ಕಣ್ಣ ಗುಡ್ಡೆ ಮೇಲೆ ಟ್ಯಾಟೂ ಹಾಕಿಸಿ ಪೇಚಿಗೆ ಸಿಲುಕಿದಳು
Team Udayavani, Oct 4, 2017, 4:25 AM IST
ಮೈ ತುಂಬಾ ಟ್ಯಾಟೂ(ಅಚ್ಚೆ) ಹಾಕಿಸಿಕೊಂಡಿರುವ ಜನರನ್ನು ನೋಡಿದ್ದೇವೆ. ಈ ಹುಚ್ಚು ಎಷ್ಟಿದೆ ಎಂದರೆ ಕಣ್ಣು ಗುಡ್ಡೆಗೂ ಟ್ಯಾಟೂ ಹಾಕಿಸಿಕೊಳ್ಳುವ ಕಾಲ ಬಂದಿದೆ. ಹೀಗೆ ಕಣ್ಣು ಗುಡ್ಡೆಗೆ ಟ್ಯಾಟೂ ಹಾಕಿಸಿಕೊಂಡ ಕೆನಡಾದ ರೂಪದರ್ಶಿಯೊಬ್ಬಳು ಈಗ ಕಣ್ಣನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾಳೆ. ಇದಕ್ಕಾಗಿ ಮಾಡೆಲ್ ಕ್ಯಾಟ್ಟ್ ಗ್ಯಾಲಿಂಜರ್ ಮಾಜಿ ಬಾಯ್ಫ್ರೆಂಡ್ನನ್ನು ದೂಷಿಸಿದ್ದಾಳೆ.
ಆತ ನನ್ನ ಜೊತೆಯಲ್ಲಿರುವ ವರೆಗೂ ಕಣ್ಣಿನ ಒಳಗೆ ಟ್ಯಾಟೂ ಹಾಕುವುದಾಗಿ ಪೀಡಿಸಿದ. ಕಡೆಗೂ ಒಂದಿನ ನನ್ನನ್ನು ಒಪ್ಪಿಸಿ, ದೊಡ್ಡ ಸೂಜಿಯಲ್ಲಿ ನೀಲಿ ಇಂಕನ್ನು ಕಣ್ಣಗುಡ್ಡೆಗೆ ಚುಚ್ಚಿದ ಎಂದಿದ್ದಾಳೆ. ವೈದ್ಯರು ಆಕೆಗೆ ಅತಿ ಸೂಕ್ಷ್ಮ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದಾರೆ.