೇ ಹತ್ತಿಕ್ಕಲಾರದ ಪಾಕಿಸ್ತಾನದಲ್ಲಿ ಪಾಪದ ನಾಯಿಯೊಂದಕ್ಕೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಈ ವಿಲಕ್ಷಣ ಶಿಕ್ಷೆ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಪಾಕ್‌ನ ಪಂಜಾಬ್‌ ಪ್ರಾಂತ್ಯದಲ್ಲಿ ನಾಯಿಯೊಂದು ಬಾಲಕಿಯೊಬ್ಬಳಿಗೆ ಕಚ್ಚಿತ್ತು. ಬಾಲಕಿಯ ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿ, ಸಹಾಯಕ ಕಮಿಷನರ್‌ "ನಾಯಿ ಬಾಲಕಿಯನ್ನು ಗಾಯಗೊಳಿಸಿದೆ. ಅದಕ್ಕಾಗಿ ಅದನ್ನು ಕೊಲ್ಲಲೇಬೇಕು' ಎಂದು ಹೇಳಿ ನಾಯಿಗೆ ಗಲ್ಲು ಶಿಕ್ಷೆ ಘೋಷಿಸಿದರು.

ಅದಕ್ಕೂ ಮೊದಲು ಆ ನಾಯಿ ಒಂದು ವಾರಗಳ ಕಾಲ ಜೈಲು ಶಿಕ್ಷೆ ಅನುಭವಿಸಿತ್ತು. ಇತ್ತ ನಮ್ಮ ನಾಯಿಗೆ ಅನ್ಯಾಯ ಆಗುತ್ತಿದೆ ಎಂದು ನಾಯಿ ಮಾಲೀಕರು ಶಿಕ್ಷೆ ವಿರುದ್ಧ ಹೆಚ್ಚುವರಿ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಬಾಲಕಿಯ ಪೋಷಕರ ದೂರಿನಂತೆ ನಮ್ಮ ನಾಯಿ 1 ವಾರ ಜೈಲು ಶಿಕ್ಷೆ ಅನುಭವಿಸಿದೆ.

ನಮ್ಮ ನಾಯಿಯ ಗಲ್ಲು ಶಿಕ್ಷೆ ತಪ್ಪಿಸಲು ನಾನು ಎಂಥ ಕಾನೂನು ಹೋರಾಟಕ್ಕೂ ಸಿದ್ಧನಿದ್ದೇನೆ ಎಂದು ನಾಯಿ ಮಾಲೀಕರು ಹೇಳಿದ್ದಾರೆ.

ಇಂದು ಹೆಚ್ಚು ಓದಿದ್ದು

Back to Top