CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಆಸ್ಟ್ರೇಲಿಯಾದಲ್ಲಿ ಭಾರತದ ಮಂಚದ ಜಾಹೀರಾತು:ಜಾಲತಾಣಿಗರ ಕುಹಕ

ನಮ್ಮ ದೇಶದ ದೇಸಿ ಮಂಚ(ಚಾರ್‌ಪಾಯ್‌)ಗಳನ್ನು ನಾವು ಇಲ್ಲಿ ಕಾಣುವುದೇ ಅಪರೂಪವಾಗಿದೆ. ಅಂತಹದರಲ್ಲಿ ಆಸ್ಟ್ರೇಲಿಯಾದಲ್ಲಿ ಚಾರ್‌ಪಾಯ್‌ನ ಜಾಹೀರಾತೊಂದು ಈಗ ವೈರಲ್‌ ಆಗಿದೆ.

"ಸಾಂಪ್ರದಾಯಿಕ ಭಾರತೀಯ ಮಂಚ - ಚಾರ್‌ಪಯ್‌' ಎಂದು ಆರಂಭವಾಗುವ ಈ ಜಾಹೀರಾತಿನಲ್ಲಿ "100% ಆಸ್ಟ್ರೇಲಿಯ ಮೇಡ್‌' ಎಂಬ ಒಕ್ಕಣೆಯೂ ಇದೆ. ಇದನ್ನು ಡೇನಿಯಲ್‌ ಬ್ಲೂರ್‌ ಎಂಬುವವರು ಅಲ್ಲಿ ಮಾರುತ್ತಿದ್ದಾರೆ. ಅದೆಲ್ಲಾ ಸರಿ, ಈಗ ಜಾಲತಾಣಿಗರು ಈ ಮಂಚಗಳ ಬಗ್ಗೆ ತಲೆಕೆಡಿಸಿಕೊಂಡಿರುವ ಕಾರಣ ಈ ಮಂಚಗಳ ಬೆಲೆ. ಒಂದು ಮಂಚದ ಬೆಲೆ ಬರೋಬ್ಬರಿ 990 ಡಾಲರ್‌ಗಳು, ಅಂದರೆ 50,000 ರೂ..

ಭಾರತದಲ್ಲಿರುವ ಹಳೇ ವಸ್ತುಗಳನ್ನು ಆಸ್ಟ್ರೇಲಿಯಾದಲ್ಲಿ ಮಾರಿದರೆ ಭಾರತೀಯರು ಶ್ರೀಮಂತರಾಗಿ ಬಿಡುತ್ತಾರೆ ಎನ್ನುತ್ತಿದ್ದಾರೆ ಜಾಲತಾಣಿಗರು.

Back to Top