CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಐರಿಶ್‌ ರಾಜನಾಗಿ ಮೇಕೆಗೆ ಪಟ್ಟಾಭಿಷೇಕ!

ಐರಿಶ್‌ನ ಪುಟ್ಟ ಪಟ್ಟಣವೊಂದರ ರಾಜನಾಗಿ ಕಾಡು ಮೇಕೆಯೊಂದು ಅಧಿಕಾರ ಸ್ವೀಕರಿಸಿತು. ಮೇಲಿನ ಸಾಲನ್ನು ಓದಿದರೆ, ಸುದ್ದಿಯಲ್ಲಿ ಏನೋ ಮಿಸ್‌ ಹೊಡಿತಾ ಇದೆಯಲ್ಲಾ ಅಂತಾ ನಿಮಗನ್ನಿಸಬಹುದು.  ಕಿಲ್ಲೋರ್ಗಿಂಗ್‌ ಪ್ಲಕ್‌ ಎಂಬ ಪಟ್ಟಣದಲ್ಲಿ ಮೇಕೆಯೊಂದಕ್ಕೆ ಪಟ್ಟಾಭಿಷೇಕ ಮಾಡಲಾಗಿದೆ. ಇನ್ನು ಮುಂದೆ ಈ ಮೇಕೆಯೇ ರಾಜ್ಯಭಾರ ಮಾಡಲಿದೆ ಎಂದು ನೀವು ಭಾವಿಸುವಂತಿಲ್ಲ. ಪಟ್ಟಣದ ಬಹುಕಾಲದ ಆಚರಣೆಯಂತೆ ಇದು ನಡೆದಿದೆ.

ವಾರದ ಮಟ್ಟಿಗೆ ಮೇಕೆ ರಾಜನಾಗಿರಲಿದ್ದು, ಸ್ವತಃ ರಾಣಿಯೇ ಇದಕ್ಕೆ ಪಟ್ಟಾಭಿಷೇಕ ಮಾಡಿದ್ದಾಳೆ. ಪಟ್ಟಣದ ತುಂಬಾ ಮೆರವಣಿಗೆ, ಸಿಂಹಾಸನ ಏರುವ ಭಾಗ್ಯವೂ ಈ ಮೇಕೆಗೆ ಒಲಿದಿದೆ. ಆದರೆ ಇದೆಲ್ಲದರಿಂದ ಗಾಬರಿಗೊಂಡ ಮೇಕೆ ಕರ್ಕಶವಾಗಿ ಚೀರಾಡುತ್ತಿದೆಯಂತೆ.

Back to Top