ಹೆಂಡತಿಗಾಗಿ ಸೀರೆ ಕದ್ದ;ಸ್ಪರ್ಧೆ ವೇಳೆ ಸಿಕ್ಕಿಬಿದ್ದ!
Team Udayavani, Aug 1, 2017, 7:02 AM IST
ಹೆಂಡತಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸೋ ಆಸೆ. ಆದರೆ, ಅದಕ್ಕೆ ಬೇಕಾದ ಸೀರೆ ಇಲ್ಲ. ತಂದುಕೊಡಲು ಗಂಡನ ಬಳಿ ಸಾಕಷ್ಟು ಹಣವೂ ಇಲ್ಲ. ಆದರೂ ಹೆಂಡತಿ ಮೇಲಿನ ಪ್ರೀತಿ.. ಏನ್ಮಾಡೋದು? ಅಂತ ಚಿಂತೆ ಮಾಡ್ತಿದ್ದ ಗಂಡ ಇಳಿದಿದ್ದು ಕಳ್ಳತನಕ್ಕೆ!
ಛತ್ತೀಸ್ಗಢದ ಬಿಲಾಸ್ಪುರದಲ್ಲಿ ನಡೆದ ಘಟನೆಯಲ್ಲಿ ಪ್ರಮೀಳಾ ಗುಪ್ತಾ ಎಂಬಾಕೆ ಸ್ಥಳೀಯ ಸಾವನ್ ಸುಂದರಿ ಸ್ಪರ್ಧೆಯಲ್ಲಿ ಭಾಗಿಯಾಗಲು ಇಚ್ಛಿಸಿದ್ದು, ಆಕೆಯ ಗಂಡ ಅಧ್ಯಾಪಕ, ಶ್ರೀಕಂಠ ಗುಪ್ತಗೆ ಬೇಕಾದ ಸೀರೆ ತಂದುಕೊಡಲು ಸಾಧ್ಯವಾಗಿರಲಿಲ್ಲ. ಪರಿಣಾಮ ಆತ ಬಿಲಾಸ್ಪುರದ ಬಟ್ಟೆ ಅಂಗಡಿಗೆ ಕನ್ನ ಹಾಕಿದ್ದು, 56 ಸಾವಿರ ರೂ ಮೌಲ್ಯದ ಸೀರೆಗಳನ್ನು ಕದ್ದಿದ್ದಾನೆ. ಬಳಿಕ ಗಿಫ್ಟ್ ಎಂದು ಆಕೆಗೆ ಕೊಟ್ಟಿದ್ದಾನೆ. ಆಕೆ ಸೌಂದರ್ಯ ಸ್ಪರ್ಧೆಯಲ್ಲಿ ಅದನ್ನು ಉಟ್ಟು ಮಿಂಚಿದ್ದೇ ಮಿಂಚಿದ್ದು. ಆದರೆ ಕಾರ್ಯಕ್ರಮದಲ್ಲಿ ಕೂತ ಅಂಗಡಿಯ ವ್ಯಕ್ತಿಯೊಬ್ಬರಿಗೆ ತಮ್ಮ ಅಂಗಡಿಯಿಂದ ಕದ್ದು ತಂದ ಸೀರೆ ಎಂಬುದು ಅರಿವಾಗಿದೆ. ಬಳಿಕ ಪೊಲೀಸ್ ವಿಚಾರಣೆಯಲ್ಲಿ ಗಂಡನ ಪರಾಕ್ರಮ ಬಯಲಾಗಿದೆಯಂತೆ!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ