ನಾಯಿಯಂತೆ ಸಿಂಹವನ್ನು ಪೂಸಿ ಮಾಡಲಾದೀತೇ? ವೈರಲ್ ವಿಡಿಯೋ ನೋಡಿ
Team Udayavani, Oct 1, 2017, 5:09 AM IST
ಮನೆ ನಾಯಿಯನ್ನು ಮೈ ಮೇಲೆ ಎಳೆದುಕೊಂಡು ಮಕ್ಕಳಿಗಿಂತ ಹೆಚ್ಚು ಮುದ್ದು ಮಾಡುವವರು ಇದ್ದಾರೆ. ಹಾಗೆಂದುಕೊಂಡು ಮೃಗಾಲಯದಲ್ಲಿರುವ ಸಿಂಹದ್ದೋ, ಹುಲಿಯದ್ದೋ ಬೆನ್ನು ಸವರಲು ಹೋದರೆ ಏನಾದೀತು?
ಅಂಥದ್ದೊಂದು ಎಡವಟ್ಟನ್ನು ವೇಲ್ಸ್ನ ರಗಿº ಆಟಗಾರ ಸ್ಕಾಟ್ ಬಾಲ್ಡ್ವಿನ್ ಮಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕದ ವೆಲ್ಟೆವರ್ಡೆನ್ ಗೇಮ್ ಲಾಡ್ಜ್ ಎಂಬ ಮೃಗಾಲಯಕ್ಕೆ ಬಾಲ್ಡ್ವಿನ್ ಮತ್ತು ಸಂಗಡಿಗರು ಭೇಟಿ ನೀಡಿದ್ದರು. ಎಲ್ಲಾ ಪ್ರಾಣಿಗಳನ್ನೂ ನೋಡಿಕೊಂಡು ಸಿಂಹ ಇರುವ ವಿಭಾಗಕ್ಕೆ ಅವರೆಲ್ಲ ಬಂದರು. ಅದೇ ಸಂದರ್ಭದಲ್ಲಿ ಹೆಣ್ಣು ಸಿಂಹವನ್ನು ಗಂಡು ಸಿಂಹ ಆತ್ಮೀಯತೆಯಿಂದ ನೆಕ್ಕುತ್ತಿತ್ತು. ಅದನ್ನು ನೋಡಿದ ಸ್ಕಾಟ್ಗೆ ಏನನ್ನಿಸಿತೋ ಏನೋ ಅವರು ಸಿಂಹದ ಬೆನ್ನನ್ನು ನೇವರಿಸಲು ಆರಂಭಿಸಿದ್ದೇ ತಡ ರೊಚ್ಚಿಗೆದ್ದ ಅದು ಕೈ ಕಚ್ಚಲು ಮುಂದಾಯಿತು. ಭಾರಿ ಅಪಾಯ ತಪ್ಪಿದರೂ, ಕೈಗೆರಡು ಹೊಲಿಗೆ ತಪ್ಪಲಿಲ್ಲ. ಇದರಿಂದಾಗಿ ಅವರು ಪಂದ್ಯದಲ್ಲಿ ಆಡುವ ಅವಕಾಶ ಕಳಕೊಂಡರು. ಈ ದೃಶ್ಯವನ್ನು ಮೊಬೈಲಲ್ಲಿ ಶೂಟ್ ಮಾಡಲಾಗಿತ್ತು. ಅವರು ಟ್ವಿಟರ್ನಲ್ಲಿ ಕ್ಷಮೆಯಾಚಿಸಿ ಆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದು ವೈರಲ್ ಆಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ