ಪಾಕಿಸ್ತಾನದಲ್ಲಿ ಬಾಲಕಿಗೆ ಕಚ್ಚಿದ ನಾಯಿಗೆ ಗಲ್ಲು ಶಿಕ್ಷೆ
Team Udayavani, May 18, 2017, 5:53 AM IST
ದೇಶದೊಳಗೆ ಭಯೋತ್ಪಾದನೆಯನ್ನೇ ಹತ್ತಿಕ್ಕಲಾರದ ಪಾಕಿಸ್ತಾನದಲ್ಲಿ ಪಾಪದ ನಾಯಿಯೊಂದಕ್ಕೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಈ ವಿಲಕ್ಷಣ ಶಿಕ್ಷೆ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಪಾಕ್‌ನ ಪಂಜಾಬ್ ಪ್ರಾಂತ್ಯದಲ್ಲಿ ನಾಯಿಯೊಂದು ಬಾಲಕಿಯೊಬ್ಬಳಿಗೆ ಕಚ್ಚಿತ್ತು. ಬಾಲಕಿಯ ಪೋಷಕರು ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿ, ಸಹಾಯಕ ಕಮಿಷನರ್ “ನಾಯಿ ಬಾಲಕಿಯನ್ನು ಗಾಯಗೊಳಿಸಿದೆ. ಅದಕ್ಕಾಗಿ ಅದನ್ನು ಕೊಲ್ಲಲೇಬೇಕು’ ಎಂದು ಹೇಳಿ ನಾಯಿಗೆ ಗಲ್ಲು ಶಿಕ್ಷೆ ಘೋಷಿಸಿದರು.
ಅದಕ್ಕೂ ಮೊದಲು ಆ ನಾಯಿ ಒಂದು ವಾರಗಳ ಕಾಲ ಜೈಲು ಶಿಕ್ಷೆ ಅನುಭವಿಸಿತ್ತು. ಇತ್ತ ನಮ್ಮ ನಾಯಿಗೆ ಅನ್ಯಾಯ ಆಗುತ್ತಿದೆ ಎಂದು ನಾಯಿ ಮಾಲೀಕರು ಶಿಕ್ಷೆ ವಿರುದ್ಧ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಬಾಲಕಿಯ ಪೋಷಕರ ದೂರಿನಂತೆ ನಮ್ಮ ನಾಯಿ 1 ವಾರ ಜೈಲು ಶಿಕ್ಷೆ ಅನುಭವಿಸಿದೆ.
ನಮ್ಮ ನಾಯಿಯ ಗಲ್ಲು ಶಿಕ್ಷೆ ತಪ್ಪಿಸಲು ನಾನು ಎಂಥ ಕಾನೂನು ಹೋರಾಟಕ್ಕೂ ಸಿದ್ಧನಿದ್ದೇನೆ ಎಂದು ನಾಯಿ ಮಾಲೀಕರು ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್ವೈ