CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವ್ಯಾಜ್ಯ ಬಗೆಹರಿಸಲಿರುವ ರೊಬೋಟ್‌ ವಕೀಲ

ಚೀನಾದ ಬೀಜಿಂಗ್‌ನಲ್ಲಿ ರೊಬೋಟ್‌ ಪತ್ರಕರ್ತ ತನ್ನ ಮೊದಲ ಲೇಖನವನ್ನು ಬರೆದು ಪ್ರಕಟಿಸಿದ ಸುದ್ದಿ ಇತ್ತೀಚೆಗಷ್ಟೇ ಕೇಳಿದ್ದೀರಿ. ಈಗ ರೊಬೋಟ್‌ ವಕೀಲ ಭೂಮಿ, ಕ್ರೆಡಿಟ್‌ ಕಾರ್ಡ್‌ಗಳ ವ್ಯಾಜ್ಯಗಳ ಕುರಿತು  ವಾದ ಮಂಡಿಸಲು ಸಜ್ಜಾಗುತ್ತಿದೆ. ಅದೂ 1 ರೂಪಾಯಿಯನ್ನೂ ಪಡೆಯದೇ! ಈ ರೊಬೋಟನ್ನು ಅಭಿವೃದ್ಧಿಪಡಿಸಿದ್ದು ಬ್ರಿಟನ್‌ ಮೂಲದ ಅಮೆರಿಕದ ಸ್ಟಾನ್‌ಫೋರ್ಡ್‌ ವಿದ್ಯಾರ್ಥಿ ಜೊಶುವಾ ಬ್ರೋವ್ದರ್‌ ಎಂಬುವವರು.

1,000ಕ್ಕೂ ಹೆಚ್ಚು ವಿವಾದಾತ್ಮಕ ಪ್ರದೇಶಗಳ ಕಾನೂನು ವ್ಯಾಜ್ಯದ ಕುರಿತು ಹೋರಾಡುವಂತೆ ಇದನ್ನು ಅಪ್‌ಗ್ರೇಡ್‌  ಮಾಡಲಾಗಿದೆ. ಇದು ಜಮೀನ್ದಾರರ ಭದ್ರತಾ ಠೇವಣಿ, ಮನೆ ರಿಪೇರಿ. ಕ್ರೆಡಿಟ್‌ ಕಾರ್ಡ್‌ ಏಜನ್ಸಿಗಳಿಂದಾದ ಮೋಸ ಪ್ರಕರಣಗಳಲ್ಲೂ ಸಹಾಯ ಮಾಡುತ್ತದೆಯಂತೆ. ಜಮೀನ್ದಾರರಿಂದ ಸಾಮಾನ್ಯರಿಗೆ ಬಹಳ ಮೋಸ ಉಂಟಾಗುತ್ತದೆ.

ನನ್ನ ರೊಬೋಟ್‌ ಹೇಗೆ ಸಹಕಾರಿಯಾಗಲಿದೆ ಎಂದು ತಿಳಿಯುವ ಕುತೂಹಲ ಇದೆ ಎನ್ನುತ್ತಾರೆ ಜೊಶುವಾ. ಇದರ ಸಹಾಯ ಪಡೆಯಬೇಕೆಂದರೆ ಗ್ರಾಹಕರು"ಡುನಾಟ್‌ಪೇ'ವೆಬ್‌ಸೈಟ್‌ನಲ್ಲಿ ತಮ್ಮ ಸಮಸ್ಯೆಗಳನ್ನು ಬರೆದರೆ ಆಯ್ತು.

Back to Top