CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ರಾಖೀ ಹಬ್ಬಕ್ಕೆ ಸಹೋದರನಿಗೆ ಹೆಲ್ಮೆಟ್‌ ಕೊಟ್ಟ ಸಂಸದೆ!

ರಕ್ಷಾ ಬಂಧನ ಎಂದರೆ ಹೆಣ್ಣು ಮಕ್ಕಳಿಗೆ ವಿಶೇಷ ಸಂಭ್ರಮ. ಸಹೋದರರಿಗೆ ರಾಖೀ ಕಟ್ಟಿ ಅವರಿಂದ ಉಡುಗೊರೆ ಪಡೆಯುವ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿರುತ್ತಾರೆ.

ಸಹೋದರ ಸಹೋದರಿಯರ ಅನುಬಂಧ ಮತ್ತು ರಕ್ಷಾ ಬಂಧನವನ್ನೇ ನೆಪವಾಗಿಸಿಕೊಂಡು ಒಂದು ರಸ್ತೆ ಸುರಕ್ಷತಾ ಅಭಿಯಾನ ನಡೆಸಿದರೆ ಹೇಗಿರುತ್ತದೆ? ಈ ರೀತಿ ಯೋಜನೆ ಮಾಡಿ ಅದರಲ್ಲಿ ಸಫ‌ಲವಾಗಿರುವವರು ತೆಲಂಗಾಣದ ಟಿಆರ್‌ಎಸ್‌ ಸಂಸದೆ ಕೆ. ಕವಿತಾ. ಅವರು ಸಹೋದರ, ತೆಲಂಗಾಣ ಕೈಗಾರಿಕೆ ಮಾಹಿತಿ ತಂತ್ರಜ್ಞಾನ ಸಚಿವ ಟಿ. ರಾಮರಾವ್‌ಗೆ ರಾಖೀ ಕಟ್ಟಿ ಒಂದು ಹೆಲ್ಮೆಟ್‌ ಅನ್ನು ಉಡುಗೊರೆ ನೀಡಿದ್ದಾರೆ. ಅಲ್ಲದೇ "ಎಲ್ಲರೂ ನಿಮ್ಮ ಸಹೋದರರಿಗೆ ಈ ರಕ್ಷಾ ಬಂಧನದಂದು ಹೆಲ್ಮೆಟ್‌ ಉಡುಗೊರೆ ನೀಡಿ' ಎಂದು ಕರೆ ನೀಡಿದ್ದಾರೆ.

ರಸ್ತೆ ಸುರಕ್ಷತೆ ಜಾಗೃತಿ ಮೂಡಿಸಲು ಅವರು ಆಯ್ದುಕೊಂಡ ಮಾರ್ಗ ಇದು. ಈ ಅಭಿಯಾನಕ್ಕೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗಿದೆ. ಅಲ್ಲದೇ ಕರ್ನಾಟಕ ಮತ್ತು ಒಡಿಶಾ ಸಿಎಂಗಳು ಕೂಡ ಕವಿತಾರ ಈ ಕೆಲಸವನ್ನು ಶ್ಲಾ ಸಿದ್ದಾರೆ.

Back to Top