CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

2 ವರ್ಷದಲ್ಲಿ 11 ಪುರುಷರ ವರಿಸಿದ ಕಿಲಾಡಿ ಲೇಡಿ!

ಥಾಯ್ಲೆಂಡ್‌ನ‌ ಈ ಕಿಲಾಡಿ ಯುವತಿ ಮದುವೆಯಾಗಿರುವ ಪುರುಷರ ಸಂಖ್ಯೆ ಡಜನ್‌ಗೆ ಒಂದು ಕಮ್ಮಿ. ಅಂದರೆ ಹನ್ನೊಂದು! ಇಷ್ಟು ಜನರನ್ನು ವಿವಾಹವಾಗಲು ಈಕೆ ತೆಗೆದುಕೊಂಡ ಅವಧಿ ಕೇವಲ 2 ವರ್ಷ. ಅದರಲ್ಲೂ ಮೊನ್ನೆ ಆಗಸ್ಟ್‌ ತಿಂಗಳೊಂದರಲ್ಲೇ ಈ ಗಟ್ಟಿಗಿತ್ತಿ ನಾಲ್ಕು ಬಾರಿ ಮದುವೆಯಾಗಿದ್ದಾಳೆ. ಅಂದರೆ ವಾರಕ್ಕೊಂದು! ಅಲಲಾ... ಈಕೆಗೆ ಮದುವೆಯಾಗೋ ಚಟವಾ? ಚಟ ಇದೆ. ಆದರೆ ಮದ್ವೆ ಆಗೋದಲ್ಲ, ದುಡ್ಡು ಮಾಡೋದು. 

ಥಾಯ್‌ ಸಂಪ್ರದಾಯದಂತೆ ಈಕೆ ಒಬ್ಬೊಬ್ಬ ಪತಿಯಿಂದಲೂ 4 ಲಕ್ಷದಿಂದ 20 ಲಕ್ಷ ರೂ.ವರೆಗೆ ವಧುದಕ್ಷಿಣೆ ಪಡೆದಿದ್ದಾಳೆ. ವಧುದಕ್ಷಿಣೆ ಹಣ ಕೈ ಸೇರಿದ ಮರು ಕ್ಷಣವೇ ಕಾಣದಂತೆ ಮಾಯವಾಗಿದ್ದಾಳೆ. ಹನ್ನೊಂದು ಮದುವೆಯಾದಾಗಲೂ ಇದೇ ಎಸ್ಕೇಪ್‌ ದಾರಿಯನ್ನು ಅನುಸರಿಸಿದ್ದಾಳೆ. ಅಂದಹಾಗೆ ಆ ಕಿಲಾಡಿ ಯುವತಿ ಹೆಸರು ಜರಿಯಾಪೋಬರ್ನ್ ಬುಯಾಯ್‌. ಈಗ ಪೊಲೀಸರ ಅತಿಥಿಯಾಗಿದ್ದಾಳೆ.

Back to Top