CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಆರು ಮೈಲು ದೂರ ಹೋಗಲು 8 ಗಂಟೆ ಕಾರು ಓಡಿಸಿದ 83ರ ಅಜ್ಜಿ!

ವೃದ್ಧರು ತಮ್ಮ ಅಸಾಧಾರಣ ಸಾಮರ್ಥ್ಯ ತೋರಿ ವಯಸ್ಕರನ್ನೇ ತಬ್ಬಿಬ್ಬು ಮಾಡುವಂಥ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇಂಗ್ಲೆಂಡ್‌ನ‌ 83 ವರ್ಷ ವಯಸ್ಸಿನ ವೃದ್ಧೆಯೊಬ್ಬರು 480 ಕಿಲೋ ಮೀಟರ್‌ ಕಾರು ಓಡಿಸಿ ಎಲ್ಲರನ್ನು ಚಕಿತಗೊಳಿಸಿದ್ದಾರೆ.

ವೃದ್ಧೆ ವಲೇರಿಯೊ ಜಾನ್ಸನ್‌ ತಮ್ಮ ಮನೆಯಿಂದ ಕೇವಲ 6 ಮೈಲು ದೂರದಲ್ಲಿದ್ದ ಆಸ್ಪತ್ರೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಆದರೆ ರಸ್ತೆ ಕಾಮಗಾರಿ ಕೆಲಸಗಾರರು ಅವರಿಗೆ ರಸ್ತೆ ಕುರಿತು ತಪ್ಪು ಮಾಹಿತಿ ನೀಡಿದ ಕಾರಣ, ಅವರು ಬೇರೆ ರಸ್ತೆ ಹಿಡಿದರು. ಆ ಮಾರ್ಗವಾಗಿ ಅವರು 8 ಗಂಟೆ ಕಾರು ಓಡಿಸಿ 480 ಕಿಮೀ ಸಾಗಿ ಸ್ಕಾಟ್ಲೆಂಡ್‌ ತಲುಪಿದ್ದರು.

ಲಾರ್ಕ್‌ ಹಾಲ್‌ ಎಂಬಲ್ಲಿ ಕಾರಿನ ಇಂಧನ ಮುಗಿದ ಕಾರಣ ಕಾರು ನಿಲ್ಲಿಸಿದ್ದರು. ಇತ್ತ ತಾಯಿ ಇನ್ನೂ ಬಂದಿಲ್ಲವೆಂದು ಆತಂಕ ಗೊಂಡ ಮಗಳು ಪೊಲೀಸರಿಗೆ ದೂರು ನೀಡಿ ದ್ದು. ಲಾರ್ಕ್‌ ಹಾಲ್‌ನ ದಂಪತಿ ಅವರನ್ನು ತಮ್ಮ ಮನೆಯ ಲ್ಲಿಸಿಕೊಂಡು ಅವರ ಮಗಳು ಬರುವವರೆಗೂ ಆರೈಕೆ ಮಾಡಿದರು

Back to Top