CONNECT WITH US  

ಜೀವನಪೂರ್ತಿ ಬಿಟ್ಟಿಮದ್ಯ ಪಡೆಯಲಿದ್ದಾರೆ ಚೀನೀಯರು!

ಜೀವನ ಪರ್ಯಾಂತ ಬಿಟ್ಟಿ ಮದ್ಯ ಕೊಡುತ್ತೇವೆ ಅಂತಈವರೆಗೂ ಯಾವುದಾದರೂ ಮದ್ಯದ ಕಂಪನಿ ಗ್ರಾಹಕರಿಗೆಆಫ‌ರ್‌ ನೀಡಿರುವುದನ್ನು ಎಲ್ಲಿಯಾದರೂ ಕೇಳಿದ್ದೀರಾ?

ಚೀನಾದ ಕ್ಸಿಯಾಂಗ್‌ ಬಾಯ್‌ ಮದ್ಯದ ಸಂಸ್ಥೆ ಈ ಆಫ‌ರ್‌ನೀಡಿದೆ. ಅದೂ ಕೂಡ "ಸಿಂಗಲ್ಸ್‌ ದಿನ'ದಂದು.ಪ್ರತಿವರ್ಷ ನ.11ರಂದು ಚೀನಾದಲ್ಲಿ ನಡೆಯುವಶಾಪಿಂಗ್‌ ಫೆಸ್ಟಿವಲ್‌ನ ಅಂಗವಾಗಿ ಸಂಸ್ಥೆ ಈ ಘೋಷಣೆ ಮಾಡಿದೆ. ಆಯ್ದ 99 ಜನರಿಗೆ 1.10 ಲಕ್ಷಕ್ಕೆ ಅಂದರೆ ಕಡಿಮೆ ಮೊತ್ತಕ್ಕೆ ಜೀವನಪೂರ್ತಿ "ಬೈಜಿಯು' ಎಂಬ ಮದ್ಯ ನೀಡಲಿದೆ.

30 ವರ್ಷಗಳ ಬಳಿಕ ಗ್ರಾಹಕರ ಹಣವನ್ನು ಮರುವಾಪತಿಸಲಿದೆ. ಇದನ್ನು "ಆಲಿಬಾಬಾ' ಮೂಲಕ ಗ್ರಾಹಕರಿಗೆ ತಲುಪಿಸುವುದಾಗಿ ಹೇಳಿದೆ. ಅದೃಷ್ಟವಂತ ಗ್ರಾಹಕರು ಪ್ರತಿ ತಿಂಗಳು 12 ಪೆಟ್ಟಿಗೆ ಮದ್ಯವನ್ನು ಪಡೆಯುತ್ತಾರೆ. ಪ್ರತಿ ಪೆಟ್ಟಿಗೆಯಲ್ಲೂ 12 ಬಾಟಲಿ 45 ಡಿಗ್ರಿ ಮದ್ಯ ಇರುತ್ತದೆ. "ಎಲ್ಲಾ ಸರಿ, ಈ ಮದ್ಯದ ಕಂಪನಿ ಎಷ್ಟು ದಿನ ಇರುತ್ತದೆ ಎಂಬುದೇ ನಮ್ಮ ಕಾಳಜಿ' ಎಂದು ಜಾಲತಾಣಿಗರು ಹಾಸ್ಯ ಮಾಡಿದ್ದಾರೆ.

Back to Top