CONNECT WITH US  

ಟಿಪ್ಪು ಜಯಂತಿ ಆಚರಣೆ. ಜನರೇನಂತಾರೆ?

ಮಧುಕೃಷ್ಣ
ಟಿಪ್ಪು ಜಯಂತಿ ಆಚರಿಸುವುದು ಹೇಗಿದೆಯೆಂದರೆ ಯಹೂದಿಗಳೆಲ್ಲ ಸೇರಿ ಹಿಟ್ಲರ್‌ನ ಜಯಂತಿ ಆಚರಿಸಿದಂತೆ. ನಿಜಕ್ಕೂ ಭಾರತ ಬುದ್ಧಿವಂತ ರಾಷ್ಟ್ರವಲ್ಲ! 

 ಆರ್‌ವೈದ್ಯ
ಕೇರಳದ ಗಣಿತ ಅಧ್ಯಯನ ಕೇಂದ್ರವನ್ನು ಕ್ರೂರ ಟಿಪ್ಪು ಸುಲ್ತಾನ್‌ ನಾಶ ಮಾಡಿದ ಎನ್ನುವ ವಿಷಯವನ್ನು ಬಹಳಷ್ಟು ಜನ ನೋಡುತ್ತಿಲ್ಲ. ನಮ್ಮ ವೈಜ್ಞಾನಿಕ ನಾಗರಿಕತೆಗಾದ ಅತಿದೊಡ್ಡ ಹಾನಿಯದು!! 

 ಐಆರ್‌ಹಬೀಬ್‌
18ನೇ ಶತಮಾನದ ಅನೇಕ ಆಡಳಿತಗಾರರಂತೆ ಟಿಪ್ಪು ಕೂಡ ಜಾತ್ಯತೀತನಾಗಿರಲಿಲ್ಲ. ಆತ ಜನರನ್ನು ತುಳಿದ ಎನ್ನುವುದು ಸರಿ, ಆದರೆ ಇವರೆಲ್ಲ ಹೇಳುತ್ತಿರುವಂತೆ ಆತ ಕೋಮುವಾದಿ ಮತಾಂಧನಾಗಿರಲಿಲ್ಲ. 

 ಬಾಗ್ರಿ
ಟಿಪ್ಪು ಸುಲ್ತಾನ ಜಾತ್ಯತೀತತೆಯ ಪ್ರತೀಕ ಎನ್ನುವುದಾದರೆ, ಹಿಂದೂಗಳು ಜಾತ್ಯತೀತತೆಯ ಪರಿಕಲ್ಪನೆಯನ್ನೇ ತಿರಸ್ಕರಿಸುವುದು 100 ಪ್ರತಿಶತ ಸರಿಯಾಗುತ್ತದೆ! 

 ಸಂಯುಕ್ತಾ ಬಸು 
ಟಿಪ್ಪು ಸುಲ್ತಾನನನ್ನು ದ್ವೇಷಿಸುತ್ತಿರುವ ಅನೇಕ ಹುಸಿರಾಷ್ಟ್ರಪ್ರೇಮಿಗಳಿಗೆ ಸರಿಯಾದ ಇತಿಹಾಸ ಜ್ಞಾನವಿಲ್ಲ. ಪ್ರತಿದಿನ ಬಿಜೆಪಿ ಒಂದಲ್ಲ ಒಂದು ವಿಷಯದ ಮೇಲೆ, ಒಬ್ಬಲ್ಲ ಒಬ್ಬ ವ್ಯಕ್ತಿಯ ಮೇಲೆ ದ್ವೇಷ ಹರಡಿ, ಅದರಿಂದ ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ.

ಸಂದೇಶ್‌
ಅಯೋಧ್ಯೆಯಲ್ಲಿ ಯೋಗಿ ಆದಿತ್ಯನಾಥ್‌ ದೀಪಾವಳಿ ಆಚರಿಸಿದರೆ ಅದು ತಪ್ಪು, ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಆಚರಿಸಿದರೆ ಅದಕ್ಕೆ ಜೈಕಾರ. ಅದು ಜಾತ್ಯತೀತತೆಯ ಗೆಲುವು. ಪ್ರಗತಿಪರರೇ ಏನು ನಿಮ್ಮ ಢೋಂಗಿತನ? 

 ಅಶೋಕ್‌ ದೀಕ್ಷಿತ್‌
235 ವರ್ಷದ ಹಿಂದೆ ಸತ್ತ ವ್ಯಕ್ತಿಯ ಬಗ್ಗೆ ಈಗೇಕೆ ಗದ್ದಲ? ದೇಶದಲ್ಲಿ ಎಷ್ಟೋ ಸಮಸ್ಯೆಗಳಿವೆ, ಅದನ್ನು ಬಿಟ್ಟು ಈ ರಾಜಕಾರಣಿಗಳು ಟಿಪ್ಪು ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. 

 ಅನಿತ್‌ ಘೋಷ್‌
ಕರ್ನಾಟಕದ ಮುಖ್ಯಮಂತ್ರಿಗಳೇ...ಭಾರತದ ಮೊದಲ ಸ್ವಾತಂತ್ರÂ ಹೋರಾಟಗಾರ ಮಂಗಲ್‌ ಪಾಂಡೆಯೇ ಹೊರತು ಟಿಪ್ಪು ಸುಲ್ತಾನನಲ್ಲ. ಇತಿಹಾಸವನ್ನು ತಿರುಚಲು ಪ್ರಯತ್ನಿಸಬೇಡಿ. ಸಾವಿರಾರು ಹಿಂದೂಗಳನ್ನು ಹತ್ಯೆಗೈದವನನ್ನು ವೈಭವೀಕರಿಸಬೇಡಿ. 

 ವಿನೀತ್‌
ಭಾರತದ ಜಾತ್ಯಾತೀತ ಸಿದ್ಧಾಂತ ಹೇಗಿದೆಯೆಂದರೆ, ಇದರ ಅಡಿಯಲ್ಲಿ ಮತಾಂಧರನ್ನು, ಕೊಲೆಗಡುಕರನ್ನು, ವಿದ್ರೋಹಿಗಳ ಇತಿಹಾಸವನ್ನು ವೈಭವೀಕರಿಸಲಾಗುತ್ತದೆ. ಇದೆಲ್ಲ ಕಾಂಗ್ರೆಸ್‌ ಪಕ್ಷದ ಕೊಡುಗೆ. 

ತುಮ್ನಾರ್‌ ಸಂಜೀವ್‌
ಟಿಪ್ಪು ಸುಲ್ತಾನ ಮತಾಂಧನಾಗಿದ್ದರೆ ಹಿಂದೂ ದೇವಾಲಯಗಳ ಜೀರ್ಣೋದ್ಧಾರಕ್ಕೆ ಅದೇಕೆ ಸಹಾಯ ಮಾಡುತ್ತಿದ್ದ? 

ಏಜೆಂಟ್‌ಎಸ್‌
ಕನ್ನಡದ ಭಾಷಾ ಹೋರಾಟಗಾರರು ಟಿಪ್ಪು ಜಯಂತಿ ಆಚರಣೆಯ ಬಗ್ಗೆ ಏಕೆ ಮೌನ ವಹಿಸಿದ್ದಾರೆ? ಆಡಳಿತಾವಧಿಯಲ್ಲಿ ಕನ್ನಡಕ್ಕೆ ನಿಷೇಧ ಹೇರಿದ ಏಕೈಕ ಆಡಳಿತಗಾರ ಟಿಪ್ಪು ಎನ್ನುವುದು ಅವರಿಗೆ ಗೊತ್ತಿಲ್ಲವೇನು?

ಪ್‌ರೊ ಭಟ್ನಾಗರ್‌
ಎಡಪಂಥೀಯರು ಮತ್ತು ಬಲಪಂಥೀಯರು ತಮ್ಮ ಕನ್ನಡಕಗಳನ್ನು ಬಿಚ್ಚಿಟ್ಟು ಇತಿಹಾಸವನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಆದರೆ ದುರದೃಷ್ಟವಶಾತ್‌ ಇತಿಹಾಸ ರಚನೆಯಲ್ಲೂ ಪೂರ್ವಗ್ರಹಗಳು ಬೆರೆತುಹೋಗಿವೆ!

ನೀವೂ ನಮಗೆಟ್ವೀಟ್‌ ಮಾಡಿ @UdayavaniNews

Trending videos

Back to Top